AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

ರಾಘವೇಂದ್ರ ರಾಜ್​ಕುಮಾರ್​, ಶ್ರುತಿ ನಟನೆಯ ‘13’ ಸಿನಿಮಾ ಈ ವಾರ ಬಿಡುಗಡೆ; ಏನಿದರ ವಿಶೇಷ?

ನಟ ರಾಘವೇಂದ್ರ ರಾಜ್​ಕುಮಾರ್​ ಅವರು ತಮಗೆ ಒಪ್ಪುವಂತಹ ಪಾತ್ರಗಳನ್ನು ಆಯ್ಕೆ ಮಾಡಿಕೊಂಡು ಪ್ರೇಕ್ಷಕರಿಗೆ ಮನರಂಜನೆ ನೀಡುತ್ತಿದ್ದಾರೆ. ಅವರು ನಟಿಸಿರುವ ‘13’ ಸಿನಿಮಾ ಈ ವಾರ (ಸೆ.15) ಬಿಡುಗಡೆ ಆಗುತ್ತಿದೆ. ಭಾವೈಕ್ಯತೆಯ ಕಹಾನಿಯನ್ನು ಈ ಸಿನಿಮಾ ಒಳಗೊಂಡಿದೆ. ಅಲ್ಲದೇ, 13 ಕೋಟಿ ರೂಪಾಯಿ ದುಡ್ಡಿನ ಸುತ್ತಲೂ ಈ ಚಿತ್ರದ ಕಥೆ ಸಾಗುತ್ತದೆ.

ಮದನ್​ ಕುಮಾರ್​
|

Updated on: Sep 14, 2023 | 2:55 PM

Share
ರಾಘವೇದ್ರ ರಾಜ್‌ಕುಮಾರ್ ಅವರು ‘13’ ಸಿನಿಮಾದಲ್ಲಿ ಗುಜರಿ ಅಂಗಡಿ ಮಾಲೀಕ ಮೋಹನ್ ಕುಮಾರ್ ಎಂಬ ಪಾತ್ರ ಮಾಡಿದ್ದಾರೆ. ಅವರ ಜೊತೆ ಹಿರಿಯ ನಟಿ ಶ್ರುತಿ ಅವರು ಸಾಯಿರಾ ಭಾನು ಎಂಬ ಮುಸ್ಲಿಂ ಮಹಿಳೆಯ ಪಾತ್ರಕ್ಕೆ ಬಣ್ಣ ಹಚ್ಚಿದ್ದಾರೆ. ಈ ಸಿನಿಮಾದ ಪಾತ್ರವರ್ಗದಲ್ಲಿ ಖ್ಯಾತ ನಟ ಪ್ರಮೋದ್ ಶೆಟ್ಟಿ ಕೂಡ ಇದ್ದಾರೆ. ಅವರು ‌ಪೊಲೀಸ್ ಅಧಿಕಾರಿಯ ಪಾತ್ರವನ್ನು ಮಾಡಿದ್ದಾರೆ.

1 / 5
‘ಪಲ್ಲಕ್ಕಿ’ ಸಿನಿಮಾ ಖ್ಯಾತಿಯ ನಿರ್ದೇಶಕ ನರೇಂದ್ರ ಬಾಬು ಅವರ ‘13’ ಸಿನಿಮಾಗೆ ನಿರ್ದೇಶನ ಮಾಡಿದ್ದಾರೆ. ಈ ಸಿನಿಮಾಗೆ ಅವರೇ ಕಥೆ, ಚಿತ್ರಕಥೆ ಬರೆದಿದ್ದಾರೆ. ಸಮಾಜಸೇವಕ ಅನಿಲ್ ಕುಮಾರ್ ಅವರು ಅರ್ಪಿಸುವ ಈ ಸಿನಿಮಾವನ್ನು ‘ಯುವಿ ಪ್ರೊಡಕ್ಷನ್ಸ್’ ಬ್ಯಾನರ್​ ಮೂಲಕ ಮಂಜುನಾಥ್ ಗೌಡ, ಕೆ. ಸಂಪತ್ ಕುಮಾರ್, ಹೆಚ್.ಎಸ್. ಮಂಜುನಾಥ್ ಮತ್ತು ಸಿ. ಕೇಶವಮೂರ್ತಿಅವರು ನಿರ್ಮಿಸಿದ್ದಾರೆ.

2 / 5
ಹಿಂದೂ-ಮುಸ್ಲಿಂ ಎಂಬ ತಾರತಮ್ಯ ಇಲ್ಲದೇ ನಾಯಕ ಮತ್ತು ನಾಯಕಿ ಗಂಡ-ಹೆಂಡತಿ ಆಗಿ ಅನ್ಯೋನ್ಯವಾಗಿ ಬದುಕು ನಡೆಸುತ್ತಿರುವಾಗ ಒಂದು ಘಟನೆ ನಡೆಯುತ್ತದೆ. ಅವರ ಜೀವನದಲ್ಲಿ ಅನೇಕ ತಿರುವುಗಳು ಎದರಾಗುತ್ತವೆ. ಅದು ಅಂತಿಮವಾಗಿ ಅವರನ್ನು ಯಾವ ಹಂತಕ್ಕೆ ಕರೆದುಕೊಂಡು ಹೋಗುತ್ತದೆ ಎಂಬುದು ‘13’ ಸಿನಿಮಾದ ಕಥಾಸಾರಾಂಶ.

3 / 5
‘13’ ಸಿನಿಮಾದ ಹಾಡುಗಳು ಮತ್ತು ಟ್ರೇಲರ್ ಈಗಾಗಲೇ ವೈರಲ್ ಆಗಿದೆ. ಸಿನಿಪ್ರಿಯರಿಗೆ ಇದು ಇಷ್ಟವಾಗಿದೆ. ಸಿನಿಮಾದಲ್ಲಿ ಐಟಂ ಸಾಂಗ್, ಮದ್ಯಪಾನದ ದೃಶ್ಯಗಳು ಇರುವುದರಿಂದ ಈ ಚಿತ್ರಕ್ಕೆ ‘ಯು/ಎ’ ಪ್ರಮಾಣ ಪತ್ರ ಸಿಕ್ಕಿದೆ. ಯಾವುದೇ ಕಟ್ಸ್​ ನೀಡಿಲ್ಲ. ಈ ಸಿನಿಮಾಗೆ ಶೋಗನ್‌ಬಾಬು ಸಂಗೀತ ನಿರ್ದೇಶನ ಮಾಡಿದ್ದಾರೆ. ಚಿತ್ರದಲ್ಲಿ ಮೂರು ಹಾಡುಗಳಿವೆ.

4 / 5
ಅಜಯ್ ಮಂಜು ಅವರು ‘13’ ಸಿನಿಮಾಗೆ ಛಾಯಾಗ್ರಹಣ ಮಾಡಿದ್ದಾರೆ. ಗಿರೀಶ್ ಕುಮಾರ್ ಅವರ ಸಂಕಲನದ ಜವಾಬ್ದಾರಿ ನಿಭಾಯಿಸಿದ್ದಾರೆ.ಮದನ್ ಹರಿಣಿ, ಶಶಿಕುಮಾರ್ ಅವರು ಡ್ಯಾನ್ಸ್​ ಕೊರಿಯೋಗ್ರಫಿ ಮಾಡಿದ್ದಾರೆ. ಜಯಸಿಂಹ ಅವರು ಸಂಭಾಷಣೆ ಬರೆದಿದ್ದಾರೆ. ‘ಕಾಮಿಡಿ ಕಿಲಾಡಿಗಳು’ ಲೋಕೇಶ್, ವಿನಯ ಸೂರ್ಯ, ದಿಲೀಪ್ ಪೈ ಮುಂತಾದವರು ಅಭಿನಯಿಸಿದ್ದಾರೆ. ಜಾಕ್ ಮಂಜು ಅವರ ‘ಶಾಲಿನಿ ಎಂಟರ್​ಪ್ರೈಸಸ್’ ಮೂಲಕ ಚಿತ್ರ ಬಿಡುಗಡೆ ಆಗುತ್ತಿದೆ.

5 / 5
ಎಸ್​ಯುವಿಯಲ್ಲಿ ರಾಶಿಗಟ್ಟಲೆ ಶಾಲಾ ಮಕ್ಕಳನ್ನು ತುಂಬಿದ ವಿಡಿಯೋ ವೈರಲ್

ಕನಸಿನಲ್ಲಿ ಬಂದ ದೇವರು ಹೇಳಿದ್ದಕ್ಕೆ ಮಣ್ಣು ಅಗೆದಾಗ ನಡೆಯಿತು ಅಚ್ಚರಿ!

ಈ ವರ್ಷದ ಮೊದಲ ಸೂಪರ್ ಮೂನ್ ಭಾರತದಲ್ಲಿ ಕಂಡಿದ್ದು ಹೀಗೆ; ವಿಡಿಯೋ ವೈರಲ್

ನಟ ಭಯಂಕರ ವಜ್ರಮುನಿ ಅವರ ಕೊನೆಯ ದಿನಗಳು ಹೇಗಿದ್ದವು: ವಿಡಿಯೋ

ಕಾನೂನು ಸುವ್ಯವಸ್ಥೆ ಕಾಪಾಡೋದು ಬಿಟ್ಟು ಶಾಸಕನ ಕಾಪಾಡುತ್ತಿದ್ದಾರೆ: ಜೋಶಿ

ಮೃತ ರಾಜಶೇಖರ್​ ಕುಟುಂಬಕ್ಕೆ 25 ಲಕ್ಷ ರೂ ಪರಿಹಾರ ನೀಡಿದ ಸಚಿವ ಜಮೀರ್

ಹಾರ್ದಿಕ್ ಸಿಡಿಲಬ್ಬರ; ಲಿಸ್ಟ್​ ಎ ಕ್ರಿಕೆಟ್‌ನಲ್ಲಿ ಚೊಚ್ಚಲ ಶತಕ

ಸುಂಟರಗಾಳಿಗೆ ಕುಸಿದ ಪೆಂಡಾಲ್​​: ಸಚಿವ ಸತೀಶ್​ ಜಾರಕಿಹೊಳಿ ಪಾರು

ವೆನೆಜುವೆಲಾ ಮೇಲೆ ಅಮೆರಿಕದಿಂದ ವೈಮಾನಿಕ ದಾಳಿ; ತುರ್ತು ಪರಿಸ್ಥಿತಿ ಘೋಷಣೆ

ಬಳ್ಳಾರಿ ಗಲಭೆ: ರೆಡ್ಡಿ, ಶ್ರೀರಾಮುಲುಗೆ ಫೋನ್​ ಮಾಡಿ ಧೈರ್ಯ ಹೇಳಿದ ದೇವೇಗೌಡ