AQI
TV9 Network
User
Sign In

By signing in or creating an account, you agree with Associated Broadcasting Company's Terms & Conditions and Privacy Policy.

ಮದುವೆ ಬಳಿಕ ವಿಶೇಷ ದ್ವೀಪಕ್ಕೆ ಪ್ರವಾಸಕ್ಕೆ ತೆರಳಿದ ಸಂಜನಾ ಬುರ್ಲಿ

Sanja Burli Photo: ಸಂಜನಾ ಬುರ್ಲಿ ಹಾಗೂ ಸಮರ್ಥ ಚೆನ್ನಗಿರಿ ಅವರು ಇತ್ತೀಚೆಗಷ್ಟೇ ಮದುವೆ ಆದರು. ವಿವಾಹದ ಫೋಟೋಗಳನ್ನು ದಂಪತಿ ಹಂಚಿಕೊಂಡಿದ್ದರು. ಈಗ ಸುತ್ತಾಟ ನಡೆಸಲು ಇವರು ತೆರಳಿದ್ದಾರೆ. ಈ ಫೋಟೋಗಳನ್ನು ಸಂಜನಾ ಅವರು ಸೋಶಿಯಲ್ ಮೀಡಿಯಾದಲ್ಲಿ ಹಂಚಿಕೊಂಡಿದ್ದಾರೆ ಎನ್ನುವುದು ವಿಶೇಷ.

ರಾಜೇಶ್ ದುಗ್ಗುಮನೆ
|

Updated on: Apr 28, 2026 | 11:58 AM

Share
ಸಂಜನಾ ಬುರ್ಲಿ ಅವರು ಇತ್ತೀಚೆಗೆ ಸಮರ್ಥ್ ಅವರ ಜೊತೆ ವಿವಾಹ ಆಗಿದ್ದಾರೆ. ಮದುವೆ ಬಳಿಕ ಇಬ್ಬರೂ ಒಂದು ವಿಶೇಷ ಐಲೆಂಡ್​​ಗೆ ಪ್ರವಾಸ ತೆರಳಿದ್ದಾರೆ. ಈ ಫೋಟೋಗಳನ್ನು ಸಂಜನಾ ಅವರು ಸೋಶಿಯಲ್ ಮೀಡಿಯಾದಲ್ಲಿ ಹಂಇಕೊಂಡಿದ್ದಾರೆ.

1 / 6
ಸಂಜನಾ ಹಾಗೂ ಸಮರ್ಥ್ ಅವರು ತಿಳಿ ನೀರ ಸಮುದ್ರದಲ್ಲಿ ನಿಂತು ಪೋಸ್ ಕೊಟ್ಟಿದ್ದಾರೆ. ಈ ಫೋಟೋಗೆ ಫ್ಯಾನ್ಸ್​ ಕಡೆಯಿಂದ ನಾನಾ ರೀತಿಯ ಕಮೆಂಟ್​​ಗಳು ಬಂದಿವೆ. ಈ ಫೋಟೋಗಳನ್ನು ಅಭಿಮಾನಿಗಳು ಇಷ್ಟಪಟ್ಟಿದ್ದಾರೆ.

2 / 6
ಸಂಜನಾ ಹಾಗೂ ಸಮರ್ಥ್ ಪ್ರವಾಸಕ್ಕೆ ತೆರಳಿದ್ದು ಆಫ್ರಿಕಾದ ತಾಂಜೇನಿಯಾ ಬಳಿ ಇರುವ ಮ್ನೆಂಬಾ ಎಂಬ ದ್ವೀಪಕ್ಕೆ. ಈ ದ್ವೀಪವು ಸ್ಫಟಿಕದಂತೆ ಹೊಳೆಯುವ ಬಿಳಿ ಮರಳು ಮತ್ತು ತಿಳಿ ನೀಲಿ ಬಣ್ಣದ ಸಮುದ್ರದ ನೀರಿಗೆ ಹೆಸರುವಾಸಿಯಾಗಿದೆ.

3 / 6
ಮ್ನೆಂಬಾ ಅಟಾಲ್ ಸಂರಕ್ಷಿತ ಪ್ರದೇಶವಾಗಿದ್ದು ಇಲ್ಲಿ ಹವಳದ ಬಂಡೆಗಳಿವೆ. ಸ್ಕೂಬಾ ಡೈವಿಂಗ್‌ಗೆ ವಿಶ್ವದ ಅತ್ಯುತ್ತಮ ತಾಣಗಳಲ್ಲಿ ಒಂದಾಗಿದೆ. ಇಲ್ಲಿ ನೀವು ಬಣ್ಣಬಣ್ಣದ ಮೀನುಗಳು, ಸಮುದ್ರ ಆಮೆಗಳು ಮತ್ತು ಕೆಲವೊಮ್ಮೆ ಡಾಲ್ಫಿನ್‌ಗಳನ್ನು ಹತ್ತಿರದಿಂದ ನೋಡಬಹುದು.

4 / 6
ಈ ದ್ವೀಪವು ಸಂಪೂರ್ಣವಾಗಿ ಖಾಸಗಿಯಾಗಿದ್ದು, ಇಲ್ಲಿ ಐಷಾರಾಮಿ ರೆಸಾರ್ಟ್ ಮಾತ್ರ ಇದೆ. ಇಲ್ಲಿ ಉಳಿದುಕೊಳ್ಳುವುದು ಅತ್ಯಂತ ದುಬಾರಿ. ರೆಸಾರ್ಟ್ ಬುಕ್ ಮಾಡಿದರೆ ಮಾತ್ರ ಇಲ್ಲಿಗೆ ಹೋಗಲು ಅವಕಾಶ ಇದೆ.

5 / 6
ಜುಲೈನಿಂದ ಮಾರ್ಚ್​ವರೆಗಿನ ಸಮಯವು ಇಲ್ಲಿಗೆ ಭೇಟಿ ನೀಡಲು ಸೂಕ್ತವಾದ ಸಮಯ. ಏಪ್ರಿಲ್ ಮತ್ತು ಮೇ ತಿಂಗಳಲ್ಲಿ ಮಳೆ ಹೆಚ್ಚಾಗಿರುವುದರಿಂದ ಪ್ರವಾಸಕ್ಕೆ ಅಡ್ಡಿಯಾಗಬಹುದು. ಈಗ ಸಂಜನಾ ಅವರು ಏಪ್ರಿಲ್ ಸಮಯದಲ್ಲೇ ಇಲ್ಲಿಗೆ ತೆರಳಿ ಎಂಜಾಯ್ ಮಾಡಿದ್ದಾರೆ.

Sanjana Burli (9)

6 / 6
Follow Us