Samantha Ruth Prabhu: ಐಸ್ನಲ್ಲಿ ಮುಳುಗಿ ಕುಳಿತ ಸಮಂತಾ; ನಟಿಗೆ ಸಖತ್ ಟಾರ್ಚರ್
ಸಮಂತಾ ಮತ್ತೆ ಆ್ಯಕ್ಷನ್ಗೆ ಇಳಿದಿದ್ದಾರೆ. ಈ ವೇಳೆ ನೋವು ಕಾಣಿಸಿಕೊಳ್ಳಬಹುದು ಎನ್ನುವ ಕಾರಣಕ್ಕೆ ಥೆರಪಿಗೆ ಒಳಗಾಗಿದ್ದಾರೆ.
Updated on: May 03, 2023 | 6:37 AM

ನಟಿ ಸಮಂತಾ ಅವರು ಆ್ಯಕ್ಷನ್ ಮೋಡ್ಗೆ ಮರಳಿದ್ದಾರೆ. ‘ಸಿಟಾಡೆಲ್’ ಇಂಡಿಯನ್ ವರ್ಷನ್ನಲ್ಲಿ ಅವರು ನಟಿಸುತ್ತಿದ್ದಾರೆ. ಈ ವೆಬ್ ಸೀರಿಸ್ಗೆ ರಾಜ್ ಮತ್ತು ಡಿಕೆ ನಿರ್ದೇಶನ ಇದೆ.

ಈ ವೆಬ್ ಸೀರಿಸ್ನಲ್ಲಿ ಸಾಕಷ್ಟು ಆ್ಯಕ್ಷನ್ ಇರಲಿದೆ. ಈ ವಿಚಾರವನ್ನು ನಟಿ ಸಮಂತಾ ಈ ಮೊದಲೇ ರಿವೀಲ್ ಮಾಡಿದ್ದರು. ಈಗ ಆ್ಯಕ್ಷನ್ ಸರಣಿಗಾಗಿ ಅವರು ಸಿದ್ಧತೆ ಮಾಡಿಕೊಳ್ಳುತ್ತಿದ್ದಾರೆ.

ಸಮಂತಾ ಅವರಿಗೆ ಸ್ನಾಯುವಿನಲ್ಲಿ ನೋವು ಕಾಣಿಸಿಕೊಂಡಿತ್ತು. ಇದರಿಂದ ಅವರು ಚೇತರಿಕೆ ಕಂಡಿದ್ದಾರೆ. ಈಗ ಅವರು ಮತ್ತೆ ಆ್ಯಕ್ಷನ್ಗೆ ಇಳಿದಿದ್ದಾರೆ. ಈ ವೇಳೆ ನೋವು ಕಾಣಿಸಿಕೊಳ್ಳಬಹುದು ಎನ್ನುವ ಕಾರಣಕ್ಕೆ ಥೆರಪಿಗೆ ಒಳಗಾಗಿದ್ದಾರೆ.

ದೊಡ್ಡ ಟಬ್ ಒಳಗೆ ಐಸ್ಗಳನ್ನು ಇಡಲಾಗಿದೆ. ಇದರ ಒಳಗೆ ಸಮಂತಾ ಕುಳಿತಿದ್ದಾರೆ. ಈ ಫೋಟೋಗಳನ್ನು ಅವರು ಸೋಶಿಯಲ್ ಮೀಡಿಯಾದಲ್ಲಿ ಶೇರ್ ಮಾಡಿಕೊಂಡಿದ್ದಾರೆ. ‘ಟಾರ್ಚರ್ ಸಮಯ’ ಎಂದು ಅವರು ಬರೆದುಕೊಂಡಿದ್ದಾರೆ.

ಸಮಂತಾ ಅವರು ‘ದಿ ಫ್ಯಾಮಿಲಿ ಮ್ಯಾನ್ 2’ ಸಿನಿಮಾದಲ್ಲಿ ಸಾಕಷ್ಟು ಆ್ಯಕ್ಷನ್ ಮೆರೆದಿದ್ದರು. ಈಗ ಹೊಸ ವೆಬ್ ಸೀರಿಸ್ನಲ್ಲೂ ಆ್ಯಕ್ಷನ್ ಇರಲಿದೆ.

ಪತ್ರಿಕೋದ್ಯಮಕ್ಕೆ ಕಾಲಿಟ್ಟು 9 ವರ್ಷ. ಸಂಯುಕ್ತ ಕರ್ನಾಟಕ, ವಿಜಯವಾಣಿ, ನ್ಯೂಸ್18 ಕನ್ನಡದಲ್ಲಿ ಕೆಲಸ ಮಾಡಿದ ಅನುಭವ ಇದೆ. ಈಗ ಟಿವಿ9 ಕನ್ನಡ ಡಿಜಿಟಲ್ನಲ್ಲಿ ಬರಹ ಕೃಷಿ ಮುಂದುವರಿಸಿದ್ದೇನೆ. ಸಿನಿಮಾ ರಂಗದ ಬಗ್ಗೆ ಮೊದಲಿನಿಂದಲೂ ಆಸಕ್ತಿ. ಅದರ ಜೊತೆ ಬರವಣಿಗೆಯೂ ಸೇರಿತು. ಈಗ ಅದುವೇ ಕಾಯಕ. ಸಿನಿಮಾ ವಿಮರ್ಶೆ, ಚಿತ್ರರಂಗದ ಗಾಸಿಪ್, ಹೊಸ ಸಿನಿಮಾ ಬಗ್ಗೆ ಅಪ್ಡೇಟ್ ನನ್ನ ಕಡೆಯಿಂದ. ಟ್ರಾವೆಲಿಂಗ್ ಕಡೆ ಹೆಚ್ಚು ಆಸಕ್ತಿ. ಓದುವುದು ಎಂದರೆ ಹುಚ್ಚು. ಸಿನಿಮಾ ನೋಡುವುದೂ ಆಸಕ್ತಿಗಳಲ್ಲಿ ಒಂದು. ಹಲವು ಸಿನಿಮಾ ನೋಡಿ ಈಗಾಗಲೇ ವಿಮರ್ಶೆ ಮಾಡಿ ನಿಮ್ಮ ಮುಂದಿಟ್ಟಿದ್ದೇನೆ.
Read More



