- Kannada News Photo gallery Ranbir Kapoor and Neetu Kapoor perform Ganpati Visarjan in Mumbai Entertainment News in Kannada
ಗಣಪತಿ ವಿಸರ್ಜನೆಯಲ್ಲಿ ಪಾಲ್ಗೊಂಡ ರಣಬೀರ್ ಕಪೂರ್ ಕುಟುಂಬ; ಇಲ್ಲಿವೆ ಫೋಟೋಸ್
ಬಾಲಿವುಡ್ ಮಂದಿ ಭಾರಿ ಸಡಗರದಿಂದ ಗಣಪತಿ ಹಬ್ಬವನ್ನು ಆಚರಣೆ ಮಾಡಿದ್ದಾರೆ. ನಟ ರಣಬೀರ್ ಕಪೂರ್ ಅವರ ಮನೆಯಲ್ಲಿ ಗಣೇಶನ ಮೂರ್ತಿ ಕೂರಿಸಿ ಸಂಭ್ರಮದಿಂದ ಹಬ್ಬ ಮಾಡಲಾಗಿತ್ತು. ಗಣಪತಿ ವಿಸರ್ಜನೆಯಲ್ಲಿ ಇಡೀ ಕುಟುಂಬದವರು ಭಾಗಿಯಾಗಿದ್ದು, ಆ ಸಂದರ್ಭದ ಫೋಟೋಗಳನ್ನು ರಣಬೀರ್ ತಾಯಿ ನೀತೂ ಕಪೂರ್ ಅವರು ಹಂಚಿಕೊಂಡಿದ್ದಾರೆ.
Updated on: Sep 12, 2024 | 10:36 PM

ನಟ ರಣಬೀರ್ ಕಪೂರ್ ಅವರ ಮನೆಯಲ್ಲಿ ಗಣೇಶನನ್ನು ಕೂರಿಸಲಾಗಿತ್ತು. 5 ದಿನಗಳ ಕಾಲ ಪೂಜೆ ಮಾಡಿದ ಬಳಿಕ ವಿಸರ್ಜನೆ ಮಾಡಲಾಗಿದೆ. ಈ ಫೋಟೋಗಳು ಸೋಶಿಯಲ್ ಮೀಡಿಯಾದಲ್ಲಿ ಸಖತ್ ವೈರಲ್ ಆಗಿವೆ.

ಹಬ್ಬದ ಸಲುವಾಗಿ ರಣಬೀರ್ ಕಪೂರ್ ಅವರು ಸಿನಿಮಾದ ಕೆಲಸಗಳಿಗೆ ಬ್ರೇಕ್ ನೀಡಿದ್ದಾರೆ. ಸಾಂಪ್ರದಾಯಿಕ ಉಡುಗೆ ಧರಿಸಿ ಅವರು ಗಣಪತಿ ವಿಸರ್ಜನೆಯಲ್ಲಿ ಭಾಗಿ ಆಗಿದ್ದಾರೆ. ಅವರ ತಾಯಿ ನೀತೂ ಕಪೂರ್ ಕೂಡ ಇದರಲ್ಲಿ ಪಾಲ್ಗೊಂಡಿದ್ದಾರೆ.

ತಮ್ಮ ಮನೆಯಲ್ಲಿ ಕೂರಿಸಿದ್ದ ಗಣೇಶನ ಮೂರ್ತಿಯ ಫೋಟೋವನ್ನು ಕೂಡ ನೀತೂ ಕಪೂರ್ ಅವರು ಹಂಚಿಕೊಂಡಿದ್ದಾರೆ. ‘ಮುಂದಿನ ವರ್ಷ ಬೇಗ ಬಾ’ ಎಂದು ಕ್ಯಾಪ್ಷನ್ ನೀಡುವ ಮೂಲಕ ಅವರು ಗಣಪತಿಗೆ ವಂದಿಸಿದ್ದಾರೆ.

ತಾಯಿಯ ಜೊತೆ ಸೇರಿ ರಣಬೀರ್ ಕಪೂರ್ ಅವರು ಗಣೇಶನಿಗೆ ಆರತಿ ಬೆಳಗಿದ್ದಾರೆ. ಗಣಪತಿ ಮೂರ್ತಿಯನ್ನು ನೀರಿನಲ್ಲಿ ಮುಳುಗಿಸಲಾಗಿದೆ. ಬಾಲಿವುಡ್ನ ಅನೇಕ ಸೆಲೆಬ್ರಿಟಿಗಳು ತಮ್ಮ ಮನೆಯಲ್ಲಿ ಭಾರಿ ಸಡಗರದಿಂದ ಹಬ್ಬ ಆಚರಿಸಿದ್ದಾರೆ.

ರಣಬೀರ್ ಕಪೂರ್ ಅವರು ತುಂಬ ಬ್ಯುಸಿ ನಟ. ‘ಅನಿಮಲ್’ ಸಿನಿಮಾದ ಸಕ್ಸಸ್ ಬಳಿಕ ಅವರ ಬೇಡಿಕೆ ಡಬಲ್ ಆಯಿತು. ಸಿನಿಮಾಗಳ ಬಿಡುವಿನಲ್ಲಿ ಅವರು ಫ್ಯಾಮಿಲಿ ಜೊತೆ ಹೆಚ್ಚು ಸಮಯ ಕಳೆಯುತ್ತಾರೆ. ಖುಷಿಯಿಂದ ಹಬ್ಬ ಮಾಡಿದ್ದಾರೆ.



















