Updated on: May 28, 2022 | 3:51 PM
Sarkaru Vaari Paata actress Keerthy Suresh shares yellow saree photos
ಅಭಿಮಾನಿಗಳ ಜೊತೆ ಸಂಪರ್ಕದಲ್ಲಿ ಇರಲು ಕೀರ್ತಿ ಸುರೇಶ್ ಅವರು ಸೋಶಿಯಲ್ ಮೀಡಿಯಾ ಬಳಸುತ್ತಾರೆ. ಫ್ಯಾನ್ಸ್ ಸಲುವಾಗಿ ಅನೇಕ ಹೊಸ ಫೋಟೋಗಳನ್ನು ಹಂಚಿಕೊಳ್ಳುತ್ತಾರೆ. ಅವರ ಕೆಲವು ಹೊಸ ಫೋಟೋಗಳು ಭರಪೂರ ಲೈಕ್ಸ್ ಪಡೆದುಕೊಳ್ಳುತ್ತಿವೆ.
ಹಳದಿ ಬಣ್ಣದ ಸೀರೆ ಧರಿಸಿ ಕೀರ್ತಿ ಸುರೇಶ್ ಮಿಂಚಿದ್ದಾರೆ. ಬಗೆಬಗೆಯಲ್ಲಿ ಅವರು ಪೋಸ್ ನೀಡಿದ್ದಾರೆ. ಈ ಫೋಟೋಗಳನ್ನು ಹಂಚಿಕೊಂಡಿರುವ ಅವರು, Shades of summer ಎಂದು ಕ್ಯಾಪ್ಷನ್ ನೀಡಿದ್ದಾರೆ. ಎಂಟೂವರೆ ಲಕ್ಷಕ್ಕೂ ಅಧಿಕ ಜನರು ಈ ಫೋಟೋಗಳಿಗೆ ಮೆಚ್ಚುಗೆ ಸೂಚಿಸಿದ್ದಾರೆ.
‘ಮಹಾನಟಿ’ ರೀತಿಯ ಮಹಿಳಾ ಪ್ರಧಾನ ಪಾತ್ರಗಳನ್ನೂ ಮಾಡಿ ಕೀರ್ತಿ ಸುರೇಶ್ ಸೈ ಎನಿಸಿಕೊಂಡಿದ್ದಾರೆ. ಇತ್ತ, ಸ್ಟಾರ್ ಹೀರೋಗಳ ಕಮರ್ಷಿಯಲ್ ಚಿತ್ರಗಳಿಗೂ ನಾಯಕಿಯಾಗಿ ಅವರು ಮಿಂಚಿದ್ದಾರೆ. ದಿನದಿನಕ್ಕೂ ಅವರ ಅಭಿಮಾನಿ ಬಳಗ ದೊಡ್ಡದಾಗುತ್ತಿದೆ.