- Kannada News Photo gallery Rashmika Mandanna wore small dress in Zee Picture Award Here are the photos
Rashmika Mandanna: ಅವಾರ್ಡ್ ಫಂಕ್ಷನ್ಗೆ ಚಿಕ್ಕ ಡ್ರೆಸ್ ಹಾಕಿ ಬಂದ ರಶ್ಮಿಕಾ ಮಂದಣ್ಣ; ಟ್ರೋಲ್ ಮಂದಿಗೆ ಹಬ್ಬ
ರಶ್ಮಿಕಾ ಮಂದಣ್ಣ ಅವರು ಜೀ ಸಿನಿಮಾ ಅವಾರ್ಡ್ ಫಂಕ್ಷನ್ಗೆ ತೆರಳಿದ್ದರು. ಅವರು ಕಪ್ಪುಡುಗೆಯಲ್ಲಿ ಸಖತ್ ಬೋಲ್ಡ್ ಲುಕ್ನಲ್ಲಿ ಮಿಂಚಿದ್ದಾರೆ. ಅವರ ಫೋಟೋಗಳು ಸೋಶಿಯಲ್ ಮೀಡಿಯಾದಲ್ಲಿ ವೈರಲ್ ಆಗಿವೆ.
Updated on:Feb 27, 2023 | 10:31 AM

ರಶ್ಮಿಕಾ ಮಂದಣ್ಣ ಅವರು ಏನೇ ಮಾಡಿದರೂ ಟ್ರೋಲ್ ಮಾಡಲು ಒಂದಷ್ಟು ಮಂದಿ ಕಾದಿರುತ್ತಾರೆ. ಅವರು ಏನೇ ಮಾಡಿದರೂ ಅದರಲ್ಲಿ ತಪ್ಪು ಕಂಡುಹಿಡಿದು ಟೀಕೆ ಮಾಡಲಾಗುತ್ತದೆ.

ರಶ್ಮಿಕಾ ಮಂದಣ್ಣ ಅವರು ಜೀ ಸಿನಿಮಾ ಅವಾರ್ಡ್ ಫಂಕ್ಷನ್ಗೆ ತೆರಳಿದ್ದರು. ಅವರು ಕಪ್ಪುಡುಗೆಯಲ್ಲಿ ಸಖತ್ ಬೋಲ್ಡ್ ಲುಕ್ನಲ್ಲಿ ಮಿಂಚಿದ್ದಾರೆ. ಅವರ ಫೋಟೋಗಳು ಸೋಶಿಯಲ್ ಮೀಡಿಯಾದಲ್ಲಿ ವೈರಲ್ ಆಗಿವೆ.

ರಶ್ಮಿಕಾ ಮಂದಣ್ಣ ಅವರು ಚಿಕ್ಕ ಉಡುಗೆ ಹಾಕಿ ಬಂದಿದ್ದರು. ಈ ಕಾರಣಕ್ಕೆ ಅನೇಕರು ರಶ್ಮಿಕಾ ಮಂದಣ್ಣ ಅವರನ್ನು ಟ್ರೋಲ್ ಮಾಡಿದ್ದಾರೆ.

‘ದೇಹ ಕಾಣುವ ರೀತಿಯಲ್ಲಿ ಏಕೆ ಬಟ್ಟೆ ಹಾಕಿ ಬರಬೇಕು’ ಎಂದು ಅನೇಕರು ಪ್ರಶ್ನೆ ಮಾಡಿದ್ದಾರೆ. ಆದರೆ, ರಶ್ಮಿಕಾ ಮಂದಣ್ಣ ಮಾತ್ರ ಈ ಬಗ್ಗೆ ಹೆಚ್ಚು ತಲೆಕೆಡಿಸಿಕೊಂಡಿಲ್ಲ.

ರಶ್ಮಿಕಾ ಮಂದಣ್ಣ ಅವರು ಸಾಲು ಸಾಲು ಗೆಲುವು ಕಾಣುತ್ತಿದ್ದಾರೆ. ಅವರ ನಟನೆಯ ಚಿತ್ರಗಳು ಬಾಕ್ಸ್ ಆಫೀಸ್ನಲ್ಲಿ ಸದ್ದು ಮಾಡುತ್ತಿವೆ.

ಸದ್ಯ ‘ಅನಿಮಲ್’ ಹಾಗೂ ‘ಪುಷ್ಪ 2’ ಚಿತ್ರದ ಕೆಲಸಗಳಲ್ಲಿ ರಶ್ಮಿಕಾ ಬ್ಯುಸಿ ಇದ್ದಾರೆ. ಅವರು ಹೊಸ ಸಿನಿಮಾ ಒಪ್ಪಿಕೊಳ್ಳಲಿ ಎಂದು ಫ್ಯಾನ್ಸ್ ಕಾಯುತ್ತಿದ್ದಾರೆ.
Published On - 9:29 am, Mon, 27 February 23




