- Kannada News Photo gallery Komal Kumar starrer new movie titled Undenaama: KL Rajashekar directorial film will release on 14th April
Undenaama Movie: ‘2020’ ಅಲ್ಲ, ಇದು ‘ಉಂಡೆನಾಮ’; ಕೋಮಲ್ ಚಿತ್ರಕ್ಕೆ ಹೊಸ ಶೀರ್ಷಿಕೆ: ಏ.14ಕ್ಕೆ ಬಿಡುಗಡೆ
Komal Kumar: ಬಹುದಿನಗಳ ಬಳಿಕ ನಟ ಕೋಮಲ್ ಅವರು ದೊಡ್ಡ ಪರದೆಯಲ್ಲಿ ಕಾಮಿಡಿ ಕಚಗುಳಿ ಇಡಲು ಬರುತ್ತಿದ್ದಾರೆ. ಅವರು ನಟಿಸಿರುವ ‘ಉಂಡೆನಾಮ’ ಚಿತ್ರ ರಿಲೀಸ್ಗೆ ಸಜ್ಜಾಗಿದೆ.
Updated on:Mar 20, 2023 | 4:38 PM

ನಟ ಕೋಮಲ್ ಅಭಿನಯದ ಹೊಸ ಚಿತ್ರಕ್ಕೆ ಈ ಮೊದಲು ‘2020’ ಎಂದು ಶೀರ್ಷಿಕೆ ಇಡಲಾಗಿತ್ತು. ಆದರೆ ಈಗ ಟೈಟಲ್ ಬದಲಾಯಿಸಲಾಗಿದೆ. ಈ ಸಿನಿಮಾಗೆ ‘ಉಂಡೆನಾಮ’ ಎಂದು ಹೆಸರು ಇಡಲಾಗಿದೆ.

ಲಾಕ್ಡೌನ್ ಕುರಿತ ಕಥೆಯನ್ನು ಹೊಂದಿರುವ ಈ ಸಿನಿಮಾಗೆ ಕೆ.ಎಲ್. ರಾಜಶೇಖರ್ ಅವರು ನಿರ್ದೇಶನ ಮಾಡಿದ್ದಾರೆ. ಕನ್ನಡ ಚಿತ್ರರಂಗ ಸೆಲೆಬ್ರಿಟಿಗಳು ‘ಉಂಡೆನಾಮ’ ಶೀರ್ಷಿಕೆ ಕೇಳಿ ಪ್ರತಿಕ್ರಿಯೆ ನೀಡಿದ್ದಾರೆ. ‘ಇದು ನಗು ಉಕ್ಕಿಸುವ ಟೈಟಲ್’ ಎಂಬ ಅಭಿಪ್ರಾಯ ಎಲ್ಲರಿಂದ ವ್ಯಕ್ತವಾಗಿದೆ.

‘ಉಂಡೆನಾಮ’ ಸಿನಿಮಾದಲ್ಲಿ ಕೋಮಲ್ ಜೊತೆ ಹರೀಶ್ ರಾಜ್, ಧನ್ಯಾ ಬಾಲಕೃಷ್ಣ, ತಬಲಾನಾಣಿ, ಅಪೂರ್ವ, ವೈಷ್ಣವಿ, ತನಿಷಾ ಕುಪ್ಪಂಡ, ಬ್ಯಾಕ್ ಜನಾರ್ಧನ್ ಮುಂತಾದವರು ನಟಿಸಿದ್ದಾರೆ. ‘ಎನ್.ಕೆ. ಸ್ಟುಡಿಯೋಸ್’ ಮೂಲಕ ಸಿ. ನಂದಕಿಶೋರ್ ಅವರು ನಿರ್ಮಾಣ ಮಾಡಿದ್ದಾರೆ.

ಏಪ್ರಿಲ್ 14ರಂದು ರಾಜ್ಯಾದ್ಯಂತ ‘ಉಂಡೆನಾಮ’ ಸಿನಿಮಾ ಬಿಡುಗಡೆ ಆಗಲಿದೆ. ಬಹುದಿನಗಳ ಬಳಿಕ ಕೋಮಲ್ ಅವರು ದೊಡ್ಡ ಪರದೆ ಮೇಲೆ ಕಾಣಿಸಿಕೊಳ್ಳುತ್ತಿರುವುದರಿಂದ ಸಹಜವಾಗಿ ನಿರೀಕ್ಷೆ ಹೆಚ್ಚಾಗಿದೆ. ಪೋಸ್ಟರ್ಗಳು ಗಮನ ಸೆಳೆಯುತ್ತಿವೆ.

ರಾಜಶೇಖರ್ ಅವರು ‘ಉಂಡೆನಾಮ’ ಚಿತ್ರಕ್ಕೆ ನಿರ್ದೇಶನ ಮಾಡುವುದರ ಜೊತೆಗೆ ಕಥೆ, ಚಿತ್ರಕಥೆ, ಸಂಭಾಷಣೆಯನ್ನೂ ಬರೆದಿದ್ದಾರೆ. ಶ್ರೀಧರ್ ವಿ. ಸಂಭ್ರಮ್ ಅವರ ಸಂಗೀತ ನಿರ್ದೇಶನ, ನವೀನ್ ಕುಮಾರ್ ಅವರ ಛಾಯಾಗ್ರಾಹಣ ಹಾಗೂ ಕೆ.ಎಂ. ಪ್ರಕಾಶ್ ಅವರ ಸಂಕಲನದಲ್ಲಿ ಈ ಚಿತ್ರ ಮೂಡಿಬಂದಿದೆ.
Published On - 4:38 pm, Mon, 20 March 23




