ಜೂ ಎನ್ಟಿಆರ್-ಪ್ರಶಾಂತ್ ನೀಲ್ ಸಿನಿಮಾ ಮುಹೂರ್ತ, ಬಿಡುಗಡೆ ದಿನಾಂಕವೂ ಘೋಷಣೆ
ಪ್ರಶಾಂತ್ ನೀಲ್ ಹಾಗೂ ಜೂ ಎನ್ಟಿಆರ್ ಕಾಂಬಿನೇಷನ್ನಲ್ಲಿ ಸಿನಿಮಾ ಘೋಷಣೆ ಮಾಡಿ ವರ್ಷಗಳೇ ಆಗಿದ್ದವು. ಇದೀಗ ಈ ಇಬ್ಬರು ದಿಗ್ಗಜರ ಸಿನಿಮಾ ಅಧಿಕೃತವಾಗಿ ಸೆಟ್ಟೇರಿದೆ. ಸಿನಿಮಾದ ಮುಹೂರ್ತ ಇಂದು ನಡೆದಿದ್ದು, ಸಿನಿಮಾ ಬಿಡುಗಡೆ ದಿನಾಂಕವೂ ಘೋಷಣೆ ಮಾಡಲಾಗಿದೆ.
Updated on:Aug 10, 2024 | 10:51 AM

ಜೂ ಎನ್ಟಿಆರ್ ಮತ್ತು ಪ್ರಶಾಂತ್ ನೀಲ್ ಒಟ್ಟಿಗೆ ಸಿನಿಮಾ ಮಾಡುವುದಾಗಿ ಘೋಷಿಸಿ ವರ್ಷಗಳೇ ಆಗಿದ್ದವು, ಇದೀಗ ಸಿನಿಮಾ ಅಧಿಕೃತವಾಗಿ ಪ್ರಾರಂಭವಾಗಿದೆ.

ಇಂದು (ಆಗಸ್ಟ್ 9) ಜೂ ಎನ್ಟಿಆರ್ ಹಾಗೂ ಪ್ರಶಾಂತ್ ನೀಲ್ ಕಾಂಬಿನೇಷನ್ನಲ್ಲಿ ತೆರೆಗೆ ಬರಲಿರುವ ‘ಡ್ರ್ಯಾಗನ್’ ಸಿನಿಮಾ ಮುಹೂರ್ತ ನಡೆದಿದೆ.

ಹೈದರಾಬಾದ್ನಲ್ಲಿ ಸರಳವಾಗಿಯೇ ಮುಹೂರ್ತ ಕಾರ್ಯಕ್ರಮ ನಡೆದಿದ್ದು, ಜೂ ಎನ್ಟಿಆರ್ ಕುಟುಂಬ ಹಾಗೂ ಪ್ರಶಾಂತ್ ನೀಲ್ ಕುಟುಂಬ ಭಾಗಿಯಾಗಿತ್ತು.

‘ಪುಷ್ಪ’ ಸಿನಿಮಾದ ನಿರ್ಮಾಣ ಸಂಸ್ಥೆಯಾದ ಮೈತ್ರಿ ಮೂವಿ ಮೇಕರ್ಸ್, ‘ಡ್ರ್ಯಾಗನ್’ ಸಿನಿಮಾವನ್ನು ನಿರ್ಮಾಣ ಮಾಡುತ್ತಿದೆ.

ಸಿನಿಮಾದ ಬಿಡುಗಡೆ ದಿನಾಂಕವನ್ನು ಸಹ ಘೋಷಿಸಲಾಗಿದ್ದು, ಜೂ ಎನ್ಟಿಆರ್-ನೀಲ್ ಕಾಂಬಿನೇಷನ್ ಸಿನಿಮಾ ಜನವರಿ 9, 2026ಕ್ಕೆ ತೆರೆಗೆ ಬರಲಿದೆ.

‘ಆರ್ಆರ್ಆರ್’ ಸಿನಿಮಾದ ಬಳಿಕ ಜೂ ಎನ್ಟಿಆರ್ ರೇಂಜ್ ಪ್ಯಾನ್ ಇಂಡಿಯಾ ಮಾತ್ರವಲ್ಲ ಪ್ಯಾನ್ ವರ್ಲ್ಡ್ ಲೆವೆಲ್ ಎತ್ತರಕ್ಕೆ ಏರಿದ್ದಾರೆ. ಇದೀಗ ‘ದೇವರ’ ಸಿನಿಮಾದಲ್ಲಿ ಜೂ ಎನ್ಟಿಆರ್ ನಟಿಸುತ್ತಿದ್ದಾರೆ.

ಪ್ರಶಾಂತ್ ನೀಲ್ ಸಹ ಸಖತ್ ಬ್ಯುಸಿಯಾಗಿದ್ದು, ಪ್ರಸ್ತುತ ‘ಸಲಾರ್ 2’ ಸಿನಿಮಾದ ನಿರ್ದೇಶನಕ್ಕೆ ರೆಡಿಯಾಗುತ್ತಿದ್ದಾರೆ.
Published On - 6:36 pm, Fri, 9 August 24

ಮಂಜುನಾಥ ಸಿ, ಬೆಂಗಳೂರು ಗ್ರಾಮಾಂತರ, ವಿಜಯರಪುರ ಪಟ್ಟಣ ನಿವಾಸಿ. ಕಳೆದ ಏಳು ವರ್ಷಗಳಿಂದ ಪತ್ರಿಕೋದ್ಯಮದಲ್ಲಿ ಸಕ್ರಿಯನಾಗಿದ್ದೇನೆ. ಕಳೆದ ಐದು ವರ್ಷದಿಂದ ಡಿಜಿಟಲ್ ಪತ್ರಿಕೋದ್ಯಮದಲ್ಲಿ ತೊಡಗಿಕೊಂಡಿದ್ದೇನೆ. ಈ ಹಿಂದೆ ಪ್ರಜಾವಾಣಿ, ಒನ್ ಇಂಡಿಯಾ ಕನ್ನಡ ಸಂಸ್ಥೆಗಳ ವಿವಿಧ ವಿಭಾಗಗಳಲ್ಲಿ ಕೆಲಸ ಮಾಡಿದ್ದೇನೆ. ಪ್ರಸ್ತುತ ಟಿವಿ9 ಕನ್ನಡ ಡಿಜಿಟಲ್ನ ಸಿನಿಮಾ ವಿಭಾಗದಲ್ಲಿ ಕೆಲಸ ಮಾಡುತ್ತಿದ್ದೇನೆ. ಮೆಚ್ಚಿನ ಹವ್ಯಾಸ ಸಿನಿಮಾ ವೀಕ್ಷಣೆ, ಪುಸ್ತಕಗಳನ್ನು ಓದುವುದು.
Read More




