- Kannada News Entertainment Sandalwood Sanchari Vijay: ಸಂಚಾರಿ ವಿಜಯ್ ಎಂಬ ಪ್ರತಿಭಾವಂತ ಕಲಾವಿದನಿಗೆ, ಅದಕ್ಕೂ ಮಿಗಿಲಾದ ಮಾನವೀಯ ವ್ಯಕ್ತಿಗೆ ಭಾವಪೂರ್ಣ ವಿದಾಯ
Sanchari Vijay: ಸಂಚಾರಿ ವಿಜಯ್ ಎಂಬ ಪ್ರತಿಭಾವಂತ ಕಲಾವಿದನಿಗೆ, ಅದಕ್ಕೂ ಮಿಗಿಲಾದ ಮಾನವೀಯ ವ್ಯಕ್ತಿಗೆ ಭಾವಪೂರ್ಣ ವಿದಾಯ
Sanchari Vijay Photos: 1983 ಜುಲೈ 18ರಂದು ಚಿಕ್ಕಮಗಳೂರಿನ ಕಡೂರಿನ ಪಂಚನಹಳ್ಳಿಯಲ್ಲಿ ವಿಜಯ್ ಜನಿಸಿದರು. ವಿಜಯ್ ಕುಮಾರ್ ಬಿ. ಎಂಬುದು ಅವರ ಮೂಲ ಹೆಸರು. ಸಣ್ಣ ವಯಸ್ಸಿನಿಂದಲೇ ನಟನೆ ಬಗ್ಗೆ ಆಸಕ್ತಿ ಹೊಂದಿದ್ದ ಅವರು, ರಂಗಭೂಮಿಯಲ್ಲಿ ಪಳಗಿದರು. ಇವರು ‘ಸಂಚಾರಿ’ ಹೆಸರಿನ ಥಿಯೇಟರ್ ಗ್ರೂಪ್ನಿಂದ ಬಂದ ಕಾರಣ ಸ್ಯಾಂಡಲ್ವುಡ್ನಲ್ಲಿ ಸಂಚಾರಿ ವಿಜಯ್ ಎಂದೆ ಖ್ಯಾತಿ ಪಡೆದುಕೊಂಡರು.
Updated on: Jun 14, 2021 | 1:25 PM

Sanchari Vijay Dead Body towards Panchanahalli from Ravindra Kalakshetra Bengaluru

ಅದ್ಭುತ ನಟನೆ ಮೂಲಕ ಎಲ್ಲರ ಗಮನ ಸೆಳೆದ ವಿಜಯ್ ಕೇವಲ 37ನೇ ವಯಸ್ಸಿಗೆ ರಸ್ತೆ ಅಪಘಾತದಲ್ಲಿ ಮೃತಪಟ್ಟಿದ್ದಾರೆ. ನಟನೆ ಹಾಗೂ ಸಮಾಜಮುಖಿ ಕೆಲಸ ಎರಡರಲ್ಲೂ ಸೈ ಎನ್ನಿಸಿಕೊಂಡಿದ್ದ ಅವರ ಅಕಾಲಿಕ ವಿದಾಯ ಎಲ್ಲರಲ್ಲೂ ಶೋಕ ಮಡುಗಟ್ಟುವಂತೆ ಮಾಡಿದೆ.

Sanchari Vijay National Award Winner Actor Who died after Road Accident here are Rare Photos

Actor Sanchari Vijays funeral according to the rituals of Veerashaiva Lingayat at Panchanahalli Chikkamagaluru

1983 ಜುಲೈ 18ರಂದು ಚಿಕ್ಕಮಗಳೂರಿನ ಕಡೂರಿನ ಪಂಚನಹಳ್ಳಿಯಲ್ಲಿ ವಿಜಯ್ ಜನಿಸಿದರು. ವಿಜಯ್ ಕುಮಾರ್ ಬಿ. ಎಂಬುದು ಅವರ ಮೂಲ ಹೆಸರು. ಸಣ್ಣ ವಯಸ್ಸಿನಿಂದಲೇ ನಟನೆ ಬಗ್ಗೆ ಆಸಕ್ತಿ ಹೊಂದಿದ್ದ ಅವರು, ರಂಗಭೂಮಿಯಲ್ಲಿ ಪಳಗಿದರು. ಇವರು ‘ಸಂಚಾರಿ’ ಹೆಸರಿನ ಥಿಯೇಟರ್ ಗ್ರೂಪ್ನಿಂದ ಬಂದ ಕಾರಣ ಸ್ಯಾಂಡಲ್ವುಡ್ನಲ್ಲಿ ಸಂಚಾರಿ ವಿಜಯ್ ಎಂದೆ ಖ್ಯಾತಿ ಪಡೆದುಕೊಂಡರು.

2011ರಲ್ಲಿ ತೆರೆಗೆ ಬಂದ ‘ರಂಗಪ್ಪ ಹೋಗ್ಬಿಟ್ಟಾ’ ಸಿನಿಮಾ ಸಂಚಾರಿ ವಿಜಯ್ ಅವರ ಮೊದಲ ಸಿನಿಮಾ. ರಮೇಶ್ ಅರವಿಂದ್ ಅಭಿನಯಿಸಿದ ಈ ಚಿತ್ರದಲ್ಲಿ ನೀನಾಸಂ ಸತೀಶ್, ಮೊದಲಾದವರು ನಟಿಸಿದ್ದರು. ಈ ಚಿತ್ರದಲ್ಲಿ ಸಂಚಾರಿ ವಿಜಯ್ ಕೂಡ ಕಾಣಿಸಿಕೊಂಡಿದ್ದರು.

Sanchari Vijay Accident Case: Friend Naveen gives his statement about accident in Jayanagar traffic police station

2015ರಲ್ಲಿ ತೆರೆಗೆ ಬಂದ ಅವರ ನಟನೆಯ ‘ನಾನು ಅವನಲ್ಲ ಅವಳು’ ಸಿನಿಮಾ ಸಂಚಾರಿ ವಿಜಯ್ ಅವರ ವೃತ್ತಿ ಜೀವನವನ್ನೇ ಬದಲಾಯಿಸಿತು. ಈ ಚಿತ್ರದಲ್ಲಿ ಅವರ ಅದ್ಭುತ ನಟನೆಗೆ ರಾಜ್ಯ ಹಾಗೂ ರಾಷ್ಟ್ರ ಪ್ರಶಸ್ತಿಗಳು ಸಿಕ್ಕವು. ಈ ಚಿತ್ರ ತೆರೆಕಂಡ ನಂತರ ಅವರಿಗೆ ಅವಕಾಶಗಳು ತೀವ್ರವಾಗಿ ಹೆಚ್ಚಿದವು. 2017 ಮತ್ತು 2018ರಲ್ಲಿ ಅವರ ನಟನೆಯ 8-9 ಚಿತ್ರಗಳು ತೆರೆಗೆ ಬಂದವು. ಆ್ಯಕ್ಟ್ 1978 ಅವರ ಕೊನೆಯ ಚಿತ್ರ.

ಸಂಚಾರಿ ವಿಜಯ್ ‘ಮೇಲೊಬ್ಬ ಮಾಯಾವಿ’ ಹೆಸರಿನ ಸಿನಿಮಾದಲ್ಲಿ ನಟಿಸುತ್ತಿದ್ದರು. ಸಿನಿಮಾ ಹೆಸರಿನಂತೆ ಸಂಚಾರಿ ವಿಜಯ್ ಕೂಡ ಮೇಲಿರುವ ಮಾಯಾವಿಯ ಆಟದ ಕೈಗೊಂಬೆಯಾಗಿ ಮೃತಪಟ್ಟಿದ್ದು ನಿಜಕ್ಕೂ ಬೇಸರದ ಸಂಗತಿ.
























