Updated on: Dec 30, 2022 | 4:28 PM
ನಟಿ ಜಾನ್ವಿ ಕಪೂರ್ ಅವರು ಸ್ಟಾರ್ ಕಿಡ್ ಎಂಬ ಕಾರಣಕ್ಕೆ ಹಲವು ಆಫರ್ಗಳು ಅವರನ್ನು ಹುಡುಕಿಕೊಂಡು ಬರುತ್ತಿವೆ. ಆದರೆ, ಅವರಿಗೆ ಗೆಲುವು ಮಾತ್ರ ಸಿಗುತ್ತಿಲ್ಲ. ಮಾಡಿದ ಬಹುತೇಕ ಎಲ್ಲಾ ಚಿತ್ರಗಳು ಸೋತಿವೆ.
ಜಾನ್ವಿ ಕಪೂರ್ ನಟನೆಯ ‘ಮಿಲಿ’ ಸಿನಿಮಾ ಈಗ ಒಟಿಟಿ ಹಾದಿ ಹಿಡಿದಿದೆ. ಥಿಯೇಟರ್ನಲ್ಲಿ ಹೀನಾಯವಾಗಿ ಸೋತ ನಂತರ ಈ ಚಿತ್ರ ನೆಟ್ಫ್ಲಿಕ್ಸ್ನಲ್ಲಿ ಪ್ರಸಾರ ಕಾಣುತ್ತಿದೆ.
ಮಲಯಾಳಂನ ‘ಹೆಲನ್’ ಚಿತ್ರದ ರಿಮೇಕ್ ‘ಮಿಲಿ’. ಒಂದಷ್ಟು ಮಂದಿ ಮೂಲ ಭಾಷೆಯಲ್ಲಿ ಸಿನಿಮಾ ನೋಡಿದ್ದಾರೆ. ಹೀಗಾಗಿ, ‘ಮಿಲಿ’ ಬಗ್ಗೆ ಅಷ್ಟಾಗಿ ನಿರೀಕ್ಷೆ ಇಟ್ಟುಕೊಂಡಿಲ್ಲ. ಹೀಗಾಗಿ, ಒಟಿಟಿಯಲ್ಲಿ ಜನರು ಈ ಚಿತ್ರವನ್ನು ನೋಡುವುದು ಅನುಮಾನವೇ.
ಸದಾ ಹಾಟ್ ಬಟ್ಟೆ ಧರಿಸಿ ಗಮನ ಸೆಳೆಯುವ ಕೆಲಸವನ್ನು ಜಾನ್ವಿ ಕಪೂರ್ ಮಾಡುತ್ತಾರೆ. ಅವರ ಫೋಟೋಗೆ ಫ್ಯಾನ್ಸ್ ಬಗೆಬಗೆಯಲ್ಲಿ ಕಮೆಂಟ್ ಮಾಡುತ್ತಾರೆ.
ಜಾನ್ವಿ ಅವರು ಶ್ರೀದೇವಿ ಮಗಳು. ಈ ಕಾರಣಕ್ಕೆ ಅನೇಕರು ಜಾನ್ವಿಯನ್ನು ಅವರ ತಾಯಿಗೆ ಹೋಲಿಕೆ ಮಾಡುತ್ತಾರೆ. ಇದು ಜಾನ್ವಿಗೆ ಪ್ಲಸ್ ಹಾಗೂ ಮೈನಸ್ ಎರಡೂ ಹೌದು.