Katrina Kaif Marriage Photos: ಕತ್ರಿನಾ ಕೈಫ್-ವಿಕ್ಕಿ ಕೌಶಲ್ ಮದುವೆ ಫೋಟೋ ಆಲ್ಬಂ; ಅದ್ದೂರಿಯಾಗಿ ನಡೆಯಿತು ಸೆಲೆಬ್ರಿಟಿ ವಿವಾಹ
Katrina Kaif Vicky Kaushal Wedding Photos: ರಾಜಸ್ಥಾನದ ಸಿಕ್ಸ್ ಸೆನ್ಸಸ್ ಫೋರ್ಟ್ ಹೋಟೆಲ್ನಲ್ಲಿ ಕತ್ರಿನಾ ಕೈಫ್ ಮತ್ತು ವಿಕ್ಕಿ ಕೌಶಲ್ ಮದುವೆ ನೆರವೇರಿದೆ. ಡಿ.9ರಂದು ಈ ಜೋಡಿ ಹಸೆಮಣೆ ಏರಿದೆ. ಮದುವೆ ಬಳಿಕ ಕತ್ರಿನಾ ಮತ್ತು ವಿಕ್ಕಿ ಕೌಶಲ್ ಅವರು ತಮ್ಮ ಸೋಶಿಯಲ್ ಮೀಡಿಯಾ ಖಾತೆಗಳ ಮೂಲಕ ಕೆಲವು ಫೋಟೋಗಳನ್ನು ಹಂಚಿಕೊಂಡಿದ್ದಾರೆ. ಅವು ಈಗ ಸಖತ್ ವೈರಲ್ ಆಗುತ್ತಿವೆ.
Updated on: Dec 10, 2021 | 7:38 AM

Bollywood celebrities wish Katrina Kaif and Vicky Kaushal after they shared marriage photos

Katrina Kaif and Vicky Kaushal marriage photos go viral on social media

ಯಾವುದೇ ಸಿನಿಮಾದಲ್ಲೂ ಕತ್ರಿನಾ ಕೈಫ್ ಮತ್ತು ವಿಕ್ಕಿ ಕೌಶಲ್ ಜೋಡಿಯಾಗಿ ನಟಿಸಿಲ್ಲ. ಒಂದೆರಡು ಕಾರ್ಯಕ್ರಮಗಳಲ್ಲಿ ಜೊತೆಯಾಗಿ ಕಾಣಿಸಿಕೊಂಡ ಬಳಿಕ ಅವರಿಬ್ಬರ ನಡುವೆ ಪ್ರೀತಿ ಚಿಗುರಿತ್ತು. ಅವರ ಪ್ರೀತಿಗೆ ಈಗ ಮದುವೆಯ ಮುದ್ರೆ ಬಿದ್ದಿದೆ.

ಕತ್ರಿನಾ ಕೈಫ್ ಮತ್ತು ವಿಕ್ಕಿ ಕೌಶಲ್ ನಡುವೆ ವಯಸ್ಸಿನ ಅಂತರ ಇದೆ. ಕತ್ರಿನಾಗೆ 38 ವರ್ಷ ವಯಸ್ಸು. ವಿಕ್ಕಿ ಕೌಶಲ್ಗೆ ಈಗಿನ್ನೂ 33ರ ಪ್ರಾಯ. ತಮಗಿಂತ 5 ವರ್ಷ ಕಿರಿಯ ವ್ಯಕ್ತಿ ಜೊತೆ ಕತ್ರಿನಾ ದಾಂಪತ್ಯ ಜೀವನ ಆರಂಭಿಸಿದ್ದಾರೆ.

ಬಾಲಿವುಡ್ನಲ್ಲಿ ಕತ್ರಿನಾ ಕೈಫ್ ಮತ್ತು ವಿಕ್ಕಿ ಕೌಶಲ್ ಅವರು ತಮ್ಮ ನೆಲೆ ಭದ್ರಪಡಿಸಿಕೊಂಡಿದ್ದಾರೆ. ಇಬ್ಬರ ಕೈಯಲ್ಲೂ ಒಳ್ಳೊಳ್ಳೆಯ ಆಫರ್ಗಳಿವೆ. ಇತ್ತೀಚೆಗೆ ತೆರೆಕಂಡ ‘ಸೂರ್ಯವಂಶಿ’ ಚಿತ್ರದಿಂದ ಕತ್ರಿನಾಗೆ ಮತ್ತೊಮ್ಮೆ ದೊಡ್ಡ ಗೆಲುವು ಸಿಕ್ಕಿದೆ.




