AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

ಬೆಂಗಳೂರಿನ ಸುಂದರಿ ಹೇಮಾ ನಿರಂಜನ್​ಗೆ ‘ಪರ್ಸೋನಾ ಮಿಸಸ್​ ಇಂಡಿಯಾ 2022’ ಗರಿ

ಹೇಮಾ ನಿರಂಜನ್​ ಅವರು ‘ಪರ್ಸೋನಾ ಮಿಸಸ್​ ಇಂಡಿಯಾ 2022’ ಸ್ಪರ್ಧೆಯಲ್ಲಿ ಗೆದ್ದಿದ್ದಾರೆ. ಉದ್ಯಮಿಯೂ ಆಗಿರುವ ಅವರಿಗೆ ಸಿನಿಮಾದಲ್ಲಿ ನಟಿಸುವ ಆಸಕ್ತಿ ಕೂಡ ಇದೆ.

TV9 Web
| Updated By: ಮದನ್​ ಕುಮಾರ್​

Updated on:Jul 24, 2022 | 4:03 PM

ಪರ್ಸೋನಾ ಮಿಸಸ್​ ಇಂಡಿಯಾ ಸ್ಪರ್ಧೆ ಇತ್ತೀಚೆಗೆ  ನಡೆಯಿತು. ಬೆಂಗಳೂರಿನ ಸುಂದರಿ ಹೇಮಾ ನಿರಂಜನ್ ಅವರು ಈ ಸ್ಪರ್ಧೆಯಲ್ಲಿ ಜಯಶೀಲರಾಗಿ ‘ಪರ್ಸೋನಾ ಮಿಸಸ್​ ಇಂಡಿಯಾ’ ಪ್ರಶಸ್ತಿಯನ್ನು ಪಡೆದುಕೊಂಡಿದ್ದಾರೆ. ಈ ಖುಷಿಯಲ್ಲಿ ಹೇಮಾ ಅವರು ಸುದ್ದಿಗೋಷ್ಠಿ ಆಯೋಜಿಸಿದ್ದರು.

Persona Mrs India 2022 winner Hema Niranjan photos

1 / 5
ಹೇಮಾ ನಿರಂಜನ್ ಅವರು ಹೊಳೆನರಸೀಪುರದ ಮೂಲದವರು. ‘ತುಂಬಾ ಸಂಪ್ರದಾಯಸ್ಥ ಕುಟುಂಬ ನಮ್ಮದು. ತಂದೆ ಶಿಕ್ಷಕರು. ನಾನು ಸಹ ಟೀಚರ್ಸ್ ಟ್ರೈನಿಂಗ್ ಮಾಡಿದ್ದೀನಿ. ನಿರಂಜನ್ ಅವರು ನನ್ನ ಪತಿ. ಮದುವೆಯಾದ ನಂತರ ಬೆಂಗಳೂರಿನಲ್ಲೇ ಇದ್ದೀನಿ’ ಎಂದು ತಮ್ಮ ಹಿನ್ನೆಲೆ ಬಗ್ಗೆ ಹೇಳಿಕೊಂಡರು ಹೇಮಾ.

Persona Mrs India 2022 winner Hema Niranjan photos

2 / 5
‘ಈ ರೀತಿಯ ಸ್ಪರ್ಧೆಗಳಲ್ಲಿ ಭಾಗವಹಿಸುವುದು ನನ್ನ ಬಾಲ್ಯದ ಕನಸಾಗಿತ್ತು. ನಮ್ಮ ತಂದೆ-ತಾಯಿಗೆ ಇದೆಲ್ಲಾ ಇಷ್ಟವಿರಲಿಲ್ಲ. ಆದರೆ ನನ್ನ ಪತಿ ನನ್ನ ಕನಸಿಗೆ ಆಸರೆಯಾದರು. ಅವರ ಸಹಕಾರದಿಂದ ಇದೆಲ್ಲಾ ಸಾಧ್ಯವಾಯಿತು’ ಎಂದು ಕುಟುಂಬದ ಸಹಕಾರವನ್ನು ಹೇಮಾ ಸ್ಮರಿಸಿದ್ದಾರೆ.

3 / 5
‘ಈ ಸ್ಪರ್ಧೆಯಲ್ಲಿ ಗೆಲ್ಲಲು ಬರೀ ಸೌಂದರ್ಯ ಮಾತ್ರವೇ ಮಾನದಂಡವಲ್ಲ. ತುಂಡು ಬಟ್ಟೆಗಳನ್ನು ಧರಿಸುವುದೂ ಅಲ್ಲ. ಸಾಕಷ್ಟು ಪೂರ್ವ ತಯಾರಿ ಬೇಕು. ಅಷ್ಟೇ ಅಲ್ಲದೇ ಕೆಲವು ಸುತ್ತುಗಳ ಪರೀಕ್ಷೆ ಸಹ ಇಲ್ಲಿರುತ್ತದೆ. ತುಂಡು ಉಡುಗೆ ಧರಿಸುವ ಸ್ಪರ್ಧೆಗಳಲ್ಲಿ ಭಾಗವಹಿಸಲು ನಾನು ಇಷ್ಟಪಡುವುದಿಲ್ಲ’ ಎಂದು ಹೇಮಾ ನಿರಂಜನ್​ ಹೇಳಿದ್ದಾರೆ.

4 / 5
‘ನಾನು ಈ ಸ್ಪರ್ಧೆಯಲ್ಲಿ ಭಾಗವಹಿಸಲು ವ್ಯಾಯಾಮ ಮಾಡಿ ಆರು ಕೆಜಿ ದೇಹದ ತೂಕ ಇಳಿಸಿಕೊಂಡಿದ್ದೀನಿ. 33 ಸ್ಪರ್ಧಿಗಳು ಭಾಗವಹಿಸಿದ್ದ ಪರ್ಸೋನಾ ಮಿಸಸ್​ ಇಂಡಿಯಾ‌ 2022 ಸ್ಪರ್ಧೆಯಲ್ಲಿ ನಾನು ವಿಜೇತಳಾಗಿದ್ದಕ್ಕೆ ಖುಷಿ ಆಗಿದೆ. ಉದ್ಯಮಿಯಾಗೂ ನಾನು ಕಾರ್ಯ ನಿರ್ವಹಿಸುತ್ತಿದ್ದೇನೆ. ಉತ್ತಮ ಅವಕಾಶ ಸಿಕ್ಕರೆ ಸಿನಿಮಾದಲ್ಲಿಯೂ ನಟಿಸುತ್ತೇನೆ’ ಎಂದಿ​ದ್ದಾರೆ ಹೇಮಾ ನಿರಂಜನ್​.

5 / 5

Published On - 4:02 pm, Sun, 24 July 22

Follow us
ಭಾರತೀಯ ಸೇನೆಯಿರುವಾಗ ನಮಗ್ಯಾವ ಭಯವೂ ಇಲ್ಲ: ಪ್ರವಾಸಿಗರು

ಆಪರೇಷನ್ ಸಿಂಧೂರವನ್ನು ಹಣೆಗೆ ತಿಲಕ ಇಟ್ಟುಕೊಂಡೇ ಹೊಗಳಿದ ಸಿಎಂ ಸಿದ್ದರಾಮಯ್ಯ

ಮನೆಮಾಳಿಗೆ ಮೇಲೆ ನಿಂತು ಧ್ವಂಸಗೊಂಡಿರುವ ಮಸೀದಿಯನ್ನು ವೀಕ್ಷಿಸಿದ ಜನ

ಎಚ್ಚರಿಕೆಯನ್ನು ಹಗುರವಾಗಿ ತೆಗೆದುಕೊಂಡ ಪಾಕಿಸ್ತಾನಕ್ಕೆ ತಕ್ಕ ಶಾಸ್ತಿ!

‘ಭಾಷೆ-ಸಂಸ್ಕೃತಿಗೆ ಗೌರವಿಸಬೇಕು’; ಸೋನು ನಿಗಮ್​ಗೆ ರಾಗಿಣಿ ಕಿವಿಮಾತು

Live: ಆಪರೇಷನ್ ಸಿಂಧೂರ್ ಬೆನ್ನಲ್ಲೇ ಸೇನಾಧಿಕಾರಿಗಳಿಂದ ಸುದ್ದಿಗೋಷ್ಠಿ

ಭಾರತದ ಬಲಿಷ್ಠ ಸೇನೆಯನ್ನು ತಡವಿರುವ ಪಾಕ್ ಪತರುಗುಟ್ಟಿದೆ: ಮಾಜಿ ಸೈನಿಕರು

ಆಪರೇಷನ್ ಸಿಂಧೂರ್​ಗೆ ಉಗ್ರರ ನೆಲೆಗಳು ಧ್ವಂಸ, ಫೋಟೊಗಳು ಇಲ್ಲಿವೆ ನೋಡಿ

VIDEO: ಪವರ್​ಪ್ಲೇನಲ್ಲೇ 3 ಕ್ಯಾಚ್ ಕೈಚೆಲ್ಲಿದ ಗುಜರಾತ್ ಟೈಟಾನ್ಸ್

ಭಾರತೀಯ ಸೇನೆ ಕ್ಷಿಪಣಿ ದಾಳಿ, ಎದೆ ಝಲ್​ ಎನ್ನುವ ದೃಶ್ಯ ಇಲ್ಲಿದೆ