Kiara Advani: ಬೇಬಿ ಬಂಪ್ನೊಂದಿಗೆ ಮೆಟ್ ಗಾಲಾ ರೆಡ್ ಕಾರ್ಪೆಟ್ನಲ್ಲಿ ಮಿಂಚಿದ ಕಿಯಾರಾ ಅಡ್ವಾಣಿ
Met Gala 2025: ಅಮೆರಿಕದ ನ್ಯೂಯಾರ್ಕ್ ನಗರದಲ್ಲಿ ‘ಮೆಟ್ ಗಾಲಾ 2025’ ನಡೆಯುತ್ತಿದೆ. ಇದಕ್ಕೆ ದೇಶ-ವಿದೇಶಗಳಿಂದ ಸೆಲೆಬ್ರಿಟಿಗಳು ಆಗಮಿಸುತ್ತಿದ್ದಾರೆ. ಭಾರತದ ಕೆಲವೇ ಕೆಲವು ಮಂದಿ ಇದರಲ್ಲಿ ಭಾಗಿ ಆಗಿ ಪೋಸ್ ಕೊಟ್ಟಿದ್ದಾರೆ. ಈ ಸಾಲಿನಲ್ಲಿ ಪ್ರೆಗ್ನೆಂಟ್ ನಟಿ ಕಿಯಾರಾ ಅಡ್ವಾಣಿ ಕೂಡ ಇದ್ದಾರೆ ಅನ್ನೋದು ವಿಶೇಷ.
Updated on: May 06, 2025 | 8:44 AM

ಮೆಟ್ ಗಾಲಾ 2025 ಫ್ಯಾಷನ್ ಹಬ್ಬದ ರಂಗು ಜೋರಾಗಿದೆ. ದೇಶ-ವಿದೇಶದ ಸೆಲೆಬ್ರಿಟಿಗಳು ಆಗಮಿಸಿ ಇಲ್ಲಿ ಪೋಸ್ ಕೊಡುತ್ತಿದ್ದಾರೆ. ಭಾರತದ ಅನೇಕ ಸೆಲೆಬ್ರಿಟಿಗಳಿಗೆ ಈ ಕೆಂಪು ಹಾಸಿನ ಮೇಲೆ ನಡೆಯಲು ಅವಕಾಶ ಸಿಕ್ಕಿದೆ. ಇದರಲ್ಲಿ ಕಿಯಾರಾ ಕೂಡ ಇದ್ದಾರೆ.

ಕಿಯಾರಾ ಅಡ್ವಾಣಿ ಹಾಗೂ ಸಿದ್ದಾರ್ಥ್ ಮಲ್ಹೋತ್ರ ವಿವಾಹ ಆಗಿದ್ದಾರೆ. ವಿವಾಹದ ಬಳಿಕ ಕೆಲ ವರ್ಷ ಇವರು ಸುತ್ತಾಟ ನಡೆಸಿದರು. ಈಗ ಕುಟುಂಬವನ್ನು ದೊಡ್ಡದು ಮಾಡಿಕೊಳ್ಳುವ ಪ್ಲ್ಯಾನ್ನಲ್ಲಿ ಇವರಿದ್ದಾರೆ. ಕಿಯಾರಾ ಶೀಘ್ರವೇ ಮಗುವಿಗೆ ಜನ್ಮ ನೀಡಲಿದ್ದಾರೆ.

ಕಿಯಾರಾ ಅವರು ತಮ್ಮ ಬೇಬಿ ಬಂಪ್ ಜೊತೆ ಮೆಟ್ ಗಾಲಾಗೆ ಆಗಮಿಸಿದ್ದಾರೆ. ಗರ್ಭಿಣಿ ಆಗಿಯೇ ಅವರು ಇಲ್ಲಿ ಪೋಸ್ ಕೊಟ್ಟಿದ್ದಾರೆ. ಈ ಮೂಲಕ ಅವರು ಅಪರೂಪದ ಕ್ಷಣಕ್ಕೆ ಸಾಕ್ಷಿ ಆದರು ಅನ್ನೋದು ವಿಶೇಷ. ಅವರ ಫೋಟೋಗೆ ಫ್ಯಾನ್ಸ್ ಕಡೆಯಿಂದ ಲೈಕ್ಸ್ ಸಿಕ್ಕಿದೆ.

ಮೆಟ್ ಗಲಾ ಪ್ರತಿ ವರ್ಷವೂ ನಡೆಯುತ್ತದೆ. ಇದೊಂದು ಫ್ಯಾಷನ್ ಹಬ್ಬ ಎಂದರೂ ತಪ್ಪಾಗಲಾರದರು. ಈ ಕಾರ್ಯಕ್ರಮ ನ್ಯೂಯಾರ್ಕ್ನ ಮೆಟ್ರೋಪಾಲಿಟನ್ ಮ್ಯೂಸಿಯಂ ಆಫ್ ಆರ್ಟ್ನಲ್ಲಿ ನಡೆಯುತ್ತಿದೆ. ಪ್ರತಿ ವರ್ಷ ಇಲ್ಲಿಗೆ ಚಿತ್ರ ವಿಚಿತ್ರ ಬಟ್ಟೆ ಧರಿಸಿ ಅನೇಕರು ಬರುತ್ತಾರೆ.

ಕಿಯಾರಾ ಅಡ್ವಾಣಿ ಅವರು ಕನ್ನಡದ ‘ಟಾಕ್ಸಿಕ್’ ಸಿನಿಮಾದಲ್ಲಿ ನಟಿಸಿದ್ದಾರೆ. ಈ ಚಿತ್ರಕ್ಕೆ ಯಶ್ ಹೀರೋ. ಅವರು ಪ್ರೆಗ್ನೆಂಟ್ ಆಗುವುದಕ್ಕೂ ಮೊದಲೇ ಸಿನಿಮಾದ ಶೂಟ್ನ ಪೂರ್ಣಗೊಳಿಸಿಕೊಂಡಿದ್ದಾರೆ ಅನ್ನೋದು ವಿಶೇಷ. ‘ವಾರ್ 2’ ಚಿತ್ರಕ್ಕೂ ಕಿಯಾರಾ ನಾಯಕಿ.

ಈ ಬಾರಿ ಶಾರುಖ್ ಖಾನ್ ಅವರು ಕೂಡ ಮೆಟ್ ಗಲಾದಲ್ಲಿ ಪೋಸ್ ಕೊಟ್ಟಿದ್ದಾರೆ. ಅವರು ಕತ್ತಿನಲ್ಲಿ ಹಾಕಿರೋ ಹಾರಗಳು ಸಾಕಷ್ಟು ಗಮನ ಸೆಳೆದಿದೆ. ಕತ್ತಿನ ಮೇಲೆ ‘K’ ಹೆಸರಿನ ಲಾಕೆಟ್ ಕೂಡ ಗಮನ ಸೆಳೆದಿದೆ ಅನ್ನೋದು ವಿಶೇಷ.




