- Kannada News Photo gallery Netizens compare Janhvi Kapoor to Kim Kardashian and trolled after she shared her new photoshoot pics
ದಿನದಿನಕ್ಕೂ ಹೆಚ್ಚುತ್ತಿದೆ ಜಾನ್ವಿ ಕಪೂರ್ ಗ್ಲಾಮರ್; ಫೋಟೋ ಕಂಡು ಟ್ರೋಲ್ ಮಾಡಿದ ನೆಟ್ಟಿಗರು
ಬಾಲಿವುಡ್ ನಟಿ ಜಾನ್ವಿ ಕಪೂರ್ ಅವರು ಹೊಸ ಫೋಟೋಗಳನ್ನು ಹಂಚಿಕೊಂಡಿದ್ದಾರೆ. ಇದನ್ನು ಕಂಡ ನೆಟ್ಟಿಗರಿಂದ ಮಿಶ್ರ ಪ್ರತಿಕ್ರಿಯೆ ಬಂದಿದೆ. ಕೆಲವರು ಟ್ರೋಲ್ ಮಾಡುತ್ತಿದ್ದಾರೆ.
Updated on: Apr 02, 2022 | 5:06 PM

Netizens compare Janhvi Kapoor to Kim Kardashian and trolled after she shared her new photoshoot pics

Netizens compare Janhvi Kapoor to Kim Kardashian and trolled after she shared her new photoshoot pics

ನಟಿಯರಿಗೆ ಟ್ರೋಲ್ ಕಾಟ ಸಹಜ ಎಂಬಂತಾಗಿದೆ. ಜಾನ್ವಿ ಕಪೂರ್ ಅವರು ಪ್ಲಾಸ್ಟಿಕ್ ಸರ್ಜರಿ ಮಾಡಿಸಿಕೊಂಡಿದ್ದಾರೆ ಎಂದು ಕೆಲವರು ಕಮೆಂಟ್ ಮಾಡಿದ್ದಾರೆ. ಸೌಂದರ್ಯ ವೃದ್ಧಿಸಿಕೊಳ್ಳುವ ಸಲುವಾಗಿ ಅವರು ಪ್ಲಾಸ್ಟಿಕ್ ಸರ್ಜರಿಯ ಮೊರೆ ಹೋಗಿದ್ದಾರೆ ಎಂದು ನೆಟ್ಟಿಗರು ಟೀಕೆ ಮಾಡುತ್ತಿದ್ದಾರೆ. ಆ ಬಗ್ಗೆ ಜಾನ್ವಿ ಕಪೂರ್ ಪ್ರತಿಕ್ರಿಯೆ ನೀಡಿಲ್ಲ.

Netizens compare Janhvi Kapoor to Kim Kardashian and trolled after she shared her new photoshoot pics

ಖ್ಯಾತ ನಿರ್ಮಾಪಕ ಬೋನಿ ಕಪೂರ್ ಅವರ ಮಗಳು ಎಂಬ ಕಾರಣಕ್ಕೆ ಚಿತ್ರರಂಗದಲ್ಲಿ ಜಾನ್ವಿ ಕಪೂರ್ ಅವರಿಗೆ ಸುಲಭವಾಗಿ ಅವಕಾಶಗಳು ಸಿಗುತ್ತವೆ ಎಂಬ ವಾದ ಇದೆ. ಆ ಕಾರಣದಿಂದಲೂ ಅವರನ್ನು ಕೆಲವರು ಟೀಕೆ ಮಾಡುತ್ತಾರೆ. ಅವುಗಳ ಬಗ್ಗೆ ತಲೆ ಕೆಡಿಸಿಕೊಳ್ಳದ ಜಾನ್ವಿ ಅವರು ಈಗ ‘ಮಿಲಿ’ ಸಿನಿಮಾದ ಕೆಲಸಗಳಲ್ಲಿ ತೊಡಗಿಕೊಂಡಿದ್ದಾರೆ.

ಜಾನ್ವಿ ಕಪೂರ್ ಅವರು ಬಣ್ಣದ ಲೋಕಕ್ಕೆ ಕಾಲಿಟ್ಟು 4 ವರ್ಷ ಕಳೆದಿದೆ. ಈ ಸಣ್ಣ ಪಯಣದಲ್ಲೇ ಅವರು ಸೋಲು-ಗೆಲವು ಎರಡನ್ನೂ ಕಂಡಿದ್ದಾರೆ. ಇನ್ನೇನು ಕೆಲವೇ ದಿನಗಳಲ್ಲಿ ಅವರ ಸಹೋದರಿ ಖುಷಿ ಕಪೂರ್ ಕೂಡ ಚಿತ್ರರಂಗಕ್ಕೆ ಎಂಟ್ರಿ ನೀಡಲಿದ್ದಾರೆ.




