Kiara Advani: ಸಾಂಗ್ ರಿಲೀಸ್ ಕಾರ್ಯಕ್ರಮಕ್ಕೆ ಸಖತ್ ಗ್ಲಾಮರಸ್ ಆಗಿ ಬಂದ ಕಿಯಾರಾ ಅಡ್ವಾಣಿ
‘ಸತ್ಯಪ್ರೇಮ್ ಕಿ ಕಥಾ’ ಚಿತ್ರದ ಸಾಂಗ್ ರಿಲೀಸ್ ಕಾರ್ಯಕ್ರಮ ಇತ್ತೀಚೆಗೆ ಮುಂಬೈನಲ್ಲಿ ನಡೆಯಿತು. ಈ ಕಾರ್ಯಕ್ರಮಕ್ಕೆ ಕಿಯಾರಾ ಅವರು ಸಖತ್ ಗ್ಲಾಮರಸ್ ಆಗಿ ಬಂದಿದ್ದರು.
Updated on: Jun 22, 2023 | 8:31 AM

ನಟಿ ಕಿಯಾರಾ ಅಡ್ವಾಣಿ ಅವರು ‘ಸತ್ಯಪ್ರೇಮ್ ಕಿ ಕಥಾ’ ಸಿನಿಮಾದಲ್ಲಿ ನಟಿಸುತ್ತಿದ್ದಾರೆ. ಈ ಸಿನಿಮಾ ರಿಲೀಸ್ಗೆ ರೆಡಿ ಇದೆ. ಈ ಚಿತ್ರದ ಸಾಂಗ್ ರಿಲೀಸ್ ಕಾರ್ಯಕ್ರಮ ಇತ್ತೀಚೆಗೆ ಮುಂಬೈನಲ್ಲಿ ನಡೆಯಿತು.

‘ಸತ್ಯಪ್ರೇಮ್ ಕಿ ಕಥಾ’ ಚಿತ್ರದಲ್ಲಿ ಕಾರ್ತಿಕ್ ಆರ್ಯನ್ಗೆ ಜೊತೆಯಾಗಿ ಕಿಯಾರಾ ನಟಿಸಿದ್ದಾರೆ. ‘ಭೂಲ್ ಭುಲಯ್ಯ 2’ ಬಳಿಕ ಈ ಜೋಡಿ ಮತ್ತೆ ಒಂದಾಗಿದೆ. ಈ ಕಾರಣಕ್ಕೆ ಚಿತ್ರದ ಮೇಲೆ ನಿರೀಕ್ಷೆ ಹೆಚ್ಚಿದೆ.

‘ಸತ್ಯಪ್ರೇಮ್ ಕಿ ಕಥಾ’ ಚಿತ್ರದ ಸಾಂಗ್ ರಿಲೀಸ್ ಕಾರ್ಯಕ್ರಮ ಇತ್ತೀಚೆಗೆ ಮುಂಬೈನಲ್ಲಿ ನಡೆಯಿತು. ಈ ಕಾರ್ಯಕ್ರಮಕ್ಕೆ ಕಿಯಾರಾ ಅವರು ಸಖತ್ ಗ್ಲಾಮರಸ್ ಆಗಿ ಬಂದಿದ್ದರು.

ಕಿಯಾರಾ ಅಡ್ವಾಣಿ ಅವರು ಸೋಶಿಯಲ್ ಮೀಡಿಯಾದಲ್ಲಿ ದೊಡ್ಡ ಹಿಂಬಾಲಕರನ್ನು ಹೊಂದಿದ್ದಾರೆ. ಅವರು ಆಗಾಗ ಫೋಟೋ ಶೇರ್ ಮಾಡಿಕೊಳ್ಳುತ್ತಾರೆ. ‘ಸತ್ಯಪ್ರೇಮ್ ಕಿ ಕಥಾ’ ಕಾರ್ಯಕ್ರಮದಲ್ಲಿ ತಮ್ಮ ಉಡುಗೆ ಹೇಗಿತ್ತು ಎಂಬುದನ್ನು ಫೋಟೋ ಮೂಲಕ ತೋರಿಸಿದ್ದಾರೆ.

ಕಿಯಾರಾ ಅವರು ಇತ್ತೀಚೆಗೆ ಸಿದ್ದಾರ್ಥ್ ಮಲ್ಹೋತ್ರಾ ಅವರನ್ನು ಮದುವೆ ಆದರು. ಇಬ್ಬರೂ ಹಾಯಾಗಿ ಸಂಸಾರ ನಡೆಸುತ್ತಿದ್ದಾರೆ. ಸೋಶಿಯಲ್ ಮೀಡಿಯಾದಲ್ಲಿ ಅವರು ಪತಿಯ ಜೊತೆಗಿನ ಫೋಟೋ ಶೇರ್ ಮಾಡಿಕೊಳ್ಳುತ್ತಾರೆ.




