- Kannada News Photo gallery Ramesh Aravind Shares Important women of his life on Women day Celebration
ತಮ್ಮ ಜೀವನದ ಪ್ರಮುಖ ಮಹಿಳೆಯರನ್ನು ಪರಿಚಯಿಸಿದ ರಮೇಶ್ ಅರವಿಂದ್
ಇಂದು (ಮಾರ್ಚ್ 8) ವಿಶ್ವ ಅಂತಾರಾಷ್ಟ್ರೀಯ ಮಹಿಳಾ ದಿನಾಚರಣೆಯನ್ನು ಆಚರಿಸಲಾಗುತ್ತಿದೆ. ಈ ವೇಳೆ ತಮ್ಮ ಜೀವನದ ಪ್ರಮುಖ ಮಹಿಳೆಯರನ್ನು ಎಲ್ಲರೂ ಪರಿಚಯಿಸುತ್ತಿದ್ದಾರೆ. ನಟ ರಮೇಶ್ ಅರವಿಂದ್ ಕೂಡ ಸೋಶಿಯಲ್ ಮೀಡಿಯಾದಲ್ಲಿ ಫೋಟೋ ಹಂಚಿಕೊಂಡಿದ್ದಾರೆ. ಈ ಫೋಟೋದಲ್ಲಿ ಅವರು ತಮ್ಮ ಜೀವನದಲ್ಲಿ ಬಂದ ಪ್ರಮುಖ ಮಹಿಳೆಯರನ್ನು ಪರಿಚಯಿಸಿದ್ದಾರೆ.
Updated on: Mar 08, 2025 | 11:43 AM

ರಮೇಶ್ ಅರವಿಂದ್ ಅವರು ತಮ್ಮ ಪತ್ನಿ ಅರ್ಚನಾ ಅರವಿಂದ್ ಜೊತೆ ಇರೋ ಫೋಟೋ ಹಂಚಿಕೊಂಡಿದ್ದಾರೆ. ಅವರು ಅರ್ಚನಾ ಜೊತೆ ಹಲವು ವರ್ಷಗಳ ಕಾಲ ಸುಖ ಸಂಸಾರ ನಡೆಸಿದ್ದಾರೆ. ರಮೇಶ್ ವೃತ್ತಿ ಜೀವನಕ್ಕೆ ಪತ್ನಿ ಬೆಂಬಲವಾಗಿ ನಿಂತಿದ್ದಾರೆ.

ಮಗಳು ನಿಹಾರಿಕಾ ಅರವಿಂದ್ ಮೇಲೆ ರಮೇಶ್ ಅರವಿಂದ್ ಅವರಿಗೆ ಅಪಾರ ಪ್ರಿತಿ. ಇದನ್ನು ಅನೇಕ ಸಂದರ್ಭದಲ್ಲಿ ಅವರು ಹೊರಹಾಕಿದ್ದಾರೆ. ಮಗಳನ್ನು ಪ್ರಿನ್ಸಸ್ ರೀತಿಯಲ್ಲಿ ನೋಡಿಕೊಳ್ಳುತ್ತಾ ಇದ್ದಾರೆ.

ರಮೇಶ್ ಅರವಿಂದ್ ಅವರ ತಾಯಿಯ ಫೋಟೋನೂ ಅವರು ಹಂಚಿಕೊಂಡಿದ್ದಾರೆ. ಹೆತ್ತು-ಹೊತ್ತು ದೊಡ್ಡ ಮಾಡಿದ ತಾಯಿಯನ್ನು ರಮೇಶ್ ಅರವಿಂದ್ ಅವರು ನೆನಪಿಸಿಕೊಂಡಿದ್ದಾರೆ. ರಮೇಶ್ ಅರವಿಂದ್ಗೆ ತಾಯಿ ಬಗ್ಗೆ ವಿಶೇಷ ಪ್ರೀತಿ ಇದೆ.

ಮಹಿಳಾ ದಿನಾಚರಣೆ ಪ್ರಯುಕ್ತ ರಮೇಶ್ ಅರವಿಂದ್ ಅವರು ತಮ್ಮ ಜೀವನದಲ್ಲಿ ಇರುವ ಇನ್ನೂ ಕೆಲ ಮಹಿಳೆಯರನ್ನು ಪರಿಚಯಿಸಿದ್ದಾರೆ. ಆ ಫೋಟೋಗಳು ಸೋಶಿಯಲ್ ಮೀಡಿಯಾದಲ್ಲಿ ಗಮನ ಸೆಳೆದಿವೆ.

ರಮೇಶ್ ಅರವಿಂದ್ ಅವರು ಜೀ ಕನ್ನಡದ ‘ಸರಿಗಮಪ’ ವೇದಿಕೆ ಮೇಲೆ ಬಂದಿದ್ದಾರೆ. ಈ ವೇಳೆ ಅವರ ಮಗಳು ಕೂಡ ಕಾಣಿಸಿಕೊಂಡಿದ್ದಾರೆ. ಈ ಎಪಿಸೋಡ್ ಮಹಿಳಾ ದಿನಾಚರಣೆಯ ಪ್ರಯುಕ್ತವೇ ಪ್ರಸಾರ ಕಾಣಲಿದೆ.



















