- Kannada News Photo gallery Pranitha Subhash Blessed with Baby boy And Milana Nagaraj blessed baby girl cinema News in Kannada
ಎರಡನೇ ಮಗುವಿಗೆ ಜನ್ಮಕೊಟ್ಟ ಪ್ರಣಿತಾ ಸುಭಾಷ್; ಒಂದೇ ದಿನ ಎರಡು ನಟಿಯರಿಂದ ಗುಡ್ನ್ಯೂಸ್
ಪ್ರಣಿತಾ ಹಾಗೂ ಉದ್ಯಮಿ ನಿತಿನ್ ಕೊವಿಡ್ ಸಂದರ್ಭದಲ್ಲಿ ಮದುವೆ ಆಗಿದ್ದರು. ಈ ದಂಪತಿಗೆ 2022ರಲ್ಲಿ ಹೆಣ್ಣು ಮಗು ಜನಿಸಿದೆ. ಅವಳಿಗೆ ಅರ್ನಾ ಎಂದು ಹೆಸರು ಇಡಲಾಗಿದೆ. ಈಗ ಪ್ರಣಿತಾ ಗಂಡು ಮಗುವನ್ನು ಬರಮಾಡಿಕೊಂಡಿದ್ದಾರೆ. ಮಿಲನಾಗೆ ಹೆಣ್ಣು ಮಗು ಜನಿಸಿದೆ.
Updated on:Sep 05, 2024 | 2:34 PM

ಪ್ರಣಿತಾ ಸುಭಾಶ್ ಹಾಗೂ ನಿತೀನ್ ರಾಜು ದಂಪತಿಗೆ ಗಂಡು ಮಗು ಜನಿಸಿದೆ. ಎರಡನೇ ಬಾರಿಗೆ ತಾಯಿ ಆದ ಖುಷಿಯಲ್ಲಿ ಪ್ರಣಿತಾ ಇದ್ದಾರೆ. ಮಗುವಿನ ಮುಖ ಕೂಡ ರಿವೀಲ್ ಆಗಿದೆ. ಈ ಫೋಟೋ ನೋಡಿದ ಬಳಿಕ ಅವರಿಗೆ ಎಲ್ಲರೂ ಶುಭಾಶಯ ಕೋರುತ್ತಿದ್ದಾರೆ.

ಪ್ರಣಿತಾ ಹಾಗೂ ಉದ್ಯಮಿ ನಿತಿನ್ ಕೊವಿಡ್ ಸಂದರ್ಭದಲ್ಲಿ ಮದುವೆ ಆಗಿದ್ದರು. ಈ ದಂಪತಿಗೆ 2022ರಲ್ಲಿ ಹೆಣ್ಣು ಮಗು ಜನಿಸಿತು. ಅವಳಿಗೆ ಅರ್ನಾ ಎಂದು ಹೆಸರು ಇಡಲಾಗಿದೆ. ಈಗ ಪ್ರಣಿತಾ ಗಂಡು ಮಗುವನ್ನು ಬರಮಾಡಿಕೊಂಡಿದ್ದಾರೆ.

ಜುಲೈ 25ರಂದು ಪ್ರಣಿತಾ ಎರಡನೇ ಮಗು ಹೊಂದುತ್ತಿರುವ ಬಗ್ಗೆ ಅನೌನ್ಸ್ ಮಾಡಿದರು. ಸೆಪ್ಟೆಂಬರ್ನಲ್ಲಿ ಮಗು ಜನಿಸಲಿದೆ ಎಂದು ಹೇಳಿದ್ದರು. ಅಂತೆಯೇ ಈ ಜೋಡಿಗೆ ಗಂಡು ಮಗುವಿನ ಜನನ ಆಗಿದೆ. ದಂಪತಿಗೆ ಶುಭಾಶಯ ತಿಳಿಸುತ್ತಿದ್ದಾರೆ.

ಪ್ರಣಿತಾ ಅವರು ಇತ್ತೀಚೆಗೆ ಯಾವುದೇ ಹೊಸ ಸಿನಿಮಾ ಒಪ್ಪಿಕೊಂಡಿಲ್ಲ. ಸದ್ಯ ಅವರು ಎರಡನೇ ಮಗುವಿನ ಆರೈಕೆಯಲ್ಲಿ ಬ್ಯುಸಿ ಆಗಲಿದ್ದಾರೆ. ಆ ಬಳಿಕ ಅವರು ಹೊಸ ಸಿನಿಮಾ ಘೋಷಣೆ ಮಾಡೋ ಸಾಧ್ಯತೆ ಇದೆ.

ಕನ್ನಡದ ಮತ್ತೋರ್ವ ನಟಿ ಮಿಲನಾ ನಾಗರಾಜ್ಗೂ ಮಗು ಜನಿಸಿದೆ. ಈ ವಿಚಾರವನ್ನು ಅವರ ಪತಿ ಡಾರ್ಲಿಂಗ್ ಕೃಷ್ಣ ರಿವೀಲ್ ಮಾಡಿದ್ದಾರೆ. ಮಿಲನಾಗೆ ಹೆಣ್ಣು ಮಗು ಜನಿಸಿದೆ. ತಾಯಿ ಹಾಗೂ ಮಗು ಆರೋಗ್ಯವಾಗಿ ಇದೆ.
Published On - 1:05 pm, Thu, 5 September 24

ಪತ್ರಿಕೋದ್ಯಮಕ್ಕೆ ಕಾಲಿಟ್ಟು 9 ವರ್ಷ. ಸಂಯುಕ್ತ ಕರ್ನಾಟಕ, ವಿಜಯವಾಣಿ, ನ್ಯೂಸ್18 ಕನ್ನಡದಲ್ಲಿ ಕೆಲಸ ಮಾಡಿದ ಅನುಭವ ಇದೆ. ಈಗ ಟಿವಿ9 ಕನ್ನಡ ಡಿಜಿಟಲ್ನಲ್ಲಿ ಬರಹ ಕೃಷಿ ಮುಂದುವರಿಸಿದ್ದೇನೆ. ಸಿನಿಮಾ ರಂಗದ ಬಗ್ಗೆ ಮೊದಲಿನಿಂದಲೂ ಆಸಕ್ತಿ. ಅದರ ಜೊತೆ ಬರವಣಿಗೆಯೂ ಸೇರಿತು. ಈಗ ಅದುವೇ ಕಾಯಕ. ಸಿನಿಮಾ ವಿಮರ್ಶೆ, ಚಿತ್ರರಂಗದ ಗಾಸಿಪ್, ಹೊಸ ಸಿನಿಮಾ ಬಗ್ಗೆ ಅಪ್ಡೇಟ್ ನನ್ನ ಕಡೆಯಿಂದ. ಟ್ರಾವೆಲಿಂಗ್ ಕಡೆ ಹೆಚ್ಚು ಆಸಕ್ತಿ. ಓದುವುದು ಎಂದರೆ ಹುಚ್ಚು. ಸಿನಿಮಾ ನೋಡುವುದೂ ಆಸಕ್ತಿಗಳಲ್ಲಿ ಒಂದು. ಹಲವು ಸಿನಿಮಾ ನೋಡಿ ಈಗಾಗಲೇ ವಿಮರ್ಶೆ ಮಾಡಿ ನಿಮ್ಮ ಮುಂದಿಟ್ಟಿದ್ದೇನೆ.
Read More




