- Kannada News Photo gallery Rain from last one week across Yadgir district: hundreds of acres of crops destroyed, demand for compensation, taja suddi
ಯಾದಗಿರಿ ಜಿಲ್ಲೆಯಾದ್ಯಂತ ಕಳೆದ ಒಂದು ವಾರದಿಂದ ಮಳೆ: ನೂರಾರು ಎಕರೆ ಬೆಳೆ ನಾಶ, ಪರಿಹಾರಕ್ಕೆ ಆಗ್ರಹ
ಯಾದಗಿರಿ ಜಿಲ್ಲೆಯಾದ್ಯಂತ ಕಳೆದ ಒಂದು ವಾರದಿಂದ ಮಳೆರಾಯ ನಿರಂತರವಾಗಿ ಅಬ್ಬರಿಸಿದ್ದಾನೆ. ಮಳೆರಾಯನ ಅಬ್ಬರಕ್ಕೆ ಜಿಲ್ಲೆಯಲ್ಲಿ ನಾನಾ ರೀತಿಯ ಅವಾಂತರಗಳು ಸೃಷ್ಟಿಯಾಗಿವೆ. ಯಡಹಳ್ಳಿ ಕೆರೆ ಕೋಡಿ ಎತ್ತರಿಸಿದ್ದಕ್ಕೆ ಹಿನ್ನೀರಿನಿಂದ ನೂರಾರು ಎಕರೆ ಬೆಳೆ ನಾಶವಾಗಿದೆ. ಸೂಕ್ತ ಪರಿಹಾರ ನೀಡುವಂತೆ ರಾಜ್ಯ ಸರ್ಕಾರಕ್ಕೆ ರೈತರು ಆಗ್ರಹಿಸಿದ್ದಾರೆ.
Updated on: Sep 07, 2024 | 4:25 PM
Share

ಅಸ್ನಾ ಚಂಡಮಾರುತ ಯಾದಗಿರಿ ಜಿಲ್ಲೆಗೂ ದಾಳಿ ಮಾಡಿದೆ. ತೆಲಂಗಾಣದ ಗಡಿಯನ್ನ ಯಾದಗಿರಿ ಹಂಚಿಕೊಂಡ ಕಾರಣಕ್ಕೆ ಕಳೆದ ಒಂದು ವಾರದಿಂದ ಮಳೆರಾಯ ಅಬ್ಬರಿಸಿ ಬೊಬ್ಬೆರೆದಿದ್ದಾನೆ. ಪರಿಣಾಮ ಕೆರೆ-ಕಟ್ಟೆ, ಹಳ್ಳ-ಕೊಳ್ಳಗಳು ಭರ್ತಿಯಾಗಿವೆ.

ಯಡಹಳ್ಳಿ ಕೆರೆ ಕೋಡಿ ಎತ್ತರಿಸಿದ್ದಕ್ಕೆ ಹಿನ್ನೀರಿನಿಂದ ಯಾದಗಿರಿ ತಾಲೂಕಿನ ಯಡಹಳ್ಳಿ ಹಾಗೂ ಹತ್ತಿಕುಣಿ ಗ್ರಾಮದ ನೂರಾರು ಎಕರೆ ಬೆಳೆ ನಾಶ ಜಲಾವೃತವಾಗಿವೆ.

ಎಕರೆಗೆ 20 ರಿಂದ 25 ಸಾವಿರ ರೂ. ಖರ್ಚು ಮಾಡಿ ರೈತರು ಬೆಳೆ ಬೆಳೆದಿದ್ದರು. ಆದರೆ ಬೆಳೆ ಸಂಪೂರ್ಣವಾಗಿ ಜಲಾವೃತವಾತಗೊಂಡು ನಾಶವಾಗಿ ಹೋಗಿದ್ದು, ಬೆಳೆ ಕಳೆದುಕೊಂಡ ರೈತರು ಕಂಗಲಾಗಿದ್ದಾರೆ.

ಹತ್ತಿ, ಹೆಸರು, ತೊಗರಿ, ಭತ್ತದ ಬೆಳೆ ಜಲಾವೃತದಿಂದ ರೈತರಿಗೆ ನಷ್ಟ ಉಂಟಾಗಿದ್ದು, ಸೂಕ್ತ ಪರಿಹಾರ ನೀಡುವಂತೆ ರಾಜ್ಯ ಸರ್ಕಾರಕ್ಕೆ ರೈತರು ಆಗ್ರಹಿಸಿದ್ದಾರೆ.

ಇನ್ನು ಮಳೆರಾಯನ ಅಬ್ಬರಕ್ಕೆ ಜಿಲ್ಲೆಯಲ್ಲಿ ನಾನಾ ರೀತಿಯ ಅವಾಂತರಗಳು ಸಂಭವಿಸಿವೆ. ಜಿಲ್ಲೆಯ ಹಲವು ಕಡೆ ಸೇತುವೆಗಳು ಮುಳುಗಡೆಯಾಗಿವೆ.
Video: ಶೌಚಾಲಯದ ಬಾಗಿಲಿಗೆ ಶಿವಾಜಿ ಮಹಾರಾಜ್, ಮಹಾರಾಣಿ ಪದ್ಮಿನಿ ಫೋಟೋ
ಪರಪ್ಪನ ಅಗ್ರಹಾರ ಜೈಲಲ್ಲಿ ನಿಂತಿಲ್ಲ ರಾಜಾತಿಥ್ಯ: ದಾಳಿ ವೇಳೆ ಸತ್ಯ ಬಯಲು!
ಕಾರವಾರದ ಕಠಿಣಕೋಣ ಗ್ರಾಮದಲ್ಲಿ ಒಂದೇ ಕಡೆ 6 ಹೆಬ್ಬಾವು ಪತ್ತೆ!
ತ್ರಿವಳಿ ಮಕ್ಕಳಿಗೆ ಜನ್ಮ ನೀಡಿದ ಮುಸ್ಲಿಂ ದಂಪತಿ
ಹೊಸ ಹಾಡಿನ ಮೂಲಕ ಗಮನ ಸೆಳೆದ ಮಾಳು; ಯುವ ರಾಜನ ಗೆಟಪ್
ಚಿಕ್ಕಮಗಳೂರು: ಲಾಠಿಚಾರ್ಜ್ ಖಂಡಿಸಿ 3 ತಾಲೂಕು ಬಂದ್ಗೆ ಕರೆ
ಓಡ್ತಿರೋದು ನೋಡಿ... ಸುಂದರ್-ಮಿಲ್ಲರ್ ನಡುವೆ ಮಾತಿನ ಚಕಮಕಿ
ಶಿವಾಜಿ ಜಯಂತಿ ವೇಳೆ ಕಲ್ಲು ತೂರಾಟ ಪ್ರಕರಣ: ಫೆ. 26 ರಂದು ಬೃಹತ್ ಹೋರಾಟ
ಮುಸ್ಲಿಮರಿಗೆ ಬೆಡ್ಶೀಟ್ ಕೊಡದ ಬಿಜೆಪಿ ಮಾಜಿ ಸಂಸದ ಸುಖ್ಬೀರ್
‘ರಾಮ ಹಾಗೂ ಹನುಮನ ಭಕ್ತರು ಖುಷಿಯಿಂದ ನೋಡುವ ಸಿನಿಮಾ ಇದು’; ರಿಷಬ್ ಶೆಟ್ಟಿ