Updated on: Apr 12, 2023 | 6:31 AM
ಚಿತ್ರರಂಗಕ್ಕೆ ನಿತ್ಯ ಅನೇಕರ ಎಂಟ್ರಿ ಆಗುತ್ತದೆ. ಆದರೆ, ಎಲ್ಲರಿಗೂ ಸಿನಿಮಾ ರಂಗದಲ್ಲಿ ಯಶಸ್ಸು ಸಿಗುವುದಿಲ್ಲ. ಸ್ಟಾರ್ ಕಿಡ್ ಆದರೆ ಸುಲಭವಾಗಿ ಸಿನಿಮಾ ರಂಗ ಪ್ರವೇಶ ಮಾಡಬಹುದು. ಈಗ ನಟಿ ಪಲಕ್ ತಿವಾರಿ ಸರದಿ.
ಪಲಕ್ ತಿವಾರಿ ಅವರು ಸಲ್ಮಾನ್ ಖಾನ್ ನಟನೆಯ ‘ಕಿಸಿ ಕ ಭಾಯ್ ಕಿಸಿ ಕಿ ಜಾನ್’ ಸಿನಿಮಾದಲ್ಲಿ ನಟಿಸಿದ್ದಾರೆ. ಏಪ್ರಿಲ್ 21ರಂದು ಸಿನಿಮಾ ತೆರೆಗೆ ಬರುತ್ತಿದೆ.
ಮ್ಯೂಸಿಕ್ ವಿಡಿಯೋಗಳ ಮೂಲಕ ಪಲಕ್ ತಿವಾರಿ ಗುರುತಿಸಿಕೊಂಡಿದ್ದಾರೆ. ಈಗ ಅವರು ಬಾಲಿವುಡ್ನಲ್ಲಿ ಅದೃಷ್ಟಪರೀಕ್ಷೆ ಮುಂದಾಗಿದ್ದಾರೆ.
ಸೈಫ್ ಅಲಿ ಖಾನ್ ಮಗ ಇಬ್ರಾಹಿಂ ಅಲಿ ಖಾನ್ ಜೊತೆ ಪಲಕ್ ಡೇಟಿಂಗ್ ಮಾಡುತ್ತಿದ್ದಾರೆ ಎನ್ನಲಾಗಿದೆ. ಈ ವಿಚಾರವನ್ನು ಅವರು ಖಚಿತಪಡಿಸಿಲ್ಲ.
ಅಂದಹಾಗೆ, ಪಲಕ್ ತಿವಾರಿ ನಟಿ ಶ್ವೇತಾ ತಿವಾರಿ ಅವರ ಮಗಳು. ಸಿನಿಮಾ ಹಾಗೂ ಕಿರುತೆರೆ ಮೂಲಕ ಅವರು ಗುರುತಿಸಿಕೊಂಡಿದ್ದಾರೆ.