AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

ತಾಯಿಗಾಗಿ ಉಡುಪಿಗೆ ಬಂದ ಜೂ ಎನ್​ಟಿಆರ್, ಜೊತೆಯಾದ ರಿಷಬ್: ಇಲ್ಲಿವೆ ಚಿತ್ರಗಳು

Jr NTR: ತೆಲುಗಿನ ಖ್ಯಾತ ನಟ ಜೂ ಎನ್​ಟಿಆರ್ ಇಂದು ಕರ್ನಾಟಕಕ್ಕೆ ಆಗಮಿಸಿದ್ದರು, ಕುಂದಾಪುರ, ಉಡುಪಿ ಶ್ರೀ ಕೃಷ್ಣ ದೇವಾಲಯಗಳಿಗೆ ಭೇಟಿ ನೀಡಿದರು. ಅಂದಹಾಗೆ ಜೂ ಎನ್​ಟಿಆರ್ ಕರ್ನಾಟಕಕ್ಕೆ ಬಂದಿದ್ದು ತಮ್ಮ ತಾಯಿಯವರಿಗಾಗಿ. ಜೂ ಎನ್​ಟಿಆರ್ ಅವರ ತಾಯಿ ಕುಂದಾಪುರದವರು.

ಮಂಜುನಾಥ ಸಿ.
|

Updated on: Aug 31, 2024 | 6:08 PM

Share
ತೆಲುಗು ಚಿತ್ರರಂಗದ ಸೂಪರ್ ಸ್ಟಾರ್ ಆಗಿದ್ದ ಜೂ ಎನ್​ಟಿಆರ್, ‘ಆರ್​ಆರ್​ಆರ್’ ಸಿನಿಮಾದ ಬಳಿಕ ಪ್ಯಾನ್ ಇಂಡಿಯಾ ಸ್ಟಾರ್ ನಟರಾಗಿದ್ದಾರೆ. ಅವರನ್ನು ಹುಡುಕಿಕೊಂಡು ಹಾಲಿವುಡ್​ ಸಿನಿಮಾ ಅವಕಾಶ ಬಂದರೂ ಆಶ್ಚರ್ಯವಿಲ್ಲ.

1 / 6
ಸಿನಿಮಾಗಳಲ್ಲಿ ಬಹಳ ಬ್ಯುಸಿಯಾಗಿರುವ ನಟ ಜೂ ಎನ್​ಟಿಆರ್ ಇಂದು (ಆಗಸ್ಟ್ 31) ಕರ್ನಾಟಕಕ್ಕೆ ಭೇಟಿ ನೀಡಿದ್ದರು. ಯಾವುದೋ ಸಿನಿಮಾಕ್ಕಾಗಿ ಅವರು ಬಂದಿರಲಿಲ್ಲ, ಬದಲಿಗೆ ತಮ್ಮ ತಾಯಿ ಅವರಿಗಾಗಿ ಅವರು ಕರ್ನಾಟಕಕ್ಕೆ ಬಂದಿದ್ದರು.

2 / 6
ಜೂ ಎನ್​ಟಿಆರ್ ಅವರ ತಾಯಿ ಶಾಲಿನಿ ಅವರದ್ದು ಕುಂದಾಪುರ. ಜೂ ಎನ್​ಟಿಆರ್​ ಅವರಿಗೂ ಸಹ ಕುಂದಾಪುರವೆಂದರೆ ಬಹಳ ಪ್ರೀತಿ. ತಮ್ಮ ತಾಯಿಯಿಂದ ಕನ್ನಡ ಕಲಿತಿರುವ ಜೂ ಎನ್​ಟಿಆರ್ ಕನ್ನಡವನ್ನು ಸುಲಭವಾಗಿ ಮಾತನಾಡಬಲ್ಲರು.

3 / 6
ತಾಯಿಗೆ ಕುಂದಾಪುರ ನೋಡಬೇಕು, ಉಡುಪಿ ಕೃಷ್ಣನ ದರ್ಶನ ಮಾಡಬೇಕೆಂಬ ಆಸೆ ಇತ್ತಂತೆ ಇದೇ ಕಾರಣಕ್ಕೆ ಅವರು ತಾಯಿಯನ್ನು ಕರೆದುಕೊಂಡು ಕುಂದಾಪುರಕ್ಕೆ ಬಂದಿದ್ದರು. ಅಲ್ಲದೆ ಉಡುಪಿ ಶ್ರೀಕೃಷ್ಣನ ದರ್ಶನವನ್ನು ಸಹ ಮಾಡಿಸಿದ್ದಾರೆ.

4 / 6
ಜೂ ಎನ್​ಟಿಆರ್ ಕುಟುಂಬ, ರಿಷಬ್ ಶೆಟ್ಟಿ ಕುಟುಂಬ ಇನ್ನಿತರರು ಸೇರಿ ಉಡುಪಿ ಕೃಷ್ಣನ ದರ್ಶನ ಮಾಡಿದರು. ಆ ಬಳಿಕ ಎಲ್ಲರೂ ಸೇರಿ ಬಾಳೆ ಎಲೆಯಲ್ಲಿ ಊಟ ಮಾಡಿದ್ದಾರೆ. ಚಿತ್ರಗಳನ್ನು ಜೂ ಎನ್​ಟಿಆರ್, ರಿಷಬ್ ಶೆಟ್ಟಿ ಅವರುಗಳು ಸಾಮಾಜಿಕ ಜಾಲತಾಣದಲ್ಲಿ ಹಂಚಿಕೊಂಡಿದ್ದಾರೆ.

5 / 6
ಜೂ ಎನ್​ಟಿಆರ್ ಕುಂದಾಪುರಕ್ಕೆ ಆಗಮಿಸಿದ್ದಾಗ ಅವರನ್ನು ಮಂಗಳೂರು ವಿಮಾನ ನಿಲ್ದಾಣಕ್ಕೆ ಹೋಗಿ ನಟ ರಿಷಬ್ ಶೆಟ್ಟಿ ಸ್ವಾಗತಿಸಿದರು. ಪ್ರಶಾಂತ್ ನೀಲ್ ಸಹ ಈ ಸಮಯದಲ್ಲಿ ಜೂ ಎನ್​ಟಿಆರ್ ಜೊತೆಗಿದ್ದರು.

6 / 6