- Kannada News Photo gallery Samantha Ruth Prabhu And vijay Devarakonda starrer Kushi Movie Is a Heartbreaking Climax rmd
ಸಮಂತಾ-ವಿಜಯ್ ದೇವರಕೊಂಡ ನಟನೆಯ ‘ಖುಷಿ’ ಕಥೆ ಲೀಕ್; ಹೃದಯ ವಿದ್ರಾವಕ ಕ್ಲೈಮ್ಯಾಕ್ಸ್?
ಸಮಂತಾ ಈ ಚಿತ್ರದಲ್ಲಿ ಮುಸ್ಲಿಂ ಯುವತಿಯ ಪಾತ್ರ ಮಾಡುತ್ತಿದ್ದಾರೆ. ಈ ಚಿತ್ರದ ಒಂದು ಹಂತದ ಶೂಟಿಂಗ್ ಕಾಶ್ಮೀರದಲ್ಲಿ ನಡೆದಿದೆ. ಈ ಸಿನಿಮಾದ ಕ್ಲೈಮ್ಯಾಕ್ಸ್ ರಿವೀಲ್ ಆಗಿದೆ.
Updated on: May 16, 2023 | 12:54 PM

ಸಮಂತಾ ರುತ್ ಪ್ರಭು ಹಾಗೂ ವಿಜಯ್ ದೇವರಕೊಂಡ ಅವರು ‘ಖುಷಿ’ ಸಿನಿಮಾದಲ್ಲಿ ಒಟ್ಟಾಗಿ ನಟಿಸುತ್ತಿದ್ದಾರೆ. ಈ ಸಿನಿಮಾ ಬಗ್ಗೆ ಸಾಕಷ್ಟು ನಿರೀಕ್ಷೆ ಇದೆ. ಸೆಪ್ಟೆಂಬರ್ 1ರಂದು ಸಿನಿಮಾ ರಿಲೀಸ್ ಆಗುತ್ತಿದೆ.

ಸಮಂತಾ ಈ ಚಿತ್ರದಲ್ಲಿ ಮುಸ್ಲಿಂ ಯುವತಿಯ ಪಾತ್ರ ಮಾಡುತ್ತಿದ್ದಾರೆ. ಈ ಚಿತ್ರದ ಒಂದು ಹಂತದ ಶೂಟಿಂಗ್ ಕಾಶ್ಮೀರದಲ್ಲಿ ನಡೆದಿದೆ. ಈ ಸಿನಿಮಾದ ಕ್ಲೈಮ್ಯಾಕ್ಸ್ ರಿವೀಲ್ ಆಗಿದೆ.

ಸಾವು ಯಾವಾಗ ಬರುತ್ತದೆಯೋ ಗೊತ್ತಿಲ್ಲ. ಅಲ್ಲಿಯವರೆಗೆ ಎಲ್ಲರೂ ನೆಮ್ಮದಿಯಿಂದ ಬದುಕಬೇಕು ಎಂಬ ಅಂಶ ಇಟ್ಟುಕೊಂಡು ‘ಖುಷಿ’ ಸಿನಿಮಾ ಮಾಡಲಾಗಿದೆ.

ಇಡೀ ಸಿನಿಮಾದ ಕಥೆ ಫ್ಲಾಶ್ಬ್ಯಾಕ್ನಲ್ಲಿ ಸಾಗುತ್ತದೆ. ವಿಜಯ್ ಹಾಗೂ ಸಮಂತಾ ಮಧ್ಯೆ ಒಂದೊಳ್ಳೆಯ ಲವ್ಸ್ಟೋರಿ ಇದೆ. ಅಷ್ಟೇ ಅಲ್ಲ ಚಿತ್ರದ ಕ್ಲೈಮ್ಯಾಕ್ಸ್ ತುಂಬಾನೇ ಹೃದಯ ವಿದ್ರಾವಕ ಆಗಿದೆಯಂತೆ.

ವಿಜಯ್ ದೇವರಕೊಂಡ ಹಾಗೂ ಸಮಂತಾ ನಟನೆಯ ಕೊನೆಯ ಸಿನಿಮಾ ಸೋಲು ಕಂಡಿದೆ. ಇಬ್ಬರಿಗೂ ಗೆಲ್ಲಲೇಬೇಕಾದ ಅನಿವಾರ್ಯತೆ ಇದೆ. ‘ಖುಷಿ’ ಚಿತ್ರದ ಮೂಲಕ ಗೆಲ್ಲುವ ಭರವಸೆಯಲ್ಲಿದ್ದಾರೆ.




