ಜಪಾನ್ ಹಿರೋಷಿಮಾದಲ್ಲಿ 400 ವರ್ಷ ಹಳೆಯ ಬೋನ್ಸಾಯ್ ಗಿಡವಿದೆ. ಇದನ್ನು ಯಮಕಿ ಪೈನ್ ಎಂದು ಕರೆಯಲಾಗುತ್ತದೆ. ವಾಸ್ತವವಾಗಿ, ಯಮಕಿ ಕುಟುಂಬದ 6 ತಲೆಮಾರುಗಳು
ಇದನ್ನು ಸುರಕ್ಷಿತವಾಗಿ ಕಾಪಾಡಿಕೊಂಡು ಬಂದಿದೆ. ನಂತರ ಇದನ್ನು ವಾಷಿಂಗ್ಟನ್ನ ನ್ಯಾಷನಲ್
ಬೋನ್ಸಾಯ್ ಮತ್ತು ಪೆನ್ಜಿಂಗ್ ವಸ್ತುಸಂಗ್ರಹಾಲಯಕ್ಕೆ ದಾನ ಮಾಡಲಾಯಿತು. ಈ ಗಿಡದ ವಿಶೇಷತೆಯೆಂದರೆ 1945 ರಲ್ಲಿ ಇದು ಹಿರೋಷಿಮಾ ಬಾಂಬ್ ದಾಳಿಯಿಂದ ಬದುಕುಳಿದಿತ್ತು.