ರಿಷಬ್​ ಪಂತ್​ ಗರ್ಲ್​ಫ್ರೆಂಡ್​ ಸಖತ್​ ಹಾಟ್​, ಕ್ಯೂಟ್​..

ಭಾರತ ಕ್ರಿಕೆಟ್​ ತಂಡದ ವಿಕೆಟ್​ ಕೀಪರ್​-ಬ್ಯಾಟ್ಸ್​ಮನ್​ ರಿಷಬ್​ ಪಂತ್​ ಈ ಬಾರಿ ಐಪಿಎಲ್​ನಲ್ಲಿ ದೆಹಲಿ ಕ್ಯಾಪಿಟಲ್ಸ್​ ತಂಡವನ್ನು ಮುನ್ನಡೆಸಲಿದ್ದಾರೆ. ಪಂತ್​ಗೆ ಇದೊಂದು ವಿಶೇಷ ಸಂದರ್ಭ. ಯಾಕೆಂದರೆ 23ವರ್ಷದ ರಿಷಬ್​​ಗೆ ಇದು ಮೊದಲ ನಾಯಕತ್ವ. ಹಾಗಾಗಿ ಸಹಜವಾಗಿಯೇ ಎಕ್ಸೈಟ್​ ಆಗಿದ್ದಾರೆ. ದೆಹಲಿ ನಾನು ಹುಟ್ಟಿ-ಬೆಳೆದ ಊರು. ಇದೇ ತಂಡವನ್ನು ಮುನ್ನಡೆಸುವ ನನ್ನ ಕನಸು ನನಸಾಗಿದ್ದಕ್ಕೆ ಖುಷಿಯಾಗಿದೆ ಎಂದೂ ಹೇಳಿಕೊಂಡಿದ್ದಾರೆ.

  • TV9 Web Team
  • Published On - 15:56 PM, 1 Apr 2021
1/6
ಕ್ರಿಕೆಟ್​ನಲ್ಲಿ ಒಂದೊಂದೇ ಯಶಸ್ವಿ ಮೆಟ್ಟಿಲೇರುತ್ತಿರುವ ರಿಷಬ್​ ಪಂತ್​ ವೈಯಕ್ತಿಕ ಜೀವನದ ಬಗ್ಗೆಯೂ ಅಭಿಮಾನಿಗಳಿಗೆ ತುಂಬ ಕುತೂಹಲ ಇದೆ. ರಿಷಬ್​ ಇಶಾ ನೇಗಿಯವರನ್ನು ಪ್ರೀತಿಸುತ್ತಿರುವ ವಿಷಯ ಈಗಾಗಲೇ ಬಹಿರಂಗಗೊಂಡಿದ್ದು, ಸಾಮಾಜಿಕ ಜಾಲತಾಣಗಳಲ್ಲಿ ಇವರು ಹಲವು ಫೋಟೋಗಳನ್ನೂ ಶೇರ್​ ಮಾಡಿಕೊಂಡಿದ್ದಾರೆ. ಈ ಜೋಡಿ ತಮ್ಮ ಪ್ರೀತಿಯನ್ನು ಮೊದಲು ತಿಳಿಸಿದ್ದು 2019ರಲ್ಲಿ. ಇಶಾ ತಮ್ಮ ಪಾಲಿಗೆ ವಿಶೇಷ ವ್ಯಕ್ತಿ ಎಂಬುದನ್ನು ಪಂತ್ ಈಗಾಗಲೇ ಹೇಳಿಕೊಂಡಿದ್ದಾರೆ.
2/6
ಮೊಟ್ಟ ಮೊದಲಿಗೆ 2019ರ ಜನವರಿ 16ರಂದು ರಿಷಬ್​ ಪಂತ್​ ಈ ಫೋಟೋವನ್ನು ಇನ್​ಸ್ಟಾಗ್ರಾಂನಲ್ಲಿ ಶೇರ್​ ಮಾಡಿದ್ದರು. ನಾನು ಸಂತೋಷವಾಗಿರಲು ಕಾರಣಳಾದ ನಿನ್ನನ್ನು ಸದಾ ಸಂತೋಷವಾಗಿ ಇಡಬೇಕು ಎಂಬುದು ನನ್ನ ಇಚ್ಛೆ ಎಂದು ಕ್ಯಾಪ್ಷನ್ ಬರೆದಿದ್ದರು. ಹಾಗೇ, ಇಶಾ ನೇಗಿ ಕೂಡ ತಮ್ಮ ಇನ್​ಸ್ಟಾಗ್ರಾಂನಲ್ಲಿ ಇದೇ ಫೋಟೋ ಶೇರ್​ ಮಾಡಿಕೊಂಡು, ನೀನು ನನ್ನ ಹುಡುಗ, ನನ್ನ ಸೌಲ್​ಮೇಟ್​, ನನ್ನ ಬೆಸ್ಟ್ ಫ್ರೆಂಡ್​, ನನ್ನ ಜೀವನದ ಪ್ರೀತಿ ಎಂದು ಬರೆದುಕೊಂಡಿದ್ದರು. ಈ ಮೂಲಕ ತಾವಿಬ್ಬರೂ ಪ್ರೀತಿಸುತ್ತಿರುವುದನ್ನು ಸಾರ್ವಜನಿಕವಾಗಿ ಹೇಳಿಕೊಂಡಿದ್ದರು.
3/6
ಇಶಾ ನೇಗಿ ಉದ್ಯಮಿ..ಇಂಟೀರಿಯರ್​ ಡಿಸೈನರ್​ ಕೂಡ ಹೌದು. ಮೂಲತಃ ಉತ್ತರಾಖಂಡದ ಡೆಹ್ರಾಡೂನ್​ನವರು. ಇವರ ಕುಟುಂಬ ಉದ್ಯಮ ನಡೆಸುತ್ತಿದೆ. ಪ್ರಾಥಮಿಕ ಶಿಕ್ಷಣವನ್ನು ಡೆಹ್ರಾಡೂನ್​ನ ಜೀಸಸ್​ ಮತ್ತು ಮೇರಿ ಕಾನ್ವೆಂಟ್​ನಲ್ಲಿ ಪಡೆದಿದ್ದಾರೆ. ಅದಾದ ನಂತರ ದೆಹಲಿಯ ಅಮೈಟಿ ಯೂನಿವರ್ಸಿಟಿಯಲ್ಲಿ ಇಂಗ್ಲಿಷ್​ನಲ್ಲಿ ಸ್ನಾತಕೋತ್ತರ ಪದವಿ ಪಡೆದಿದ್ದಾರೆ. ಪಂತ್​ ಜತೆಗೆ ನಾನು ಡೇಟಿಂಗ್ ಮಾಡುತ್ತಿರುವ ವಿಷಯ ಬಹಿರಂಗ ಆಗುತ್ತಿದ್ದಂತೆ ನನ್ನನ್ನು ತುಂಬ ಜನ ಅವರಾಗೇ ಬಂದು ಮಾತಾಡಿಸುತ್ತಿದ್ದರು. ಕಾಲೇಜಿನಲ್ಲಿ ಕೂಡ ನನ್ನ ತರಗತಿಯನ್ನು ಹುಡುಕಿಕೊಂಡು ಬರುತ್ತಿದ್ದರು ಎಂದು ಇಶಾ ಹೇಳಿಕೊಂಡಿದ್ದಾರೆ.
4/6
ಇಶಾ ನೇಗಿ ತಾನು ಹೈಡ್ರೋಫೋಬಿಕ್ ಎಂದು ಹೇಳಿಕೊಂಡಿದ್ದಾರೆ. ಸ್ವಿಮ್ಮಿಂಗ್ ಫೂಲ್​ ಬಳಿ ನಿಂತ ಈ ಫೋಟೋವನ್ನು ಇನ್​ಸ್ಟಾಗ್ರಾಂನಲ್ಲಿ ಶೇರ್ ಮಾಡಿಕೊಂಡ ವೇಳೆ, ನನಗೆ ನೀರೆಂದರೆ ಭಯ. ಆದರೂ ಹೀಗೆ ಸ್ವಿಮ್ಮಿಂಗ್ ಫೂಲ್​ ಬಳಿ ನಿಂತು ಫೋಟೋ ತೆಗೆಸಿಕೊಳ್ಳಲು ಇಷ್ಟ ಎಂದು ಹೇಳಿಕೊಂಡಿದ್ದಾರೆ. ಇವರಿಬ್ಬರೂ ರಿಲೇಶನ್​ ಶಿಪ್​ನಲ್ಲಿ ಇರುವುದು ಗೊತ್ತಾದ ಬಳಿಕ ಅಭಿಮಾನಿಗಳು ಇವರಿಬ್ಬರ ಲವ್​ ಲೈಫ್​ ಬಗ್ಗೆಯೂ ಇಂಟರೆಸ್ಟ್ ತೋರಿಸುತ್ತಿದ್ದಾರೆ.
5/6
ಇಶಾ ನೇಗಿ ತಮ್ಮ ಇನ್​ಸ್ಟಾಗ್ರಾಂನಲ್ಲಿ ಸದಾ ಸಕ್ರಿಯರಾಗಿರುತ್ತಾರೆ. ತುಂಬ ಹಾಟ್, ಮಾಡರ್ನ್​ ಫೋಟೋಗಳನ್ನು ಶೇರ್ ಮಾಡಿಕೊಳ್ಳುತ್ತಿರುತ್ತಾರೆ.
6/6
ಇಶಾ ನೇಗಿಯವರು 2020ರ ಲಾಕ್​ಡೌನ್​ ವೇಳೆ ಈ ಫೋಟೋವನ್ನು ಶೇರ್ ಮಾಡಿಕೊಂಡಿದ್ದರು. ಒಳ್ಳೆಯ ನೆನಪುಗಳು ಎಂದಿಗೂ ಮಾಸುವುದಿಲ್ಲ ಎಂದು ಹೇಳಿದ್ದಲ್ಲದೆ, ಲಾಕ್​ಡೌನ್​ ಕಾರಣದಿಂದ ಇವರನ್ನೆಲ್ಲ ಮಿಸ್​ ಮಾಡಿಕೊಳ್ಳುತ್ತಿರುವುದಾಗಿ ಹೇಳಿಕೊಂಡಿದ್ದರು.