- Kannada News Photo gallery Kannada actress Shruthi and her daughter Gowri celebrate Raksha Bandhan in Dharmasthala Entertainment news in Kannada
ವೀರೇಂದ್ರ ಹೆಗ್ಗಡೆ ಅವರಿಗೆ ರಾಖಿ ಕಟ್ಟಿ ರಕ್ಷಾ ಬಂಧನ ಹಬ್ಬ ಆಚರಿಸಿದ ಹಿರಿಯ ನಟಿ ಶ್ರುತಿ
ಕನ್ನಡ ಚಿತ್ರರಂಗದ ಖ್ಯಾತ ನಟಿ ಶ್ರುತಿ ಅವರು ಈ ವರ್ಷ ಧರ್ಮಸ್ಥಳದಲ್ಲಿ ರಕ್ಷಾ ಬಂಧನ ಹಬ್ಬವನ್ನು ಸೆಲೆಬ್ರೇಟ್ ಮಾಡಿದ್ದಾರೆ. ಧರ್ಮಸ್ಥಳದ ಮಂಜುನಾಥ ಸ್ವಾಮಿ ದೇವಾಲಯದ ಧರ್ಮಾಧಿಕಾರಿ ವೀರೇಂದ್ರ ಹೆಗ್ಗಡೆ ಅವರಿಗೆ ಶ್ರುತಿ ರಾಖಿ ಕಟ್ಟಿದ್ದಾರೆ. ಅವರ ಜೊತೆ ಮಗಳು ಗೌರಿ ಕೂಡ ಹಾಜರಿದ್ದರು. ಈ ವಿಶೇಷ ಫೋಟೋಗಳು ಇಲ್ಲಿವೆ ನೋಡಿ..
Updated on: Aug 20, 2024 | 3:10 PM

ಹಿರಿಯ ಕಲಾವಿದೆ ಶ್ರುತಿ ಅವರು ಸಡಗರದಿಂದ ರಕ್ಷಾ ಬಂಧನ ಹಬ್ಬ ಆಚರಿಸಿದ್ದಾರೆ. ಈ ವರ್ಷದ ರಾಖಿ ಹಬ್ಬ ಅವರ ಪಾಲಿಗೆ ವಿಶೇಷವಾಗಿತ್ತು. ಯಾಕೆಂದರೆ, ಧರ್ಮಸ್ಥಳಕ್ಕೆ ತೆರಳಿ ಅವರು ರಕ್ಷಾ ಬಂಧನ ಸೆಲೆಬ್ರೇಟ್ ಮಾಡಿದ್ದಾರೆ.

ಧರ್ಮಸ್ಥಳದ ಧರ್ಮಾಧಿಕಾರಿ ವೀರೇಂದ್ರ ಹೆಗ್ಗಡೆ ಅವರಿಗೆ ಶ್ರುತಿ ಅವರು ರಾಖಿ ಕಟ್ಟಿದ್ದಾರೆ. ಆ ಸಂದರ್ಭದ ಕೆಲವು ಫೋಟೋಗಳನ್ನು ಅವರು ಸೋಶಿಯಲ್ ಮೀಡಿಯಾದಲ್ಲಿ ಹಂಚಿಕೊಂಡು ಮಾಹಿತಿ ತಿಳಿಸಿದ್ದಾರೆ.

‘ಶ್ರೀ ಕ್ಷೇತ್ರ ಧರ್ಮಸ್ಥಳದಲ್ಲಿ ದೇವರ ದರ್ಶನ ಹಾಗು ಪೂಜ್ಯರ ಆಶೀರ್ವಾದ ಪಡೆದು, ರಕ್ಷಾ ಬಂಧನದ ದಿನ ಅವರಿಗೆ ರಾಕೀ ಕಟ್ಟಿ ಆಶೀರ್ವಾದ ಪಡೆದ ನಾವು ಧನ್ಯ. ಶ್ರೀ ಮಂಜುನಾಥ ನಿಮ್ಮಲರಿಗೂ ಒಳ್ಳೆಯದು ಮಾಡಲಿ’ ಎಂದು ಶ್ರುತಿ ಪೋಸ್ಟ್ ಮಾಡಿದ್ದಾರೆ.

ಶ್ರುತಿ ಅವರು ವೀರೇಂದ್ರ ಹೆಗ್ಗಡೆ ಅವರ ಆಶೀರ್ವಾದ ಪಡೆದಿದ್ದಾರೆ. ಶ್ರುತಿ ಮಗಳು ಗೌರಿ ಕೂಡ ಈ ವೇಳೆ ಉಪಸ್ಥಿತರಿದ್ದರು. ‘ನೀವೇ ಅದೃಷ್ಟವಂತರು’ ಎಂದು ಅಭಿಮಾನಿಗಳು ಈ ಪೋಸ್ಟ್ಗೆ ಕಮೆಂಟ್ ಮಾಡಿದ್ದಾರೆ.

ಚಿತ್ರರಂಗದಲ್ಲಿ ಶ್ರುತಿ ಅವರು ಸಖತ್ ಬೇಡಿಕೆ ಹೊಂದಿದ್ದಾರೆ. ಪೋಷಕ ನಟಿಯಾಗಿ ಹಲವು ಸಿನಿಮಾಗಳಲ್ಲಿ ಅವರು ಅಭಿನಯಿಸುತ್ತಿದ್ದಾರೆ. ಸಿನಿಮಾ ಕೆಲಸದ ನಡುವೆ ಅವರು ಬಿಡುವು ಪಡೆದುಕೊಂಡು ಧರ್ಮಸ್ಥಳಕ್ಕೆ ತೆರಳಿದ್ದಾರೆ.




