Pooja Hegde: ಕಿಲ್ಲಿಂಗ್ ಲುಕ್ನಲ್ಲಿ ಪೂಜಾ ಹೆಗ್ಡೆ; ಇಲ್ಲಿವೆ ಮಸ್ತ್ ಫೋಟೋಸ್
ಈಗ ಪೂಜಾ ಹೆಗ್ಡೆ ಕಿತ್ತಳೆ ಬಣ್ಣ ಹೋಲುವ ಉಡುಗೆ ತೊಟ್ಟು ಕಿಲ್ಲಿಂಗ್ ಲುಕ್ ಕೊಟ್ಟಿದ್ದಾರೆ. ಅವರ ಫೋಟೋ ನೋಡಿ ಪಡ್ಡೆಗಳು ಖುಷಿ ಪಟ್ಟಿದ್ದಾರೆ.
Updated on: Mar 15, 2022 | 1:39 PM

ನಟಿ ಪೂಜಾ ಹೆಗ್ಡೆಗೆ ಚಿತ್ರರಂಗದಲ್ಲಿ ಇರುವ ಬೇಡಿಕೆ ಅಂತಿಂಥದ್ದಲ್ಲ. ಬಾಲಿವುಡ್, ಟಾಲಿವುಡ್, ಕಾಲಿವುಡ್ನಲ್ಲಿ ಅವರಿಗೆ ಬೇಡಿಕೆ ಹೆಚ್ಚಿದೆ. ಇತ್ತೀಚೆಗೆ ತೆರೆಕಂಡ ‘ರಾಧೆ ಶ್ಯಾಮ್’ ಸಿನಿಮಾ ಬಳಿಕ ಅವರಿಗೆ ಆಫರ್ಗಳು ಹೆಚ್ಚಿವೆ. ಇದು ಅವರ ಖುಷಿಗೆ ಕಾರಣ ಆಗಿದೆ.

ಈಗ ಪೂಜಾ ಹೆಗ್ಡೆ ಕಿತ್ತಳೆ ಬಣ್ಣ ಹೋಲುವ ಉಡುಗೆ ತೊಟ್ಟು ಕಿಲ್ಲಿಂಗ್ ಲುಕ್ ಕೊಟ್ಟಿದ್ದಾರೆ. ಅವರ ಫೋಟೋ ನೋಡಿ ಪಡ್ಡೆಗಳು ಖುಷಿ ಪಟ್ಟಿದ್ದಾರೆ. ಈ ಫೋಟೋಗಳು ಸಖತ್ ವೈರಲ್ ಆಗುತ್ತಿದೆ. ಈ ಫೋಟೋವನ್ನು ಅಭಿಮಾನಿಗಳು ಸಖತ್ ಇಷ್ಟಪಟ್ಟಿದ್ದಾರೆ.

ಪ್ರಭಾಸ್ ನಟನೆಯ ‘ರಾಧೆ ಶ್ಯಾಮ್’ ಕಳೆದ ವಾರ ತೆರೆಗೆ ಬಂದಿದೆ. ಈ ಸಿನಿಮಾದಲ್ಲಿ ಡಾಕ್ಟರ್ ಪಾತ್ರದಲ್ಲಿ ಪೂಜಾ ಹೆಗ್ಡೆ ಕಾಣಿಸಿಕೊಂಡಿದ್ದಾರೆ. ಪ್ರಭಾಸ್ ಜತೆ ಕಿಸ್ಸಿಂಗ್ ದೃಶ್ಯಗಳಲ್ಲೂ ಅವರು ಮಿಂಚಿದ್ದಾರೆ. ಇದು ಅನೇಕರ ಹುಬ್ಬೇರಿಸುವಂತೆ ಮಾಡಿದೆ.

‘ರಾಧೆ ಶ್ಯಾಮ್’ ಸಿನಿಮಾಗೆ ಹೇಳಿಕೊಳ್ಳುವಂತಹ ಉತ್ತಮ ವಿಮರ್ಶೆ ಸಿಕ್ಕಿಲ್ಲ. ಇದು ಪ್ರಭಾಸ್ ಅಭಿಮಾನಿಗಳಲ್ಲಿ ಬೇಸರ ತರಿಸಿದೆ. ಈ ಮೊದಲಿನ ಸಿನಿಮಾಗಳಿಗೆ ಹೋಲಿಕೆ ಮಾಡಿದರೆ, ಈ ಸಿನಿಮಾದಲ್ಲಿ ಪೂಜಾ ಹೆಗ್ಡೆ ಪಾತ್ರಕ್ಕೆ ಹೆಚ್ಚು ತೂಕ ಇದೆ.

ಪೂಜಾ ಹೆಗ್ಡೆ ಸೋಶಿಯಲ್ ಮೀಡಿಯಾದಲ್ಲಿ ಸಖತ್ ಆ್ಯಕ್ಟೀವ್ ಆಗಿದ್ದಾರೆ. ನಿತ್ಯ ಹೊಸಹೊಸ ಫೋಟೋ ಹಂಚಿಕೊಳ್ಳುತ್ತಾರೆ. ಅವರು ಹಲವು ಸಿನಿಮಾಗಳನ್ನು ಒಪ್ಪಿಕೊಂಡು ಅದರಲ್ಲಿ ನಟಿಸುತ್ತಿದ್ದಾರೆ.

ಪೂಜಾ ಹೆಗ್ಡೆ

TV9 Kannada
Read More




