- Kannada News Photo gallery Priyamani Birthday: The Family Man 2 actress Priyamani busy with multiple projects
Priyamani Birthday: ಬಹುಬೇಡಿಕೆಯ ನಟಿ ಪ್ರಿಯಾಮಣಿಗೆ ಹುಟ್ಟುಹಬ್ಬದ ಸಡಗರ; ರಾಷ್ಟ್ರ ಪ್ರಶಸ್ತಿ ಪುರಸ್ಕೃತ ಬೆಡಗಿ ಈಗ ಸಖತ್ ಬ್ಯುಸಿ
ಖ್ಯಾತ ನಟಿ ಪ್ರಿಯಾಮಣಿ ಅವರಿಗೆ ಇಂದು (ಜೂನ್ 4) ಜನ್ಮದಿನದ ಸಂಭ್ರಮ. ಹಲವು ಪ್ರಾಜೆಕ್ಟ್ಗಳಲ್ಲಿ ಅವರು ಬ್ಯುಸಿ ಆಗಿದ್ದಾರೆ.
Updated on:Jun 04, 2022 | 8:15 AM

Priyamani Birthday: The Family Man 2 actress Priyamani busy with multiple projects

Priyamani Birthday: The Family Man 2 actress Priyamani busy with multiple projects

ಸಿನಿಮಾ ಮಾತ್ರವಲ್ಲದೇ ವೆಬ್ ಸಿರೀಸ್ ದುನಿಯಾದಲ್ಲೂ ಪ್ರಿಯಾಮಣಿ ಫೇಮಸ್ ಆಗಿದ್ದಾರೆ. ಅವರು ನಟಿಸಿದ ‘ದಿ ಫ್ಯಾಮಿಲಿ ಮ್ಯಾನ್’ ವೆಬ್ ಸರಣಿ ತುಂಬ ಜನಪ್ರಿಯತೆ ಪಡೆದುಕೊಂಡಿತು. ಇದರ 2 ಸೀಸನ್ಗಳಲ್ಲಿ ಅವರು ಕಾಣಿಸಿಕೊಂಡಿದ್ದಾರೆ. ಅವರ ಪಾತ್ರ ಜನಕ್ಕೆ ಇಷ್ಟ ಆಗಿದೆ.

ಕಿರುತೆರೆಯಲ್ಲೂ ಪ್ರಿಯಾಮಣಿ ಅವರಿಗೆ ಹೆಚ್ಚು ಡಿಮ್ಯಾಂಡ್ ಇದೆ. ಅನೇಕ ರಿಯಾಲಿಟಿ ಶೋಗಳಿಗೆ ಜಡ್ಜ್ ಆಗಿ ಅವರು ಕೆಲಸ ಮಾಡಿದ್ದಾರೆ. ಆ ಮೂಲಕವೂ ಅವರು ಜನರಿಗೆ ಹತ್ತಿರ ಆಗಿದ್ದಾರೆ. ಕೆಲವು ಕಿರುಚಿತ್ರಗಳಲ್ಲೂ ಪ್ರಿಯಾಮಣಿ ನಟಿಸಿದ್ದಾರೆ.

ಹಲವು ಖ್ಯಾತ ನಿರ್ದೇಶಕರ ಜೊತೆಗೆ ಪ್ರಿಯಾಮಣಿ ಕೆಲಸ ಮಾಡಿದ್ದಾರೆ. ಪುನೀತ್ ರಾಜ್ಕುಮಾರ್, ಶಾರುಖ್ ಖಾನ್ ಮುಂತಾದ ಸ್ಟಾರ್ ಕಲಾವಿದರ ಜೊತೆ ತೆರೆ ಹಂಚಿಕೊಂಡ ಖ್ಯಾತಿ ಅವರಿಗೆ ಇದೆ. ಮುಸ್ತಫಾ ರಾಜ್ ಜೊತೆ ಅವರು ಸುಖವಾಗಿ ದಾಂಪತ್ಯ ಜೀವನ ನಡೆಸುತ್ತಿದಾರೆ.
Published On - 8:14 am, Sat, 4 June 22




