AQI
TV9 Network
User
Sign In

By signing in or creating an account, you agree with Associated Broadcasting Company's Terms & Conditions and Privacy Policy.

ತಮಿಳುನಾಡು ಚುನಾವಣೆಯಲ್ಲಿ ಮತ ಹಾಕಿದ ಸೆಲೆಬ್ರಿಟಿಸ್; ಇಲ್ಲಿವೆ ಫೋಟೋಸ್

Tamil Nadu Assembly Election: ತಮಿಳುನಾಡು ವಿಧಾನಸಭಾ ಚುನಾವಣೆ ಇಂದು (ಏಪ್ರಿಲ್ 23) ನಡೆಯುತ್ತಿದೆ. ಈ ಚುನಾವಣೆಯಲ್ಲಿ ಅನೇಕ ಸೆಲೆಬ್ರಿಟಿಗಳು ಬಂದು ಮತ ಚಲಾವಣೆ ಮಾಡುತ್ತಿದ್ದಾರೆ. ಈ ಸಂದರ್ಭದ ಫೋಟೋಗಳು ಟಿವಿ9 ಕನ್ನಡಕ್ಕೆ ಲಭ್ಯವಾಗಿವೆ. ವಿಜಯ್, ಅಜಿತ್, ರಜನಿಕಾಂತ್ ಸೇರಿದಂತೆ ಅನೇಕ ಸೆಲೆಬ್ರಿಟಿಗಳು ಮತ ಹಾಕಿದ್ದಾರೆ. 

ರಾಜೇಶ್ ದುಗ್ಗುಮನೆ
|

Updated on: Apr 23, 2026 | 1:07 PM

Share
ಕಾಲಿವುಡ್ ನಟ ಅಜಿತ್ ಅವರು ಮುಂಜಾನೆಯೇ ಬಂದು ಮತ ಹಾಕಿದ್ದಾರೆ. ಈ ಮೊದಲು ಅವರು ರೇ್ ಕಾರಣಕ್ಕೆ ವಿದೇಶಕ್ಕೆ ತೆರಳಿದ್ದರು. ಅವರು ಮತ ಹಾಕಲು ಚೆನ್ನೈಗೆ ಬಂದಿದ್ದರು ಎನ್ನಲಾಗಿದೆ.

1 / 8
ಕಾಲಿವುಡ್ ಯುವ ನಟ ಶಿವ ಕಾರ್ತಿಕೇಯ ಅವರು ಕೂಡ ವೋಟ್ ಹಾಕಿದ್ದಾರೆ. ಮತ ಹಾಕಿದ ಬಳಿಕ ಅವರು ಇಂಕ್ ಹಾಕಿದ ಬೆರಳನ್ನು ತೋರಿಸಿದ್ದಾರೆ.

2 / 8
ಕಾಲಿವುಡ್ ಸೂಪರ್ ಸ್ಟಾರ್ ರಜನಿಕಾಂತ್ ಅವರು ಚೆನ್ನೈನಲ್ಲಿ ಮತ ಹಾಕಿದರು. ಈ ವೇಳೆ ಅಭಿಮಾನಿಗಳು ದೊಡ್ಡ ಸಂಖ್ಯೆಯಲ್ಲಿ ನೆರೆದಿದ್ದರು. ಅವರನ್ನು ನಿಯಂತ್ರಿಸಲು ಪೊಲೀಸರು ಹರಸಾಹಸಪಟ್ಟರು.

3 / 8
ಧನುಷ್ ಅವರು ಕೂಡ ವೋಟ್ ಹಾಕಿದ್ದಾರೆ. ಈ ವೇಳೆ ಅವರ ಉದ್ದನೆಯ ಕೂದಲು ಗಮನ ಸೆಳೆದಿದೆ. ಇದು ಅವರ ಮುಂದಿನ ಸಿನಿಮಾ ಲುಕ್ ಇರಬಹುದು ಎಂದು ಅಭಿಮಾನಿಗಳು ಭಾವಿಸಿದ್ದಾರೆ.

4 / 8
ಖ್ಯಾತ ಸಂಗೀತ ಸಂಯೋಜಕ ಇಳಯರಾಜ ಅವರು ತಮ್ಮ ಕೆಲಸದ ನಡುವೆ ಬಿಡುವು ಮಾಡಿಕೊಂಡು ಬಂದು ಮತ ಹಾಕಿದ್ದಾರೆ. ಈ ಮೂಲಕ ಅಭಿಮಾನಿಗಳಿಗೆ ತಮ್ಮ ಕರ್ತವ್ಯ ಪೂರೈಸುವಂತೆ ಕರೆಕೊಟ್ಟಿದ್ದಾರೆ.

5 / 8
ದಳಪತಿ ವಿಜಯ್ ಅವರ ಟಿವಿಕೆ ಪಕ್ಷ ತಮಿಳುನಾಡಿನ ಎಲ್ಲಾ ಕ್ಷೇತ್ರದಲ್ಲಿ ಸ್ಪರ್ಧಿಸಿದೆ. ವಿಜಯ್ ಅವರು ಇಂದು ಚೆನ್ನೈನಲ್ಲಿ ವೋಟ್ ಹಾಕಿದರು. ಅವರು ಗೆಲ್ಲುವ ಭರವಸೆಯಲ್ಲಿದ್ದಾರೆ.

6 / 8
ಕಾಲಿವುಡ್ ಸ್ಟಾರ್ ನಟಿ ತ್ರಿಷಾ ಕೂಡ ತಮ್ಮ ಕರ್ತವ್ಯ ಮೆರೆದಿದ್ದಾರೆ. ಅವರು ವೋಟ್ ಹಾಕಿದ್ದಾರೆ. ಆ ಬಳಿಕ ಮಾಧ್ಯಮಗಳ ಕ್ಯಾಮೆರಾಗೆ ಪೋಸ್ ಕೊಟ್ಟಿದ್ದು ಹೀಗೆ.

7 / 8
ಕಮಲ್ ಹಾಸನ್ ಅವರು ಮಗಳು ಶ್ರುತಿ ಹಾಸನ್ ಜೊತೆ ಬಂದು ವೋಟ್ ಹಾಕಿದ್ದಾರೆ. ಇಬ್ಬರೂ ವೋಟ್ ಹಾಕಿದ ಬಳಿಕ ಪೋಸ್ ಕೊಟ್ಟರು.

8 / 8
Follow Us