ದೇವಕನ್ಯೆಯಾದ ಕಣ್ಸನ್ನೆ ಸುಂದರಿ ಪ್ರಿಯಾ ಪ್ರಕಾಶ್ ವಾರಿಯರ್
Priya Prakash Varrier: ಕೇವಲ ಒಂದೇ ಒಂದು ವಿಡಿಯೋ ತುಣುಕಿನಿಂದ ಪ್ರಿಯಾ ಪ್ರಕಾಶ್ ವಾರಿಯರ್ ರಾತ್ರೋರಾತ್ರಿ ಜನಪ್ರಿಯತೆ ಗಳಿಸಿದ ಪ್ರಿಯಾ ಪ್ರಕಾಶ್ ವಾರಿಯರ್ ಇದೀಗ ದೇವಕನ್ಯೆಯಾಗಿದ್ದಾರೆ.
Updated on: Dec 19, 2023 | 10:26 PM

ಕಣ್ಸನ್ನೆ ಸುಂದರಿ ಪ್ರಿಯಾ ವಾರಿಯರ್ ದೇವ ಕನ್ಯೆಯಾಗಿ ಬದಲಾಗಿದ್ದಾರೆ. ಏಂಜಲ್ ವೇಷ ತೊಟ್ಟ ಚಿತ್ರಗಳನ್ನು ನಟಿ ಇನ್ಸ್ಟಾ ನಲ್ಲಿ ಹಂಚಿಕೊಂಡಿದ್ದಾರೆ.

ಕೇವಲ ಒಂದೇ ಒಂದು ವಿಡಿಯೋ ತುಣುಕಿನಿಂದ ಪ್ರಿಯಾ ಪ್ರಕಾಶ್ ವಾರಿಯರ್ ರಾತ್ರೋರಾತ್ರಿ ಜನಪ್ರಿಯತೆ ಗಳಿಸಿದರು.

2019ರಲ್ಲಿ ಪ್ರಿಯಾ ಪ್ರಕಾಶ್ ವಾರಿಯರ್ ನಟಿಸಿದ್ದ ‘ಒರು ಅಡಾರ್ ಲವ್’ ಸಿನಿಮಾದ ಒಂದೇ ಒಂದು ದೃಶ್ಯ ಪ್ರಿಯಾಗೆ ದೊಡ್ಡ ಜನಪ್ರಿಯತೆ ಗಳಿಸಿಕೊಟ್ಟಿತು.

ಅದಾದ ಬಳಿಕ ಸಾಲು-ಸಾಲು ಸಿನಿಮಾಗಳಲ್ಲಿ ಪ್ರಿಯಾ ಪ್ರಕಾಶ್ ವಾರಿಯರ್ ನಟಿಸಿದರು, ನಟಿಸುತ್ತಲೇ ಇದ್ದಾರೆ.

ಕೇರಳದ ಈ ಚೆಲುವೆ ಮಲಯಾಳಂ ಸಿನಿಮಾಗಳು ಮಾತ್ರವೇ ಅಲ್ಲದೆ, ತೆಲುಗು, ಹಿಂದಿ ಈಗ ಕನ್ನಡ ಸಿನಿಮಾಗಳಲ್ಲಿಯೂ ನಟಿಸುತ್ತಿದ್ದಾರೆ.

ಕನ್ನಡದ ‘ವಿಷ್ಣುಪ್ರಿಯ’ ಸಿನಿಮಾದಲ್ಲಿ ಪ್ರಿಯಾ ಪ್ರಕಾಶ್ ವಾರಿಯರ್ ನಾಯಕಿ. ಈ ಸಿನಿಮಾಕ್ಕೆ ನಿರ್ಮಾಪಕ ಕೆ ಮಂಜು ಪುತ್ರ ಶ್ರೇಯಸ್ ನಾಯಕ.

ಪ್ರಿಯಾ ಪ್ರಕಾಶ್ ವಾರಿಯರ್ ಇನ್ಸ್ಟಾಗ್ರಾಂನಲ್ಲಿ ಬಹಳ ಸಕ್ರಿಯವಾಗಿದ್ದಾರೆ. ತಮ್ಮ ಗ್ಲಾಮರಸ್ ಚಿತ್ರಗಳನ್ನು ಹಂಚಿಕೊಳ್ಳುತ್ತಿರುತ್ತಾರೆ.




