- Kannada News Photo gallery Jothe Jotheyali actor Anirudh visits Vaishno Devi temple with children mdn
ಮಕ್ಕಳ ಜೊತೆ ಜೊತೆಯಲಿ ಅನಿರುದ್ಧ ತೀರ್ಥಯಾತ್ರೆ; ವೈಷ್ಣೋ ದೇವಿ ಆಶೀರ್ವಾದ ಪಡೆದ ಕುಟುಂಬ
‘ಜೊತೆ ಜೊತೆಯಲಿ’ ಧಾರಾವಾಹಿ ನಟ ಅನಿರುದ್ಧ ಅವರು ಸಖತ್ ಬ್ಯುಸಿ ಆಗಿದ್ದಾರೆ. ಅದರ ನಡುವೆಯೂ ಅವರು ಕುಟುಂಬಕ್ಕೆ ಸಮಯ ನೀಡುತ್ತಾರೆ. ಇತ್ತೀಚೆಗೆ ಅವರು ವೈಷ್ಣೋ ದೇವಿ ಸನ್ನಿಧಿಗೆ ತೆರಳಿ ಆಶೀರ್ವಾದ ಪಡೆದುಕೊಂಡು ಬಂದಿದ್ದಾರೆ.
Updated on: Oct 09, 2021 | 1:57 PM

Jothe Jotheyali actor Anirudh visits Vaishno Devi temple with children

Jothe Jotheyali actor Anirudh visits Vaishno Devi temple with children

ಅನಿರುದ್ಧ ಅವರ ಮಕ್ಕಳು ಕೂಡ ಚೂಟಿಯಾಗಿದ್ದಾರೆ. ಡ್ಯಾನ್ಸ್ ಮತ್ತು ನಟನೆಯಲ್ಲಿ ಆಸಕ್ತಿ ಹೊಂದಿದ್ದಾರೆ. ಸೋಶಿಯಲ್ ಮೀಡಿಯಾದಲ್ಲಿ ಅವರ ಫೋಟೋ ಮತ್ತು ವಿಡಿಯೋಗಳು ಆಗಾಗ ವೈರಲ್ ಆಗುತ್ತವೆ.

ಜಮ್ಮು ಕಾಶ್ಮೀರದಲ್ಲಿ ವೈಷ್ಣೋ ದೇವಿ ದೇವಸ್ಥಾನ ಇದೆ. ಶೂಟಿಂಗ್ ನಡುವೆ ಬ್ರೇಕ್ ಪಡೆದುಕೊಂಡ ಅನಿರುದ್ಧ ಅವರು ಮಕ್ಕಳ ಜೊತೆ ಪ್ರಯಾಣ ಬೆಳೆಸಿದ್ದರು. ದೇವರ ಆಶೀರ್ವಾದ ಪಡೆದು ಮರಳಿದ್ದಾರೆ.

ಜೀ ಕನ್ನಡ ವಾಹಿನಿಯಲ್ಲಿ ಪ್ರಸಾರ ಆಗುತ್ತಿರುವ ‘ಜೊತೆ ಜೊತೆಯಲಿ’ ಸೀರಿಯಲ್ ಮೂಲಕ ಅನಿರುದ್ಧ ಅವರು ಹೆಚ್ಚಿನ ಸಂಖ್ಯೆಯ ಅಭಿಮಾನಿಗಳನ್ನು ಸಂಪಾದಿಸಿದ್ದಾರೆ. ಅವರ ನಟನೆಗೆ ಎಲ್ಲರಿಂದಲೂ ಮೆಚ್ಚುಗೆ ಕೇಳಿಬರುತ್ತಿದೆ.

ನಟನೆ ಮಾತ್ರವಲ್ಲದೇ ಸಾಮಾಜಿಕ ಕಳಕಳಿ ಕಾರಣದಿಂದಲೂ ಅನಿರುದ್ಧ ಅವರು ಆಗಾಗ ಗಮನ ಸೆಳೆಯುತ್ತಾರೆ. ಬೆಂಗಳೂರು ಸೇರಿದಂತೆ ಅನೇಕ ಊರುಗಳ ಸ್ವಚ್ಚತೆಗಾಗಿ ಅವರು ಸೋಶಿಯಲ್ ಮೀಡಿಯಾದಲ್ಲಿ ಅಭಿಯಾನ ಮಾಡುತ್ತಿದ್ದಾರೆ.



















