Updated on: Jan 24, 2024 | 9:58 PM
ಮಿಲ್ಕಿ ಬ್ಯೂಟಿ ಎಂದೇ ಕರೆಸಿಕೊಳ್ಳುವ ತಮನ್ನಾ ಭಾಟಿಯಾ, ಸಿನಿಮಾಗಳಲ್ಲಿ ಗ್ಲಾಮರಸ್ ಆಗಿ ಕಾಣಿಸಿಕೊಳ್ಳುವುದುಂಟು ಆದರೆ ಅವರು ಧಾರ್ಮಿಕ ವ್ಯಕ್ತಿ.
ದೇವರ ಬಗ್ಗೆ ಅಪಾರ ಭಕ್ತಿ, ಶ್ರದ್ಧೆಗಳನ್ನು ಹೊಂದಿರುವ ತಮನ್ನಾ ಭಾಟಿಯಾ ಆಗಾಗ್ಗೆ ದೂರ-ದೂರದ ದೇವಸ್ಥಾನಗಳಿಗೆ ಭೇಟಿ ನೀಡುತ್ತಿರುತ್ತಾರೆ.
ಇದೀಗ ತಮನ್ನಾ ಭಾಟಿಯಾ ಗೌಹಟಿಯ ಕಾಮಾಕ್ಯ ದೇವಾಲಯಕ್ಕೆ ಕುಟುಂಬ ಸದಸ್ಯರೊಟ್ಟಿಗೆ ಭೇಟಿ ನೀಡಿ ಪೂಜೆ ಸಲ್ಲಿಸಿದ್ದಾರೆ.
ಹಳದಿ ಚೂಡಿದಾರ್ ಉಟ್ಟು, ಕೊರಳಿಗೆ ಹಾರ ತೊಟ್ಟು, ಶಾಲು ಹೊದ್ದುಕೊಂಡು, ಹಣೆ ಮುಳುಗುವಂತೆ ಕುಂಕುಮ ಇಟ್ಟುಕೊಂಡಿರುವ ತಮನ್ನಾ ತಮ್ಮ ಕೆಲವು ಚಿತ್ರಗಳನ್ನು ಹಂಚಿಕೊಂಡಿದ್ದಾರೆ.
‘ನನ್ನ ಪ್ರೀತಿಪಾತ್ರರರೊಟ್ಟಿಗೆ ಕೆಲವು ಭಕ್ತಿಪೂರ್ಣ ಕ್ಷಣಗಳನ್ನು ಕಳೆದೆ’ ಎಂದು ಕ್ಯಾಪ್ಷನ್ ನೀಡಿ ದೇವಾಲಯದ ಚಿತ್ರಗಳನ್ನು ತಮನ್ನಾ ಹಂಚಿಕೊಂಡಿದ್ದಾರೆ.
ತಮನ್ನಾ ಶಕ್ತಿದೇವತೆಗಳ ಆರಾಧಕಿ. ಲಿಂಗ ಭೈರವಿ ದೇವಿಯನ್ನು ನಂಬುತ್ತಾರೆ ಹಾಗೂ ಆರಾಧಿಸುತ್ತಾರೆ. ಶಿವನ ಬಗ್ಗೆಯೂ ಅಪಾರ ಪ್ರೇಮ ತಮನ್ನಾಗೆ.
ಇಶಾ ಫೌಂಡೇಶನ್ನಲ್ಲಿ ನಡೆಯುವ ಶಿವರಾತ್ರಿ, ಸಂಕ್ರಾಂತಿ ಹಾಗೂ ಲಿಂಗ ಭೈರವೀ ದೇವಿ ಆರಾಧನೆಗಳಲ್ಲಿ ನಟಿ ತಮನ್ನಾ ಭಾಟಿಯಾ ತೊಡಗಿಕೊಳ್ಳುತ್ತಾರೆ.
ನಟಿ ತಮನ್ನಾ ಭಾಟಿಯಾ ಧ್ಯಾನ, ಯೋಗ, ಪ್ರಾಣಾಯಾಮಗಳನ್ನು ತಮ್ಮ ದಿನನಿತ್ಯದ ಜೀವನದ ಭಾಗವನ್ನಾಗಿ ಮಾಡಿಕೊಂಡಿದ್ದಾರೆ.