- Kannada News Photo gallery Rain from last one week across Yadgir district: hundreds of acres of crops destroyed, demand for compensation, taja suddi
ಯಾದಗಿರಿ ಜಿಲ್ಲೆಯಾದ್ಯಂತ ಕಳೆದ ಒಂದು ವಾರದಿಂದ ಮಳೆ: ನೂರಾರು ಎಕರೆ ಬೆಳೆ ನಾಶ, ಪರಿಹಾರಕ್ಕೆ ಆಗ್ರಹ
ಯಾದಗಿರಿ ಜಿಲ್ಲೆಯಾದ್ಯಂತ ಕಳೆದ ಒಂದು ವಾರದಿಂದ ಮಳೆರಾಯ ನಿರಂತರವಾಗಿ ಅಬ್ಬರಿಸಿದ್ದಾನೆ. ಮಳೆರಾಯನ ಅಬ್ಬರಕ್ಕೆ ಜಿಲ್ಲೆಯಲ್ಲಿ ನಾನಾ ರೀತಿಯ ಅವಾಂತರಗಳು ಸೃಷ್ಟಿಯಾಗಿವೆ. ಯಡಹಳ್ಳಿ ಕೆರೆ ಕೋಡಿ ಎತ್ತರಿಸಿದ್ದಕ್ಕೆ ಹಿನ್ನೀರಿನಿಂದ ನೂರಾರು ಎಕರೆ ಬೆಳೆ ನಾಶವಾಗಿದೆ. ಸೂಕ್ತ ಪರಿಹಾರ ನೀಡುವಂತೆ ರಾಜ್ಯ ಸರ್ಕಾರಕ್ಕೆ ರೈತರು ಆಗ್ರಹಿಸಿದ್ದಾರೆ.
Updated on: Sep 07, 2024 | 4:25 PM

ಅಸ್ನಾ ಚಂಡಮಾರುತ ಯಾದಗಿರಿ ಜಿಲ್ಲೆಗೂ ದಾಳಿ ಮಾಡಿದೆ. ತೆಲಂಗಾಣದ ಗಡಿಯನ್ನ ಯಾದಗಿರಿ ಹಂಚಿಕೊಂಡ ಕಾರಣಕ್ಕೆ ಕಳೆದ ಒಂದು ವಾರದಿಂದ ಮಳೆರಾಯ ಅಬ್ಬರಿಸಿ ಬೊಬ್ಬೆರೆದಿದ್ದಾನೆ. ಪರಿಣಾಮ ಕೆರೆ-ಕಟ್ಟೆ, ಹಳ್ಳ-ಕೊಳ್ಳಗಳು ಭರ್ತಿಯಾಗಿವೆ.

ಯಡಹಳ್ಳಿ ಕೆರೆ ಕೋಡಿ ಎತ್ತರಿಸಿದ್ದಕ್ಕೆ ಹಿನ್ನೀರಿನಿಂದ ಯಾದಗಿರಿ ತಾಲೂಕಿನ ಯಡಹಳ್ಳಿ ಹಾಗೂ ಹತ್ತಿಕುಣಿ ಗ್ರಾಮದ ನೂರಾರು ಎಕರೆ ಬೆಳೆ ನಾಶ ಜಲಾವೃತವಾಗಿವೆ.

ಎಕರೆಗೆ 20 ರಿಂದ 25 ಸಾವಿರ ರೂ. ಖರ್ಚು ಮಾಡಿ ರೈತರು ಬೆಳೆ ಬೆಳೆದಿದ್ದರು. ಆದರೆ ಬೆಳೆ ಸಂಪೂರ್ಣವಾಗಿ ಜಲಾವೃತವಾತಗೊಂಡು ನಾಶವಾಗಿ ಹೋಗಿದ್ದು, ಬೆಳೆ ಕಳೆದುಕೊಂಡ ರೈತರು ಕಂಗಲಾಗಿದ್ದಾರೆ.

ಹತ್ತಿ, ಹೆಸರು, ತೊಗರಿ, ಭತ್ತದ ಬೆಳೆ ಜಲಾವೃತದಿಂದ ರೈತರಿಗೆ ನಷ್ಟ ಉಂಟಾಗಿದ್ದು, ಸೂಕ್ತ ಪರಿಹಾರ ನೀಡುವಂತೆ ರಾಜ್ಯ ಸರ್ಕಾರಕ್ಕೆ ರೈತರು ಆಗ್ರಹಿಸಿದ್ದಾರೆ.

ಇನ್ನು ಮಳೆರಾಯನ ಅಬ್ಬರಕ್ಕೆ ಜಿಲ್ಲೆಯಲ್ಲಿ ನಾನಾ ರೀತಿಯ ಅವಾಂತರಗಳು ಸಂಭವಿಸಿವೆ. ಜಿಲ್ಲೆಯ ಹಲವು ಕಡೆ ಸೇತುವೆಗಳು ಮುಳುಗಡೆಯಾಗಿವೆ.

ಕಳೆದ ಹತ್ತು ವರ್ಷಗಳಿಂದ ಪತ್ರಿಕೋದ್ಯಮದಲ್ಲಿ ಕೆಲಸ ಮಾಡಿತ್ತಿದ್ದೆನೆ. ಬೆಂಗಳೂರಿನಿಂದ ಮಾಧ್ಯಮ ವೃತ್ತಿಯನ್ನ ಆರಂಬಿಸಿದ್ದು ಎರಡು ವರ್ಷಗಳ ಕಾಲ ಬೆಂಗಳೂರಿನಲ್ಲಿ ಮೆಟ್ರೊ ರಿಪೋರ್ಟರ್ ಆಗಿ ಕೆಲಸ ನಿರ್ವಹಿದ್ದೆನೆ. ಸದ್ಯ ಯಾದಗಿರಿ ಜಿಲ್ಲೆಯಲ್ಲಿ ಕಳೆದ ಎಂಟು ವರ್ಷಗಳಿಂದ ಕೆಲಸ ನಿರ್ವಹಿಸುತ್ತಿದ್ದೆನೆ.. ನನ್ನ ಹವ್ಯಾಸ ಕ್ರಿಕೆಟ್ ಆಡೋದು,ಮಾನವೀಯ ಮೌಲ್ಯ ಮೌಲ್ಯಯುಳ್ಳ ಸುದ್ದಿಗಳನ್ನ ಮಾಡೋದು.
Read More



