- Kannada News Photo gallery Shakuntalam Movie Actress Samantha Ruth Prabhu gave answer to Date Someone
‘ಯಾರ ಜೊತೆಗಾದರೂ ಡೇಟ್ ಮಾಡಿ’ ಎಂದು ಸಮಂತಾಗೆ ಬಂತು ಬೇಡಿಕೆ; ನಟಿಯರ ಉತ್ತರ ಏನು?
ಸೋಶಿಯಲ್ ಮೀಡಿಯಾದಲ್ಲಿ ‘ಶಾಕುಂತಲಂ’ ಚಿತ್ರಕ್ಕೆ ಒಳ್ಳೆಯ ಹೈಪ್ ಸೃಷ್ಟಿ ಆಗಿದೆ. ಅನೇಕರು ಈ ಚಿತ್ರವನ್ನು ನೋಡಲು ಕಾದು ಕೂತಿದ್ದಾರೆ. ಅಭಿಮಾನಿಗಳು ‘ಶಾಕುಂತಲಂ’ಗೆ ಸಂಬಂಧಿಸಿದ ಪೋಸ್ಟ್ಗಳನ್ನು ಹಂಚಿಕೊಳ್ಳುತ್ತಾರೆ.
Updated on: Mar 27, 2023 | 2:03 PM

ನಟಿ ಸಮಂತಾ ಅವರು ‘ಶಾಕುಂತಲಂ’ ಸಿನಿಮಾ ಪ್ರಮೋಷನ್ ಕೆಲಸಗಳಲ್ಲಿ ಬ್ಯುಸಿ ಇದ್ದಾರೆ. ಮುಂಬೈ ಹಾಗೂ ಹೈದರಾಬಾದ್ನಲ್ಲಿ ಸಂದರ್ಶನ ನೀಡುತ್ತಾ ಚಿತ್ರದ ಪ್ರಮೋಷನ್ ಮಾಡುತ್ತಿದ್ದಾರೆ. ಇದರ ಜೊತೆಗೆ ಸೋಶಿಯಲ್ ಮೀಡಿಯಾದಲ್ಲೂ ಅವರು ಆ್ಯಕ್ಟೀವ್ ಆಗಿದ್ದಾರೆ.

ಸೋಶಿಯಲ್ ಮೀಡಿಯಾದಲ್ಲಿ ‘ಶಾಕುಂತಲಂ’ ಚಿತ್ರಕ್ಕೆ ಒಳ್ಳೆಯ ಹೈಪ್ ಸೃಷ್ಟಿ ಆಗಿದೆ. ಅನೇಕರು ಈ ಚಿತ್ರವನ್ನು ನೋಡಲು ಕಾದು ಕೂತಿದ್ದಾರೆ. ಅಭಿಮಾನಿಗಳು ‘ಶಾಕುಂತಲಂ’ಗೆ ಸಂಬಂಧಿಸಿದ ಪೋಸ್ಟ್ಗಳನ್ನು ಹಂಚಿಕೊಳ್ಳುತ್ತಾರೆ.

ಸಮಂತಾ ಅವರಿಗೆ ಡೇಟ್ ಮಾಡುವಂತೆ ಬೇಡಿಕೆ ಬಂದಿದೆ. ಇದಕ್ಕೆ ನಟಿ ಉತ್ತರ ನೀಡಿದ್ದಾರೆ. ಅವರ ಉತ್ತರ ನೋಡಿ ಅನೇಕರು ಅಚ್ಚರಿಗೊಂಡಿದ್ದಾರೆ.

‘ನನಗೆ ಗೊತ್ತು ನಾನು ಹೇಳುವ ಜಾಗದಲ್ಲಿಲ್ಲ ಎಂದು. ಆದರೆ, ಯಾರ ಜೊತೆಗಾದರೂ ಡೇಟ್ ಮಾಡಿ’ ಎಂದು ಶ್ರಾವಂತಿ ಹೆಸರಿನ ಅಭಿಮಾನಿ ಟ್ವೀಟ್ ಮಾಡಿದ್ದರು.

ಇದಕ್ಕೆ ಉತ್ತರಿಸಿರುವ ಸಮಂತಾ, ‘ನೀವು ಪ್ರೀತಿಸಿದಂತೆ ನನ್ನನ್ನು ಮತ್ಯಾರು ಪ್ರೀತಿ ಮಾಡುತ್ತಾರೆ’ ಎಂದು ಸಮಂತಾ ಬರೆದುಕೊಂಡಿದ್ದಾರೆ.