ಥೈಲ್ಯಾಂಡ್ ಬೀಚ್ನಲ್ಲಿ ಮಿಂಚಿದ ನಟಿ ಪಾಯಲ್ ಚೆಂಗಪ್ಪ; ಇಲ್ಲಿವೆ ಫೋಟೋಸ್
ಕನ್ನಡದ ನಟಿ ಪಾಯಲ್ ಚೆಂಗಪ್ಪ ಅವರು ಇತ್ತೀಚೆಗೆ ಸೋಶಿಯಲ್ ಮೀಡಿಯಾದಲ್ಲಿ ಸೆನ್ಸೇಷನ್ ಸೃಷ್ಟಿ ಮಾಡಿದ್ದಾರೆ ಎಂದರೂ ತಪ್ಪಾಗಲಾರದು. ಅವರು ಹೊಸ ಫೋಟೋಗಳನ್ನು ಸೋಶಿಯಲ್ ಮೀಡಿಯಾದಲ್ಲಿ ಹಂಚಿಕೊಂಡಿದ್ದಾರೆ. ಈ ಫೋಟೋದಲ್ಲಿ ಅವರು ಗಮನ ಸೆಳೆದಿದ್ದಾರೆ. ಅವರ ಲುಕ್ ಗಮನ ಸೆಳೆಯುವ ರೀತಿಯಲ್ಲಿ ಇದೆ ಎಂಬುದು ವಿಶೇಷ.
Updated on: Apr 20, 2026 | 12:36 PM

ಕನ್ನಡದ ನಟಿ ಪಾಯಲ್ ಚೆಂಗಪ್ಪ ಅವರು ಶಾರ್ಟ್ ಫಿಲ್ಮ್ ಮೂಲಕ ಬಣ್ಣದ ಬದುಕು ಆರಂಭಿಸಿದರು. ಆ ಬಳಿಕ ಸಿನಿಮಾಗಳನ್ನು ಕೂಡ ಮಾಡಿದರು. ಈಗ ಅವರು ಸೋಶಿಯಲ್ ಮೀಡಿಯಾದಲ್ಲಿ ಸೆನ್ಸೇಷನ್ ಸೃಷ್ಟಿ ಮಾಡಿದ್ದಾರೆ.

ಪಾಯಲ್ ಅವರು ಇತ್ತೀಚೆಗೆ ಥೈಲ್ಯಾಂಡ್ಗೆ ತೆರಳಿದ್ದರು. ಅಲ್ಲಿ ಅವರು ಸಖತ್ ಬೋಲ್ಡ್ ಆಗಿ ಫೋಟೋಶೂಟ್ ಮಾಡಿಸಿದ್ದಾರೆ. ಈ ಫೋಟೋ ಗಮನ ಸೆಳೆಯುವ ರೀತಿಯಲ್ಲಿ ಇದೆ. ಇದಕ್ಕೆ ಫ್ಯಾನ್ಸ್ ಲೈಕ್ಸ್ ಒತ್ತಿದ್ದಾರೆ.

ಪಾಯಲ್ ಅವರ ನಟನೆಯ ‘ಅಮೃತ ಅಂಜನ್’ ಸಿನಿಮಾ ರಿಲೀಸ್ ಆಯಿತು. ಶಾರ್ಟ್ ಫಿಲ್ಮ್ ಇದೇ ಹೆಸರಲ್ಲಿ ಮೂಡಿ ಬಂದಿತ್ತು. ಆ ಬಳಿಕ ಇದೇ ಹೆಸರಲ್ಲಿ ಸಿನಿಮಾಮಾಡಲಾಯಿತು. ಕಿರುಚಿತ್ರ ಹಾಗೂ ಸಿನಿಮಾದಲ್ಲಿ ಪಾಯಲ್ ಪಾತ್ರ ಗಮನ ಸೆಳೆದಿತ್ತು.

ಪಾಯಲ್ ಅವರು ಕನ್ನಡಕ್ಕೆ ಮಾತ್ರ ಸೀಮಿತವಾಗಿಲ್ಲ. ಅವರು ತೆಲುಗು ಚಿತ್ರರಂಗಕ್ಕೂ ಎಂಟ್ರಿ ಕೊಟ್ಟಿದ್ದಾರೆ. ಅಲ್ಲಿಯೂ ಸಿನಿಮಾಗಳನ್ನು ಮಾಡುತ್ತಿದ್ದಾರೆ. ಅವರನ್ನು ಹುಡುಕಿ ಹಲವು ಆಫರ್ಗಳು ಬರುತ್ತಿವೆ.

ಪಾಯಲ್ ಅವರು ಸೋಶಿಯಲ್ ಮೀಡಿಯಾದಲ್ಲಿ ಆ್ಯಕ್ಟೀವ್ ಆಗಿದ್ದಾರೆ. ವಿವಿಧ ರೀತಿಯ ಫೋಟೋಗಳನ್ನು ಅವರು ಹಂಚಿಕೊಳ್ಳುತ್ತಾರೆ. ಈಗ ಅವರು ಹಂಚಿಕೊಂಡಿರುವ ಫೋಟೋಗಳು ಗಮನ ಸೆಳೆಯುವ ರೀತಿಯಲ್ಲಿ ಇದೆ.




