- Kannada News Photo gallery Latest FD rates update in Kannada Banks with higher interest rates of up to 9 percent on fixed deposits Latest personal finance and business news in Kannada
FD Rates: ಎಫ್ಡಿಗೆ ಶೇ 8ರಿಂದ 9ರ ವರೆಗೆ ಬಡ್ಡಿ ನೀಡುತ್ತಿವೆ ಈ ಬ್ಯಾಂಕ್ಗಳು
ಆರ್ಬಿಐ ರೆಪೊ ದರ ಹೆಚ್ಚಿಸಿರುವುದರಿಂದ ವಿವಿಧ ಬ್ಯಾಂಕ್ಗಳೂ ಸಾಲದ ಮತ್ತು ಠೇವಣಿಗಳ ಮೇಲಿನ ಬಡ್ಡಿ ದರವನ್ನು ಹೆಚ್ಚಿಸಿವೆ. ಸ್ಥಿರ ಠೇವಣಿ ಅಥವಾ ಎಫ್ಡಿ ಮೇಲೆ ಶೇಕಡಾ 8ರಿಂದ 9ರ ವರೆಗೆ ಬಡ್ಡಿ ನೀಡುವ ಬ್ಯಾಂಕ್ಗಳ ವಿವರ ಇಲ್ಲಿದೆ.
Updated on: Dec 17, 2022 | 5:50 PM

Latest FD rates update in Kannada Banks with higher interest rates of up to 9 percent on fixed deposits Latest personal finance and business news in Kannada

ಎಸ್ಬಿಐ, ಐಸಿಐಸಿಐ, ಎಚ್ಡಿಎಫ್ಸಿ, ಪಿಪಿಎಫ್, ಎಸ್ಸಿಎಸ್ಎಸ್ ಯೋಜನೆಗಳು ಸ್ಥಿರ ಠೇವಣಿಗೆ (FD) ನೀಡುವ ಬಡ್ಡಿ ದರದ ಸಂಕ್ಷಿಪ್ತ ವಿವರಣೆ ಇಲ್ಲಿದೆ.

ಉಜ್ಜೀವನ್ ಸ್ಮಾಲ್ ಫೈನಾನ್ಸ್ ನವೆಂಬರ್ 5ರಿಂದ ಜಾರಿಗೆ ಬರುವಂತೆ ಎಫ್ಡಿ ಬಡ್ಡಿ ದರವನ್ನು ಶೇಕಡಾ 8ರ ವರೆಗೆ ಹೆಚ್ಚಿಸಿದೆ. ಹಿರಿಯ ನಾಗರಿಕರ ಎಫ್ಡಿಗೆ ಶೇಕಡಾ 8.75ರ ವರೆಗೆ ಬಡ್ಡಿ ಸಿಗುತ್ತದೆ. ಎಫ್ಡಿ ಅವಧಿ 80 ವಾರಗಳದ್ದಾಗಿದೆ.

Year Ender 2022 Money and Financial Planning lessons from year 2022 Economic Slowdown Inflation repo rate hike layoffs and other latest personal finance and business news in Kannada

ಫಿನ್ಕೇರ್ ಸ್ಮಾಲ್ ಫೈನಾನ್ಸ್ ಬ್ಯಾಂಕ್ ನವೆಂಬರ್ 22ರಿಂದ ಜಾರಿಗೆ ಬರುವಂತೆ ಎಫ್ಡಿ ಬಡ್ಡಿ ದರವನ್ನು ಶೇಕಡಾ 8ರ ವರೆಗೆ ಹೆಚ್ಚಿಸಿದೆ. ಹಿರಿಯ ನಾಗರಿಕರ ಎಫ್ಡಿಗೆ ಶೇಕಡಾ 8.50 ವರೆಗೆ ಬಡ್ಡಿ ನಿಗದಿಪಡಿಸಿದೆ. ಎಫ್ಡಿ ಅವಧಿ 1000 ದಿನಗಳದ್ದಾಗಿದೆ.

ಇಎಸ್ಎಎಫ್ ಸ್ಮಾಲ್ ಫೈನಾನ್ಸ್ ಬ್ಯಾಂಕ್ ಡಿಸೆಂಬರ್ 15ರಿಂದ ಜಾರಿಗೆ ಬರುವಂತೆ ಎಫ್ಡಿ ಬಡ್ಡಿ ದರವನ್ನು ಶೇಕಡಾ 8ರ ವರೆಗೆ ಹೆಚ್ಚಿಸಿದೆ. ಹಿರಿಯ ನಾಗರಿಕರ ಎಫ್ಡಿಗೆ ಶೇಕಡಾ 8.50 ವರೆಗೆ ಬಡ್ಡಿ ನೀಡುತ್ತಿದೆ. ಎಫ್ಡಿ ಅವಧಿ 999 ದಿನಗಳದ್ದಾಗಿದೆ.

2022ರ ಮೇ ತಿಂಗಳ ನಂತರ ಸತತವಾಗಿ ಆರ್ಬಿಐ ರೆಪೊ ದರ ಹೆಚ್ಚಿಸುತ್ತಾ ಬಂದಿದ್ದು, ಒಟ್ಟಾರೆಯಾಗಿ 23ನೇ ಹಣಕಾಸು ವರ್ಷದಲ್ಲಿ 250 ಮೂಲಾಂಶದಷ್ಟು ರೆಪೊ ದರ ಹೆಚ್ಚಿಸಿದೆ. ಪರಿಣಾಮವಾಗಿ ವಿವಿಧ ಸಾಲಗಳ ಬಡ್ಡಿ ದರ ಹಾಗೂ ಠೇವಣಿಗಳ ಮೇಲಿನ ಬಡ್ಡಿ ದರದಲ್ಲಿಯೂ ಭಾರೀ ಹೆಚ್ಚಳವಾಗಿದೆ.









