- Kannada News Photo gallery Malavika Mohanan may share screen with Prabhas here is latest Tollywood gossip
Malavika Mohanan: ಪ್ರಭಾಸ್ ಜತೆ ತೆರೆ ಹಂಚಿಕೊಳ್ಳಲಿದ್ದಾರಾ ಮಾಳವಿಕಾ ಮೋಹನನ್?
ಬಹುಭಾಷಾ ನಟಿ ಮಾಳವಿಕಾ ಮೋಹನನ್ ‘ನಾನು ಮತ್ತು ವರಲಕ್ಷ್ಮಿ’ ಚಿತ್ರದ ಮೂಲಕ ಕನ್ನಡ ಪ್ರೇಕ್ಷಕರಿಗೆ ಪರಿಚಯ. ಸದ್ಯ ಟಾಲಿವುಡ್ನಲ್ಲಿ ಕೇಳಿಬರುತ್ತಿರುವ ಗಾಸಿಪ್ ಪ್ರಕಾರ ನಟಿ, ಪ್ರಭಾಸ್ ಜತೆ ತೆರೆಹಂಚಿಕೊಳ್ಳಲಿದ್ದಾರಂತೆ. ಈ ಕುರಿತು ಇನ್ನೂ ಅಧಿಕೃತ ಮಾಹಿತಿ ಬಂದಿಲ್ಲವಾದರೂ, ಸುದ್ದಿ ಕೇಳಿ ಫ್ಯಾನ್ಸ್ ಥ್ರಿಲ್ ಆಗಿದ್ದಾರೆ.
Updated on:Feb 19, 2022 | 9:56 AM

ಬಹುಭಾಷಾ ನಟಿ ಮಾಳವಿಕಾ ಮೋಹನನ್ಗೆ ದೊಡ್ಡ ಸಿನಿಮಾಗಳ ಆಫರ್ಗಳು ಒಲಿಯುತ್ತಿವೆ.

ಕಳೆದ ವರ್ಷ ವಿಜಯ್ ಅಭಿನಯದ ‘ಮಾಸ್ಟರ್’ನಲ್ಲಿ ನಟಿಸಿದ್ದ ಮಾಳವಿಕಾ, ಇದೀಗ ಬಾಲಿವುಡ್ನಲ್ಲೂ ಸಕ್ರಿಯರಾಗಿದ್ದಾರೆ.

ಟಾಲಿವುಡ್ ಅಂಗಳದಿಂದ ಕೇಳಿಬರುತ್ತಿರುವ ಲೇಟೆಸ್ಟ್ ಗಾಸಿಪ್ ಪ್ರಕಾರ ಮಾಳವಿಕಾಗೆ ದೊಡ್ಡ ಆಫರ್ ಒಂದು ಲಭಿಸಿದೆ.

ಪ್ಯಾನ್ ಇಂಡಿಯಾ ಸ್ಟಾರ್ ಪ್ರಭಾಸ್ ಮುಂದಿನ ಸಿನಿಮಾದಲ್ಲಿ ಮಾಳವಿಕಾ ನಾಯಕಿ ಎಂಬ ಗಾಸಿಪ್ ಜೋರಾಗಿ ಹರಿದಾಡುತ್ತಿದೆ.

ಈ ಕುರಿತು ಇನ್ನೂ ಯಾವುದೇ ಅಧಿಕೃತ ಮಾಹಿತಿ ಬಂದಿಲ್ಲವಾದರೂ, ಸುದ್ದಿ ಕೇಳಿ ಫ್ಯಾನ್ಸ್ ಥ್ರಿಲ್ ಆಗಿದ್ದಾರೆ.

ಪ್ರಭಾಸ್ಗೆ ಖ್ಯಾತಿ ತಂದುಕೊಟ್ಟ ಚಿತ್ರಗಳಲ್ಲಿ ಒಂದಾದ ‘ಡಾರ್ಲಿಂಗ್’ ನಿರ್ದೇಶಕ ಮಾರುತಿ ಹೊಸ ಚಿತ್ರದಲ್ಲಿ ಪ್ರಭಾಸ್- ಮಾಳವಿಕಾ ಜತೆಯಾಗಲಿದ್ದಾರೆ ಎಂಬುದು ಈಗ ಕೇಳಿಬರುತ್ತಿರುವ ಗುಸುಗುಸು.

‘ರಾಜಾ ಡಿಲಕ್ಸ್’ ಎಂದು ಕರೆಯಲಾಗುತ್ತಿರುವ ಚಿತ್ರಕ್ಕೆ ನಿರ್ಮಾಪಕರು ಮಾಳವಿಕಾರನ್ನು ಸಂಪರ್ಕಿಸಿದೆ ಎಂದು ವರದಿಯಾಗಿದೆ.
Published On - 9:44 am, Sat, 19 February 22




