- Kannada News Photo gallery Rashmika Mandanna Celebrate her Birthday in Oman city Salalah made her trainer Angry
ಒಮನ್ನಲ್ಲಿ ಜಿಮ್ ಟ್ರೇನರ್ಗಳ ಕಣ್ಣು ಕೆಂಪು ಮಾಡಿದ ರಶ್ಮಿಕಾ ಮಂದಣ್ಣ
Rashmika Mandanna Birthday: ರಶ್ಮಿಕಾ ಮಂದಣ್ಣಗೆ ಇದು ಬರ್ತ್ಡೇ ವೀಕ್. ಈ ಕಾರಣಕ್ಕೆ ಅವರು ಒಮನ್ಗೆ ತೆರಳಿದ್ದಾರೆ. ಅಲ್ಲಿಂದ ಸುಂದರ ತಾಣಗಳಿಗೆ ಅವರು ಭೇಟಿ ಕೊಡುತ್ತಾ ಇದ್ದಾರೆ. ಅಲ್ಲಿದ್ದುಕೊಂಡೇ ಭಾರತದಲ್ಲಿರೋ ಜಿಮ್ ಟ್ರೇನರ್ಗಳ ಕಣ್ಣನ್ನು ಕೆಂಪು ಮಾಡಿದ್ದಾರೆ. ಈ ಬಗ್ಗೆ ರಶ್ಮಿಕಾ ಅವರು ಮಾಹಿತಿ ಹಂಚಿಕೊಂಡಿದ್ದಾರೆ.
Updated on:Apr 05, 2025 | 7:29 AM

ರಶ್ಮಿಕಾ ಮಂದಣ್ಣ ಅವರಿಗೆ ಇಂದು (ಏಪ್ರಿಲ್ 5) ಜನ್ಮದಿನ. ಅವರು ಈಗ ನೇರವಾಗಿ ಒಮನ್ಗೆ ಹಾರಿದ್ದಾರೆ. ಅವರು ಪ್ರತಿ ವರ್ಷ ತಮ್ಮ ಜನ್ಮದಿನವನ್ನು ಬೇರೆ ಬೇರೆ ದೇಶದಲ್ಲಿ ಆಚರಿಸಿಕೊಳ್ಳುತ್ತಿದ್ದಾರೆ. ಒಮನ್ನ ಸಲಾಲಾಗೆ ರಶ್ಮಿಕಾ ಭೇಟಿ ನೀಡಿದ್ದಾರೆ.

ರಶ್ಮಿಕಾ ಮಂದಣ್ಣ ಅವರು ಸಲಾಲಾದ ಬೀಚ್ ಪಕ್ಕದಲ್ಲಿ ಕುಳಿತು ಅಲ್ಲಿಯ ತಿಂಡಿಗಳನ್ನು ಆಸ್ವಾದಿಸುತ್ತಾ ಇದ್ದಾರೆ. ರಶ್ಮಿಕಾ ಮಂದಣ್ಣ ಅವರ ಮುಖದಲ್ಲಿ ಸಂತೋಷ ಎದ್ದು ಕಾಣುತ್ತಿದೆ. ಆದರೆ, ಅವರು ಡಯಟ್ನ ಬ್ರೇಕ್ ಮಾಡಿದ್ದಕ್ಕೆ ಜಿಮ್ ಟ್ರೇನರ್ಗಳು ಸಿಟ್ಟಿಗೊಳಗಾಗುತ್ತಾರೆ ಎಂದಿದ್ದಾರೆ.

ರಶ್ಮಿಕಾರನ್ನು ಟ್ರೇನ್ ಮಾಡುವ ಜುನೈದ್ ಶೇಖ್ ಹಾಗೂ ಸಾಗರ್ ಅವರು ತಮ್ಮ ಬಗ್ಗೆ ಸಿಟ್ಟಾಗುತ್ತಾರೆ ಎಂದು ರಶ್ಮಿಕಾ ಕ್ಯಾಪ್ಶನ್ನಲ್ಲಿ ಹೇಳಿದ್ದಾರೆ. ಆದರೆ, ಬರ್ತ್ಡೇ ಆಗಿರುವುದರಿಂದ ರಶ್ಮಿಕಾ ಡಯಟ್ ಮರೆತು ತಮ್ಮಿಷ್ಟದ್ದನ್ನು ಸೇವನೆ ಮಾಡುತ್ತಾ ಇದ್ದಾರೆ.

ರಶ್ಮಿಕಾ ಮಂದಣ್ಣ ಅವರು ಆಗಮಿಸುತ್ತಿದ್ದಂತೆ ಕೇಕ್ ಮೂಲಕ ಅವರನ್ನು ಸ್ವಾಗತಿಸಲಾಗಿದೆ. ಒಮನ್ನಲ್ಲಿ ಅವರು ತಮ್ಮ 29ನೇ ವರ್ಷದ ಹುಟ್ಟುಹಬ್ಬವನ್ನು ಆಚರಿಸಿಕೊಳ್ಳಲಿದ್ದಾರೆ. ರಶ್ಮಿಕಾಗೆ ಸೋಶಿಯಲ್ ಮೀಡಿಯಾದಲ್ಲಿ ಶುಭಾಶಯಗಳ ಸುರಿಮಳೆ ಬಂದಿದೆ.

ರಶ್ಮಿಕಾ ಮಂದಣ್ಣ ಅವರ ಜೊತೆ ವಿಜಯ್ ದೇವರಕೊಂಡ ಕೂಡ ಹೋಗಿದ್ದಾರೆ ಎನ್ನಲಾಗುತ್ತಿದೆ. ಆದರೆ, ಇದನ್ನು ರಶ್ಮಿಕಾ ರಿವೀಲ್ ಮಾಡಿಲ್ಲ. ‘ವಿಜಯ್ ದೇವರಕೊಂಡ ಎಲ್ಲಿ’ ಎಂದು ರಶ್ಮಿಕಾಗೆ ಅಭಿಮಾನಿಗಳು ಪ್ರಶ್ನೆ ಮಾಡುತ್ತಾ ಇದ್ದಾರೆ.
Published On - 7:28 am, Sat, 5 April 25



















