AQI
TV9 Network
User
Sign In

By signing in or creating an account, you agree with Associated Broadcasting Company's Terms & Conditions and Privacy Policy.

ಅನಾರೋಗ್ಯದಿಂದ ಸಚಿವ ಡಿ. ಸುಧಾಕರ್ ವಿಧಿವಶ: ಚಿತ್ರದುರ್ಗದಲ್ಲಿ ನಾಳೆ ಸಾರ್ವಜನಿಕ ರಜೆ; ರಾಜ್ಯದಲ್ಲಿ ಮೂರು ದಿನ ಶೋಕಾಚರಣೆ

ಯೋಜನಾ ಮತ್ತು ಸಾಂಖ್ಯಿಕ ಸಚಿವ ಡಿ. ಸುಧಾಕರ್ (65) ಬೆಂಗಳೂರಿನ ಕಿಮ್ಸ್ ಆಸ್ಪತ್ರೆಯಲ್ಲಿ ನಿಧನರಾಗಿದ್ದಾರೆ. ಶ್ವಾಸಕೋಶ ಸಮಸ್ಯೆಯಿಂದ ಬಳಲುತ್ತಿದ್ದ ಅವರು ಚಿಕಿತ್ಸೆಗೆ ಸ್ಪಂದಿಸದೆ ಮೃತಪಟ್ಟಿದ್ದಾರೆ. ಅವರ ಪಾರ್ಥಿವ ಶರೀರದ ಅಂತಿಮ ದರ್ಶನಕ್ಕೆ ಚಿತ್ರದುರ್ಗದಲ್ಲಿ ವ್ಯವಸ್ಥೆ ಮಾಡಲಾಗಿದ್ದು, ಜಿಲ್ಲೆಯಾದ್ಯಂತ ನಾಳೆ (ಮೇ 11) ರಜೆ ಘೋಷಿಸಲಾಗಿದೆ. ರಾಜ್ಯಾದ್ಯಂತ 3 ದಿನ ಶೋಕಾಚರಣೆ ನಡೆಯಲಿದ್ದು, ಚಳ್ಳಕೆರೆಯಲ್ಲಿ ಸಚಿವರ ಅಂತ್ಯಕ್ರಿಯೆ ನಡೆಯಲಿದೆ.

ಪ್ರಸನ್ನ ಹೆಗಡೆ
|

Updated on: May 10, 2026 | 4:06 PM

Share
ಕಳೆದ ಒಂದು ತಿಂಗಳಿನಿಂದ ತೀವ್ರ ಅನಾರೋಗ್ಯದಿಂದ ಬಳಲುತ್ತಿದ್ದ ಯೋಜನೆ ಮತ್ತು ಸಾಂಖ್ಯಿಕ ಸಚಿವ ಡಿ. ಸುಧಾಕರ್ (65) ಇಂದು ಮುಂಜಾನೆ ಬೆಂಗಳೂರಿನ ಕಿಮ್ಸ್ (KIMS) ಆಸ್ಪತ್ರೆಯಲ್ಲಿ ನಿಧನರಾಗಿದ್ದಾರೆ. ಶ್ವಾಸಕೋಶ ಸಮಸ್ಯೆಯಿಂದ ಬಳಲುತ್ತಿದ್ದ ಅವರು ಚಿಕಿತ್ಸೆಗೆ ಸ್ಪಂದಿಸದೆ ಮೃತಪಟ್ಟಿರುವುದಾಗಿ  ಆಸ್ಪತ್ರೆಯ ಮೂಲಗಳು ತಿಳಿಸಿವೆ.

1 / 5
ಸಿಎಂ ಸಿದ್ದರಾಮಯ್ಯ ಸೇರಿದಂತೆ ಪಕ್ಷಾತೀತವಾಗಿ ಹಲವು ನಾಯಕರು ಸುಧಾಕರ್​​ ಅವರ ಅಂತಿಮ ದರ್ಶನ ಪಡೆದಿದ್ದಾರೆ. ಓರ್ವ ಸ್ನೇಹಿತನಾಗಿ ಮತ್ತು ಸಹೋದ್ಯೋಗಿಯಾಗಿ ಅವರ ಜೊತೆಗಿನ ಒಡನಾಟವನ್ನು ಮೆಲುಕು ಹಾಕಿದ್ದಾರೆ. ಚಿತ್ರದುರ್ಗದ ಉಸ್ತುವಾರಿ ಸಚಿವರೂ ಆಗಿದ್ದ ಸುಧಾಕರ್​​ ಅವರ ಪಾರ್ಥಿವ ಶರೀರದ ಅಂತಿಮ ದರ್ಶನಕ್ಕೆ  ಹಿರಿಯೂರಿನ ನೆಹರು ಮೈದಾನದಲ್ಲಿ ವ್ಯವಸ್ಥೆ ಮಾಡಲಾಗಿದೆ.

2 / 5
ಸಚಿವರದ ಅಕಾಲಿಕ ನಿಧನದ ಹಿನ್ನೆಲೆ ಗೌರವಾರ್ಥವಾಗಿ ಸೋಮವಾರ (ಮೇ 11) ಚಿತ್ರದುರ್ಗ ಜಿಲ್ಲೆಯ ಸಾರ್ವಜನಿಕ ಸರ್ಕಾರಿ ಕಚೇರಿಗಳಿಗೆ ಮತ್ತು ಎಲ್ಲ ಶಾಲೆ, ಕಾಲೇಜುಗಳಿಗೆ ಸಾರ್ವಜನಿಕ ರಜೆ ಘೋಷಿಸಲಾಗಿದೆ. ಈ ಬಗ್ಗೆ  ಡಿಸಿ ಟಿ. ವೆಂಕಟೇಶ್ ಮಾಹಿತಿ ನೀಡಿದ್ದಾರೆ.

3 / 5
ರಾಜ್ಯಾದ್ಯಂತ 3 ದಿನಗಳ ಕಾಲ ಶೋಕಾಚರಣೆಯನ್ನೂ ಆಚರಿಸುತ್ತಿರುವ ಬಗ್ಗೆ ಬೆಂಗಳೂರಿನಲ್ಲಿ ಮುಖ್ಯಮಂತ್ರಿ ಸಿದ್ದರಾಮಯ್ಯ ತಿಳಿಸಿದ್ದು, ನಾಳೆ ಸಂಜೆ 4 ಗಂಟೆಗೆ ಡಿ.ಸುಧಾಕರ್ ಅಂತ್ಯಕ್ರಿಯೆ ನಡೆಯಲಿದೆ. ಸಿಎಂ ಸಿದ್ದರಾಮಯ್ಯ, ಕಾಂಗ್ರೆಸ್​​ ನಾಯಕ ಸುರ್ಜೇವಾಲ ಸೇರಿದಂತೆ ಹಲವರು ಈ ವೇಳೆ ಉಪಸ್ಥಿತರಿರಲಿದ್ದಾರೆ.

4 / 5
ಇನ್ನು ಸುಧಾಕರ್​​ ಕುಟುಂಬದ ದುಃಖ ಕಟ್ಟೆಯೊಡೆದಿದ್ದರೆ ಅದರ ಜೊತೆ ಜೊತೆಗೆ ಸಚಿವರನ್ನು ನೆನೆದು ಅವರ ಕಚೇರಿಯಲ್ಲಿ ಕೆಲಸ ಮಾಡುತ್ತಿದ್ದ ಮಹಿಳೆಯ ಆಕ್ರಂದನವೂ ಮುಗಿಲು ಮುಟ್ಟಿದೆ. ಕಷ್ಟ ಎಂದು ಬಂದವರನ್ನು ಅವರು ಬರಿಗೈಯಲ್ಲಿ ಕಳುಹಿಸಿದ ಇತಿಹಾಸವೇ ಇಲ್ಲ. ಅವರಿಂದ ನಿತ್ಯ ನೂರಾರು ಜನರು ಸಹಾಯ ಪಡೆದುಕೊಳ್ಳುತ್ತಿದ್ದರು. ಮಹಿಳೆಯರ ಪಾಲಿಗೆ ತಂದೆಯಂತಿದ್ದ ಅವರು ಅನೇಕರಿಗೆ ಶಕ್ತಿ ತುಂಬುವ ಕೆಲಸ ಮಾಡಿದ್ದರು ಎಂದು ಹಲವರು ಅಭಿಪ್ರಾಯಪಟ್ಟಿದ್ದಾರೆ.

5 / 5
Follow Us
ಮೋದಿ ಸಂಚರಿಸುವ ರಸ್ತೆ ಬಳಿ ಜಿಲೆಟಿನ್ ಕಡ್ಡಿ ಪತ್ತೆ: DIG ಹೇಳಿದ್ದಿಷ್ಟು

ಮೊದಲ ಭಾಷಣದಲ್ಲೇ ಸಾಲದ ಬಗ್ಗೆ ಮಾತಾಡಿದ ತಮಿಳುನಾಡು ಸಿಎಂ ವಿಜಯ್​​

ರವಿಶಂಕರ್ ಗುರೂಜಿ ಮಾತಿಗೆ ಪ್ರಧಾನಿ ಮೋದಿಗೂ ನಗು!

ರವಿಶಂಕರ್ ಗುರೂಜಿಯ 100ನೇ ಹುಟ್ಟುಹಬ್ಬಕ್ಕೂ ಬರುತ್ತೇನೆ ಎಂದ ಪ್ರಧಾನಿ ಮೋದಿ

ಮೋದಿ ಸಂಚರಿಸೋ ರಸ್ತೇಲಿ ಜಿಲೆಟಿನ್ ಕಡ್ಡಿಗಳು ಪತ್ತೆ: ಶಂಕಿತ ಪೊಲೀಸ್ ವಶಕ್ಕೆ

ಮೋದಿಗೆ ಆರ್ಟ್​ ಆಫ್ ಲಿವಿಂಗ್ ಫೋಟೊ ಕೊಟ್ಟು ಸನ್ಮಾನಿಸಿದ ಗುರೂಜಿ

ವಿಜಯ್ ಪ್ರಮಾಣವಚನ ಮುಗಿಸಿ ಹೊರಟ ತ್ರಿಶಾ ನೋಡಲು ಮುಗಿಬಿದ್ದ ಅಭಿಮಾನಿಗಳು

ಪ್ರಮಾಣ ವಚನ ಸ್ವೀಕಾರಕ್ಕೂ ಮುನ್ನ ವಿಜಯ್​ ದಿಟ್ಟ ಮಾತುಗಳು!

ತಮಿಳುನಾಡಿನ ನೂತನ ಮುಖ್ಯಮಂತ್ರಿಯಾದ ವಿಜಯ್​​ಗೆ ಶುಭ ಕೋರಿದ ಪ್ರಧಾನಿ ಮೋದಿ

'ಉಚಿತ ವಿದ್ಯುತ್' ಯೋಜನೆಗೆ ಸಹಿ ಹಾಕಿದ ನೂತನ ಮುಖ್ಯಮಂತ್ರಿ ಜೋಸೆಫ್ ವಿಜಯ್