ಗೋವಾ ಸಿಎಂ ಪ್ರಮೋದ್​ ಸಾವಂತ್​ ಭೇಟಿ ಮಾಡಿದ ಯಶ್​-ರಾಧಿಕಾ ಪಂಡಿತ್​; ಮುಂದಿನ ಸಿನಿಮಾ ಬಗ್ಗೆ​ ಕುತೂಹಲ

ಪಣಜಿಯಲ್ಲಿ ಗೋವಾ ಮುಖ್ಯಮಂತ್ರಿ ಪ್ರಮೋದ್​ ಸಾವಂತ್​ ಅವರನ್ನು ಯಶ್​ ಹಾಗೂ ರಾಧಿಕಾ ಪಂಡಿತ್​ ಭೇಟಿ ಆಗಿದ್ದಾರೆ. ಈ ಸಂದರ್ಭದ ಫೋಟೋಗಳು ಸೋಶಿಯಲ್​ ಮೀಡಿಯಾದಲ್ಲಿ ವೈರಲ್​ ಆಗಿವೆ.

May 04, 2022 | 1:06 PM
TV9kannada Web Team

| Edited By: Madan Kumar

May 04, 2022 | 1:06 PM

ನಟ ಯಶ್​ ಅವರು ಈಗ ‘ಕೆಜಿಎಫ್​: ಚಾಪ್ಟರ್​ 2’ ಸಿನಿಮಾದ ಯಶಸ್ಸಿನ ಖುಷಿಯಲ್ಲಿದ್ದಾರೆ. ಸಿನಿಮಾ ಕೆಲಸಗಳಿಂದ ಬಿಡುವು ಮಾಡಿಕೊಂಡಿರುವ ಅವರು ಕುಟುಂಬದವರ ಜೊತೆ ಕಾಲ ಕಳೆಯುತ್ತಿದ್ದಾರೆ. ಪತ್ನಿ ರಾಧಿಕಾ ಪಂಡಿತ್​ ಜೊತೆ ಅವರು ಗೋವಾ ಮುಖ್ಯಮಂತ್ರಿ ಪ್ರಮೋದ್​ ಸಾವಂತ್​ ಅವರನ್ನು ಭೇಟಿ ಮಾಡಿದ್ದಾರೆ.

1 / 5
ಗೋವಾದ ಪಣಜಿಯಲ್ಲಿ ಮುಖ್ಯಮಂತ್ರಿ ಪ್ರಮೋದ್​ ಸಾವಂತ್​ ಅವರನ್ನು ಯಶ್​ ಹಾಗೂ ರಾಧಿಕಾ ಪಂಡಿತ್​ ಅವರು ಭೇಟಿ ಮಾಡಿರುವ ಫೋಟೋಗಳು ಸೋಶಿಯಲ್​ ಮೀಡಿಯಾದಲ್ಲಿ ವೈರಲ್​ ಆಗಿವೆ. ಈ ಭೇಟಿಯ ಉದ್ದೇಶ ಏನು ಎಂಬ ಬಗ್ಗೆ ಅಭಿಮಾನಿಗಳ ಮನದಲ್ಲಿ ಕೌತುಕ ಮೂಡಿದೆ.

2 / 5
‘ಕೆಜಿಎಫ್​ ಸಿನಿಮಾದ ಸೂಪರ್​ ಸ್ಟಾರ್​ ನಟ ಯಶ್​ ಹಾಗೂ ಅವರ ಪತ್ನಿ ರಾಧಿಕಾ ಪಂಡಿತ್​ ಅವರನ್ನು ಭೇಟಿಯಾಗಿದ್ದು ಖುಷಿ ನೀಡಿತು’ ಎಂಬ ಕ್ಯಾಪ್ಷನ್​ನೊಂದಿಗೆ ಗೋವಾ ಮುಖ್ಯಮಂತ್ರಿ ಪ್ರಮೋದ್​ ಸಾವಂತ್​ ಅವರು ಈ ಫೋಟೋಗಳನ್ನು ಹಂಚಿಕೊಂಡಿದ್ದಾರೆ. ಯಶ್​ ಫ್ಯಾನ್ಸ್​ ಈ ಫೋಟೋಗಳನ್ನು ಲೈಕ್​ ಮಾಡಿದ್ದಾರೆ.

3 / 5
ಈ ಭೇಟಿಯ ಸಂದರ್ಭದಲ್ಲಿ ಕೆವಿಎನ್​ ಪ್ರೊಡಕ್ಷನ್ಸ್​ ಸಂಸ್ಥೆಯ ವೆಂಕಟ್​ ಕೊಣಂಕಿ ಅವರು ಕೂಡ ಹಾಜರಿದ್ದರು. ಫೋಟೋದಲ್ಲಿ ಅವರನ್ನು ಗಮನಿಸಿದ ಅಭಿಮಾನಿಗಳ ಮನದಲ್ಲಿ ಪ್ರಶ್ನೆ ಮೂಡಿದೆ. ಯಶ್​ ಮುಂದಿನ ಸಿನಿಮಾಗೂ ಕೆವಿಎನ್​ ಪ್ರೊಡಕ್ಷನ್ಸ್​ ಸಂಸ್ಥೆಗೂ ಏನಾದರೂ ಲಿಂಕ್​ ಇದೆಯೇ ಎಂದು ಫ್ಯಾನ್ಸ್ ಕಮೆಂಟ್​ ಮಾಡುತ್ತಿದ್ದಾರೆ.

4 / 5
ವಿಶ್ವಾದ್ಯಂತ ಸಾವಿರ ಕೋಟಿ ರೂಪಾಯಿಗೂ ಅಧಿಕ ಕಲೆಕ್ಷನ್​ ಮಾಡುತ್ತ ‘ಕೆಜಿಎಫ್​: ಚಾಪ್ಟರ್​ 2’ ಸಿನಿಮಾ ಮುನ್ನುಗ್ಗುತ್ತಿದೆ. ಯಶ್ ನಟಿಸಲಿರುವ ಮುಂದಿನ ಸಿನಿಮಾ ಯಾವುದು ಎಂಬ ಬಗ್ಗೆ ಇನ್ನೂ ಅಧಿಕೃತ ಘೋಷಣೆ ಆಗಿಲ್ಲ.

5 / 5

Follow us on

Most Read Stories

Click on your DTH Provider to Add TV9 Kannada