- Kannada News Photo gallery Samantha will starring in Thalapathy 67 which is directed by Lokesh Kanagaraj says reports details inside
Samantha: ಆ ಸ್ಟಾರ್ ನಟನೊಂದಿಗೆ ಮತ್ತೆ ತೆರೆ ಹಂಚಿಕೊಳ್ಳಲಿದ್ದಾರಾ ಸಮಂತಾ? ಕೇಳಿ ಬರುತ್ತಿದೆ ಹೊಸ ಗುಸುಗುಸು
ಬಹುಭಾಷಾ ನಟಿ ಸಮಂತಾ ಸದ್ಯ ಹಲವು ಚಿತ್ರಗಳಲ್ಲಿ ಬ್ಯುಸಿಯಾಗಿದ್ದಾರೆ. ಇದೀಗ ಅವರು ವಿಜಯ್ ನಟನೆಯ ‘ದಳಪತಿ 67’ ಚಿತ್ರಕ್ಕೆ ನಾಯಕಿಯಾಗಿದ್ದಾರೆ ಎಂಬ ಸುದ್ದಿ ಕಾಲಿವುಡ್ ಅಂಗಳದಿಂದ ಬಂದಿದೆ. ‘ವಿಕ್ರಮ್’ ಯಶಸ್ಸಿನಲ್ಲಿರುವ ಲೋಕೇಶ್ ಕನಗರಾಜ್ ನಿರ್ದೇಶನದ ಈ ಚಿತ್ರದ ಬಗ್ಗೆ ಈಗಾಗಲೇ ಅಪಾರ ನಿರೀಕ್ಷೆ ಮೂಡಿದೆ.
Updated on: Jun 05, 2022 | 7:30 AM
Share

ಕಳೆದ ಕೆಲವು ಸಮಯದ ಹಿಂದೆ ಸಮಂತಾ ವೈಯಕ್ತಿಕ ಕಾರಣಗಳಿಂದ ಸಖತ್ ಸುದ್ದಿಯಾಗುತ್ತಿದ್ದರು. ಆದರೆ ಈಗ ಸಿನಿಮಾದ ಕಾರಣಗಳಿಂದ ಸಖತ್ ಸುದ್ದಿಯಲ್ಲಿದ್ದಾರೆ.


ಇತ್ತೀಚೆಗಷ್ಟೇ ತಮಿಳಿನ ‘ಕಾಥುವಾಕುಲ ರೆಂಡು ಕಾದಲ್’ ಚಿತ್ರದಲ್ಲಿ ನಟಿಸಿದ್ದ ಸಮಂತಾ ಇದೀಗ ಮತ್ತೊಂದು ತಮಿಳಿನ ಚಿತ್ರವನ್ನು ಒಪ್ಪಿಕೊಂಡಿದ್ದಾರೆ ಎಂಬ ಸುದ್ದಿ ಕಾಲಿವುಡ್ ಅಂಗಳದಿಂದ ಬಂದಿವೆ.

ಸ್ಟಾರ್ ನಟರೋರ್ವರೊಂದಿಗೆ ಸಮಂತಾ ಹೊಸ ಚಿತ್ರಕ್ಕೆ ಗ್ರೀನ್ ಸಿಗ್ನಲ್ ನೀಡಿದ್ದಾರಂತೆ.

ವಿಜಯ್ ಅಭಿನಯದ ‘ದಳಪತಿ 67’ ಚಿತ್ರಕ್ಕೆ ಸಮಂತಾ ನಾಯಕಿಯಾಗಿ ಆಯ್ಕೆಯಾಗಿದ್ದಾರೆ ಎಂದಿವೆ ಕಾಲಿವುಡ್ ವರದಿಗಳು.

ಲೋಕೇಶ್ ಕನಗರಾಜ್ ಆ ಚಿತ್ರವನ್ನು ನಿರ್ದೇಶಿಸುತ್ತಿದ್ದು, ಚಿತ್ರದಲ್ಲಿ ಸಮಂತಾ ನಟನೆಯ ಬಗ್ಗೆ ಅಧಿಕೃತ ಮಾಹಿತಿ ಇನ್ನಷ್ಟೇ ಬರಬೇಕಿದೆ.

ಸಮಂತಾ ಈಗಾಗಲೇ ವಿಜಯ್ ಜತೆಗೆ ‘ಮರ್ಸಲ್’, ‘ಕತ್ತಿ’ ಮೊದಲಾದ ಚಿತ್ರಗಳಲ್ಲಿ ಅಭಿನಯಿಸಿದ್ದಾರೆ.

ಇದಲ್ಲದೇ ಸಮಂತಾ ‘ಯಶೋದಾ’, ‘ಶಾಕುಂತಲಂ’, ‘ಖುಷಿ’ ಮೊದಲಾದ ಚಿತ್ರಗಳಲ್ಲಿ ಬ್ಯುಸಿಯಾಗಿದ್ದಾರೆ.
Related Photo Gallery
ಇಕ್ಬಾಲ್ ಹುಸೇನ್ ವಿರುದ್ಧ ರೊಚ್ಚಿಗೆದ್ದ ನಗರಸಭೆ ಅಧ್ಯಕ್ಷ! ವಿಡಿಯೋ ನೋಡಿ
ಬಣ ಬಡಿದಾಟದ ನಡುವೆಯೂ ಒಂದೇ ಹೆಲಿಕಾಪ್ಟರ್ನಲ್ಲಿ ಸಿಎಂ-ಡಿಸಿಎಂ ಪ್ರಯಾಣ
ಮೈಸೂರು ಅರಮನೆ ಬಳಿ ವ್ಯಾಪಾರಿಗಳ ಮೇಲೆ ನಿಗಾ ಇಡಲಾಗುತ್ತಾ?
‘ಮದುವೆಯಾಗಿ ಒಂದು ತಿಂಗಳಾದ್ರೂ ಹೆಂಡ್ತಿ ಜತೆಗೆ ಮಲಗಿಲ್ಲ ಅವನು!'
ಅಲಂಕಾರಕ್ಕೆಂದು ತಂದಿದ್ದ ಹೂವಿನ ಕುಂಡಗಳನ್ನು ಕದ್ದೊಯ್ದ ಜನ
ನ್ಯಾಯಾಲಯದಲ್ಲಿ ವಿಚ್ಛೇದಿತ ಪತಿಯನ್ನು ಹಿಗ್ಗಾಮುಗ್ಗ ಥಳಿಸಿದ ಮಹಿಳೆ
ಟರ್ನಿಂಗ್ನಲ್ಲಿ ಕಂಟ್ರೋಲ್ ಸಿಗದೆ ಮರಕ್ಕೆ ಡಿಕ್ಕಿ ಹೊಡೆದ ಕಾರು
ವಾರಾಣಸಿ-ಲಕ್ನೋ ರೈಲಿನೊಳಗೆ ಎರಡು ಗುಂಪುಗಳ ನಡುವೆ ಹೊಡೆದಾಟ
ಗಾಯಗೊಂಡಿದ್ದ ಚಾಲಕ ಮೊಹಮ್ಮದ್ ರಫೀಕ್ ಸಾವು, ಗೋಳಾಡಿದ ಪತ್ನಿ
ಪೈರಸಿ ಮಾಡಿ ಸಿಕ್ಕಿ ಬಿದ್ರೆ ಇದೆ ಮಾರಿಹಬ್ಬ




