- Kannada News Photo gallery Sudha Murthy Sarath Kumar Priya Anand and others Puneetha Parva event in Bengaluru
Puneetha Parva: ‘ಮಿಸ್ ಯೂ ಅಪ್ಪು’: ಪುನೀತ ಪರ್ವ ವೇದಿಕೆಯಲ್ಲಿ ‘ಪವರ್ ಸ್ಟಾರ್’ಗೆ ನುಡಿ ನಮನ ಸಲ್ಲಿಸಿದ ಗಣ್ಯರು
Gandhada Gudi: ನೂರಾರು ಗಣ್ಯರು ‘ಪುನೀತ ಪರ್ವ’ ಕಾರ್ಯಕ್ರಮಕ್ಕೆ ಹಾಜರಿ ಹಾಕಿದ್ದಾರೆ. ಪುನೀತ್ ರಾಜ್ಕುಮಾರ್ ಅವರನ್ನು ವೇದಿಕೆಯಲ್ಲಿ ಸ್ಮರಿಸಿಕೊಳ್ಳಲಾಗಿದೆ.
Updated on: Oct 21, 2022 | 8:39 PM

Sudha Murthy Sarath Kumar Priya Anand and others Puneetha Parva event in Bengaluru

Sudha Murthy Sarath Kumar Priya Anand and others Puneetha Parva event in Bengaluru

ಬಹುಭಾಷಾ ನಟ ಶರತ್ ಕುಮಾರ್ ಅವರಿಗೂ ಪುನೀತ್ ರಾಜ್ಕುಮಾರ್ ಜೊತೆ ಒಡನಾಟ ಇತ್ತು. ಅಪ್ಪು ಬಗ್ಗೆ ಅವರು ಕೂಡ ವೇದಿಕೆಯ ಮೇಲೆ ಪ್ರೀತಿಯ ಮಾತುಗಳನ್ನು ಆಡಿದರು. ಹಾಡಿನ ಮೂಲಕ ನಮನ ಸಲ್ಲಿಸಿದರು.

ಗಾಯಕ ವಿಜಯ್ ಪ್ರಕಾಶ್ ಅವರು ವೇದಿಕೆಯಲ್ಲಿ ಪುನೀತ್ ನೆನಪಿನಲ್ಲಿ ಕವಿತೆ ಓದಿದರು. ಬಳಿಕ ‘ಬೊಂಬೆ ಹೇಳುತೈತೆ..’ ಗೀತೆಯನ್ನು ಹಾಡಿ ಎಲ್ಲರನ್ನೂ ರಂಜಿಸಿದರು.

ಡಾ. ರಾಜ್ ಕುಟುಂಬದ ಎಲ್ಲರೂ ಸೇರಿ ‘ಪುನೀತ ಪರ್ವ’ ಕಾರ್ಯಕ್ರಮ ನಡೆಸಿಕೊಟ್ಟಿದ್ದಾರೆ. ಶಿವರಾಜ್ಕುಮಾರ್, ಗೀತಾ ಶಿವರಾಜ್ಕುಮಾರ್, ಅಶ್ವಿನಿ ಪುನೀತ್ ರಾಜ್ಕುಮಾರ್ ಸೇರಿದಂತೆ ಎಲ್ಲರೂ ಇದರಲ್ಲಿ ಭಾಗಿ ಆಗಿದ್ದಾರೆ.

ಧ್ರುವ ಸರ್ಜಾ, ರಾಜ್ ಬಿ. ಶೆಟ್ಟಿ, ದುನಿಯಾ ವಿಜಯ್ ಮುಂತಾದ ಕಲಾವಿದರು ಕೂಡ ಪುನೀತ್ ರಾಜ್ಕುಮಾರ್ ಜೊತೆಗಿನ ನೆನಪುಗಳನ್ನು ಮೆಲುಕು ಹಾಕಿದರು. ಮಾತನಾಡುತ್ತ ದುನಿಯಾ ವಿಜಯ್ ಭಾವುಕರಾದರು.









