AQI
TV9 Network
User
Sign In

By signing in or creating an account, you agree with Associated Broadcasting Company's Terms & Conditions and Privacy Policy.

Allu Arjun: ಹೇಗಿದೆ ನೋಡಿ ಅಲ್ಲು ಅರ್ಜುನ್ ಒಡೆತನದ ಏಳು ಕೋಟಿ ರೂಪಾಯಿ ವ್ಯಾನಿಟಿ ವ್ಯಾನ್; ವಿಶೇಷತೆಗಳೇನು?

ಕಪ್ಪು ಬಣ್ಣ ಎಂದರೆ ಅಲ್ಲು ಅರ್ಜುನ್​ಗೆ ಸಖತ್ ಇಷ್ಟ​. ಹೀಗಾಗಿ ಈ ವ್ಯಾನಿಟಿ ವ್ಯಾನ್ ಕಾರನ್ನು ಸಂಪೂರ್ಣವಾಗಿ ಕಪ್ಪು ಬಣ್ಣದಲ್ಲಿರುವಂತೆ ವಿಶೇಷವಾಗಿ ವಿನ್ಯಾಸಗೊಳಿಸಲಾಗಿದೆ.

ರಾಜೇಶ್ ದುಗ್ಗುಮನೆ
|

Updated on:Jan 30, 2024 | 1:56 PM

Share
ಸಿನಿಮಾಗಳ ಹೊರತಾಗಿ ಅಲ್ಲು ಅರ್ಜುನ್‌ಗೆ ಕಾರುಗಳ ಬಗ್ಗೆ ವಿಶೇಷ ಆಸಕ್ತಿ ಇದೆ. ಅವರ ಗ್ಯಾರೇಜ್‌ನಲ್ಲಿ ದೊಡ್ಡ ಕಾರ್ ಕಲೆಕ್ಷನ್ ಇದೆ. ಬಿಎಂಡಬ್ಲ್ಯೂ ಮತ್ತು ಜಾಗ್ವಾರ್​ ಅಂಥ ಐಷಾರಾಮಿ ಕಾರುಗಳು ಅಲ್ಲು ಅರ್ಜುನ್ ಬಳಿ ಇವೆ.

1 / 5
ಇವೆಲ್ಲವೂ ಒಂದು ಕಡೆಯಾದರೆ ಅಲ್ಲು ಅರ್ಜುನ್ ಅವರ ವ್ಯಾನಿಟಿ ವ್ಯಾನ್ ಮತ್ತೊಂದು ಆಕರ್ಷಣೆ ಎಂದೇ ಹೇಳಬಹುದು. ಚಕ್ರಗಳ ಮೇಲೆ ಇರೋ ಸ್ವರ್ಗ ಎಂದು ಕೆಲವರು ಇದನ್ನು ಕರೆದಿದ್ದಿದೆ. ಈ ಅತ್ಯಂತ ಐಷಾರಾಮಿ ವ್ಯಾನಿಟಿ ವ್ಯಾನ್ ಬೆಲೆ 7 ಕೋಟಿ ರೂಪಾಯಿ.

2 / 5
ಅಲ್ಲು ಅರ್ಜುನ್ ಅವರಿಗೆ ಕಪ್ಪು ಬಣ್ಣ ಎಂದರೆ ಸಖತ್​ ಇಷ್ಟ. ಹೀಗಾಗಿ, ಅವರು ಕಪ್ಪು ಬಣ್ಣದ ಬಟ್ಟೆ ಧರಿಸಲು ಆಸಕ್ತಿ ತೋರಿಸುತ್ತಾರೆ. ಹೀಗಾಗಿ ಈ ವ್ಯಾನಿಟಿ ವ್ಯಾನ್ ಕಾರನ್ನು ಸಂಪೂರ್ಣವಾಗಿ ಕಪ್ಪು ಬಣ್ಣದಲ್ಲಿರುವಂತೆ ವಿಶೇಷವಾಗಿ ವಿನ್ಯಾಸಗೊಳಿಸಲಾಗಿದೆ.

3 / 5
ವ್ಯಾನಿಟಿ ವ್ಯಾನ್​ನಲ್ಲಿ ಲಿವಿಂಗ್ ಏರಿಯಾ, ಪ್ರೀಮಿಯಂ ಲಾಂಜ್, ಮಲಗಲು ವಿಶಾಲವಾದ ಕೋಣೆ, ವಿಶೇಷ ಮೇಕಪ್ ರೂಮ್, ಬೃಹತ್ ಟಿವಿ, ಫ್ರಿಡ್ಜ್ ಮುಂತಾದ ಆಧುನಿಕ ಸೌಕರ್ಯಗಳನ್ನು ಇದು ಹೊಂದಿದೆ.

4 / 5
ಆಗೊಮ್ಮೆ ಈಗೊಮ್ಮೆ ಅಲ್ಲು ಅರ್ಜುನ್ ತಮ್ಮ ವ್ಯಾನಿಟಿ ವ್ಯಾನ್‌ನ ಫೋಟೋಗಳನ್ನು ಸಾಮಾಜಿಕ ಮಾಧ್ಯಮದಲ್ಲಿ ಹಂಚಿಕೊಳ್ಳುತ್ತಾರೆ. ಅಲ್ಲು ಅರ್ಜುನ್ ಸಿನಿಮಾ ಸೆಟ್​​ನಲ್ಲಿ ಈ ವಾಹನ ಕಾಣಿಸಿಕೊಳ್ಳುತ್ತದೆ.

5 / 5

Published On - 1:56 pm, Tue, 30 January 24

Rajesh Duggumane
Rajesh Duggumane

ಪತ್ರಿಕೋದ್ಯಮಕ್ಕೆ ಕಾಲಿಟ್ಟು 9 ವರ್ಷ. ಸಂಯುಕ್ತ ಕರ್ನಾಟಕ, ವಿಜಯವಾಣಿ, ನ್ಯೂಸ್18 ಕನ್ನಡದಲ್ಲಿ ಕೆಲಸ ಮಾಡಿದ ಅನುಭವ ಇದೆ. ಈಗ ಟಿವಿ9 ಕನ್ನಡ ಡಿಜಿಟಲ್ನಲ್ಲಿ ಬರಹ ಕೃಷಿ ಮುಂದುವರಿಸಿದ್ದೇನೆ. ಸಿನಿಮಾ ರಂಗದ ಬಗ್ಗೆ ಮೊದಲಿನಿಂದಲೂ ಆಸಕ್ತಿ. ಅದರ ಜೊತೆ ಬರವಣಿಗೆಯೂ ಸೇರಿತು. ಈಗ ಅದುವೇ ಕಾಯಕ. ಸಿನಿಮಾ ವಿಮರ್ಶೆ, ಚಿತ್ರರಂಗದ ಗಾಸಿಪ್, ಹೊಸ ಸಿನಿಮಾ ಬಗ್ಗೆ ಅಪ್ಡೇಟ್ ನನ್ನ ಕಡೆಯಿಂದ. ಟ್ರಾವೆಲಿಂಗ್ ಕಡೆ ಹೆಚ್ಚು ಆಸಕ್ತಿ. ಓದುವುದು ಎಂದರೆ ಹುಚ್ಚು. ಸಿನಿಮಾ ನೋಡುವುದೂ ಆಸಕ್ತಿಗಳಲ್ಲಿ ಒಂದು. ಹಲವು ಸಿನಿಮಾ ನೋಡಿ ಈಗಾಗಲೇ ವಿಮರ್ಶೆ ಮಾಡಿ ನಿಮ್ಮ ಮುಂದಿಟ್ಟಿದ್ದೇನೆ.

Read More
Follow Us