- Kannada News Photo gallery Pushpa 2 Actor Allu Arjun Vanity Van Specialty Features And Price here is the details
Allu Arjun: ಹೇಗಿದೆ ನೋಡಿ ಅಲ್ಲು ಅರ್ಜುನ್ ಒಡೆತನದ ಏಳು ಕೋಟಿ ರೂಪಾಯಿ ವ್ಯಾನಿಟಿ ವ್ಯಾನ್; ವಿಶೇಷತೆಗಳೇನು?
ಕಪ್ಪು ಬಣ್ಣ ಎಂದರೆ ಅಲ್ಲು ಅರ್ಜುನ್‌ಗೆ ಸಖತ್ ಇಷ್ಟ. ಹೀಗಾಗಿ ಈ ವ್ಯಾನಿಟಿ ವ್ಯಾನ್ ಕಾರನ್ನು ಸಂಪೂರ್ಣವಾಗಿ ಕಪ್ಪು ಬಣ್ಣದಲ್ಲಿರುವಂತೆ ವಿಶೇಷವಾಗಿ ವಿನ್ಯಾಸಗೊಳಿಸಲಾಗಿದೆ.
Updated on:Jan 30, 2024 | 1:56 PM

ಸಿನಿಮಾಗಳ ಹೊರತಾಗಿ ಅಲ್ಲು ಅರ್ಜುನ್‌ಗೆ ಕಾರುಗಳ ಬಗ್ಗೆ ವಿಶೇಷ ಆಸಕ್ತಿ ಇದೆ. ಅವರ ಗ್ಯಾರೇಜ್‌ನಲ್ಲಿ ದೊಡ್ಡ ಕಾರ್ ಕಲೆಕ್ಷನ್ ಇದೆ. ಬಿಎಂಡಬ್ಲ್ಯೂ ಮತ್ತು ಜಾಗ್ವಾರ್ ಅಂಥ ಐಷಾರಾಮಿ ಕಾರುಗಳು ಅಲ್ಲು ಅರ್ಜುನ್ ಬಳಿ ಇವೆ.

ಇವೆಲ್ಲವೂ ಒಂದು ಕಡೆಯಾದರೆ ಅಲ್ಲು ಅರ್ಜುನ್ ಅವರ ವ್ಯಾನಿಟಿ ವ್ಯಾನ್ ಮತ್ತೊಂದು ಆಕರ್ಷಣೆ ಎಂದೇ ಹೇಳಬಹುದು. ಚಕ್ರಗಳ ಮೇಲೆ ಇರೋ ಸ್ವರ್ಗ ಎಂದು ಕೆಲವರು ಇದನ್ನು ಕರೆದಿದ್ದಿದೆ. ಈ ಅತ್ಯಂತ ಐಷಾರಾಮಿ ವ್ಯಾನಿಟಿ ವ್ಯಾನ್ ಬೆಲೆ 7 ಕೋಟಿ ರೂಪಾಯಿ.

ಅಲ್ಲು ಅರ್ಜುನ್ ಅವರಿಗೆ ಕಪ್ಪು ಬಣ್ಣ ಎಂದರೆ ಸಖತ್ ಇಷ್ಟ. ಹೀಗಾಗಿ, ಅವರು ಕಪ್ಪು ಬಣ್ಣದ ಬಟ್ಟೆ ಧರಿಸಲು ಆಸಕ್ತಿ ತೋರಿಸುತ್ತಾರೆ. ಹೀಗಾಗಿ ಈ ವ್ಯಾನಿಟಿ ವ್ಯಾನ್ ಕಾರನ್ನು ಸಂಪೂರ್ಣವಾಗಿ ಕಪ್ಪು ಬಣ್ಣದಲ್ಲಿರುವಂತೆ ವಿಶೇಷವಾಗಿ ವಿನ್ಯಾಸಗೊಳಿಸಲಾಗಿದೆ.

ವ್ಯಾನಿಟಿ ವ್ಯಾನ್ನಲ್ಲಿ ಲಿವಿಂಗ್ ಏರಿಯಾ, ಪ್ರೀಮಿಯಂ ಲಾಂಜ್, ಮಲಗಲು ವಿಶಾಲವಾದ ಕೋಣೆ, ವಿಶೇಷ ಮೇಕಪ್ ರೂಮ್, ಬೃಹತ್ ಟಿವಿ, ಫ್ರಿಡ್ಜ್ ಮುಂತಾದ ಆಧುನಿಕ ಸೌಕರ್ಯಗಳನ್ನು ಇದು ಹೊಂದಿದೆ.

ಆಗೊಮ್ಮೆ ಈಗೊಮ್ಮೆ ಅಲ್ಲು ಅರ್ಜುನ್ ತಮ್ಮ ವ್ಯಾನಿಟಿ ವ್ಯಾನ್‌ನ ಫೋಟೋಗಳನ್ನು ಸಾಮಾಜಿಕ ಮಾಧ್ಯಮದಲ್ಲಿ ಹಂಚಿಕೊಳ್ಳುತ್ತಾರೆ. ಅಲ್ಲು ಅರ್ಜುನ್ ಸಿನಿಮಾ ಸೆಟ್ನಲ್ಲಿ ಈ ವಾಹನ ಕಾಣಿಸಿಕೊಳ್ಳುತ್ತದೆ.
Published On - 1:56 pm, Tue, 30 January 24




