- Kannada News Photo gallery Sanjana Burli And Samarth Honeymoon Photos Actress spend time Husband In Africa
ಮದುವೆ ಬಳಿಕ ವಿಶೇಷ ದ್ವೀಪಕ್ಕೆ ಪ್ರವಾಸಕ್ಕೆ ತೆರಳಿದ ಸಂಜನಾ ಬುರ್ಲಿ
Sanja Burli Photo: ಸಂಜನಾ ಬುರ್ಲಿ ಹಾಗೂ ಸಮರ್ಥ ಚೆನ್ನಗಿರಿ ಅವರು ಇತ್ತೀಚೆಗಷ್ಟೇ ಮದುವೆ ಆದರು. ವಿವಾಹದ ಫೋಟೋಗಳನ್ನು ದಂಪತಿ ಹಂಚಿಕೊಂಡಿದ್ದರು. ಈಗ ಸುತ್ತಾಟ ನಡೆಸಲು ಇವರು ತೆರಳಿದ್ದಾರೆ. ಈ ಫೋಟೋಗಳನ್ನು ಸಂಜನಾ ಅವರು ಸೋಶಿಯಲ್ ಮೀಡಿಯಾದಲ್ಲಿ ಹಂಚಿಕೊಂಡಿದ್ದಾರೆ ಎನ್ನುವುದು ವಿಶೇಷ.
Updated on: Apr 28, 2026 | 11:58 AM

ಸಂಜನಾ ಬುರ್ಲಿ ಅವರು ಇತ್ತೀಚೆಗೆ ಸಮರ್ಥ್ ಅವರ ಜೊತೆ ವಿವಾಹ ಆಗಿದ್ದಾರೆ. ಮದುವೆ ಬಳಿಕ ಇಬ್ಬರೂ ಒಂದು ವಿಶೇಷ ಐಲೆಂಡ್ಗೆ ಪ್ರವಾಸ ತೆರಳಿದ್ದಾರೆ. ಈ ಫೋಟೋಗಳನ್ನು ಸಂಜನಾ ಅವರು ಸೋಶಿಯಲ್ ಮೀಡಿಯಾದಲ್ಲಿ ಹಂಇಕೊಂಡಿದ್ದಾರೆ.

ಸಂಜನಾ ಹಾಗೂ ಸಮರ್ಥ್ ಅವರು ತಿಳಿ ನೀರ ಸಮುದ್ರದಲ್ಲಿ ನಿಂತು ಪೋಸ್ ಕೊಟ್ಟಿದ್ದಾರೆ. ಈ ಫೋಟೋಗೆ ಫ್ಯಾನ್ಸ್ ಕಡೆಯಿಂದ ನಾನಾ ರೀತಿಯ ಕಮೆಂಟ್ಗಳು ಬಂದಿವೆ. ಈ ಫೋಟೋಗಳನ್ನು ಅಭಿಮಾನಿಗಳು ಇಷ್ಟಪಟ್ಟಿದ್ದಾರೆ.

ಸಂಜನಾ ಹಾಗೂ ಸಮರ್ಥ್ ಪ್ರವಾಸಕ್ಕೆ ತೆರಳಿದ್ದು ಆಫ್ರಿಕಾದ ತಾಂಜೇನಿಯಾ ಬಳಿ ಇರುವ ಮ್ನೆಂಬಾ ಎಂಬ ದ್ವೀಪಕ್ಕೆ. ಈ ದ್ವೀಪವು ಸ್ಫಟಿಕದಂತೆ ಹೊಳೆಯುವ ಬಿಳಿ ಮರಳು ಮತ್ತು ತಿಳಿ ನೀಲಿ ಬಣ್ಣದ ಸಮುದ್ರದ ನೀರಿಗೆ ಹೆಸರುವಾಸಿಯಾಗಿದೆ.

ಮ್ನೆಂಬಾ ಅಟಾಲ್ ಸಂರಕ್ಷಿತ ಪ್ರದೇಶವಾಗಿದ್ದು ಇಲ್ಲಿ ಹವಳದ ಬಂಡೆಗಳಿವೆ. ಸ್ಕೂಬಾ ಡೈವಿಂಗ್ಗೆ ವಿಶ್ವದ ಅತ್ಯುತ್ತಮ ತಾಣಗಳಲ್ಲಿ ಒಂದಾಗಿದೆ. ಇಲ್ಲಿ ನೀವು ಬಣ್ಣಬಣ್ಣದ ಮೀನುಗಳು, ಸಮುದ್ರ ಆಮೆಗಳು ಮತ್ತು ಕೆಲವೊಮ್ಮೆ ಡಾಲ್ಫಿನ್ಗಳನ್ನು ಹತ್ತಿರದಿಂದ ನೋಡಬಹುದು.

ಈ ದ್ವೀಪವು ಸಂಪೂರ್ಣವಾಗಿ ಖಾಸಗಿಯಾಗಿದ್ದು, ಇಲ್ಲಿ ಐಷಾರಾಮಿ ರೆಸಾರ್ಟ್ ಮಾತ್ರ ಇದೆ. ಇಲ್ಲಿ ಉಳಿದುಕೊಳ್ಳುವುದು ಅತ್ಯಂತ ದುಬಾರಿ. ರೆಸಾರ್ಟ್ ಬುಕ್ ಮಾಡಿದರೆ ಮಾತ್ರ ಇಲ್ಲಿಗೆ ಹೋಗಲು ಅವಕಾಶ ಇದೆ.

Sanjana Burli (9)




