- Kannada News Photo gallery Tharun Sudhir And Sonal Montero Haldi Shastra Photos Entertainment News In Kannada
ಅದ್ದೂರಿಯಾಗಿ ನಡೆದ ತರುಣ್-ಸೋನಲ್ ಅರಿಶಿಣ ಶಾಸ್ತ್ರ; ಇಲ್ಲಿವೆ ಸುಂದರ ಫೋಟೋಗಳು
ತರುಣ್ ಸುಧೀರ್ ಹಾಗೂ ಸೋನಲ್ ಮಧ್ಯೆ ಪ್ರೀತಿ ಮೂಡಿತ್ತು. ಈಗ ಈ ಪ್ರೀತಿಗೆ ಹೊಸ ಅರ್ಥ ನೀಡುತ್ತಿದ್ದಾರೆ. ಇವರ ಮದುವೆ ನೋಡಲು ಫ್ಯಾನ್ಸ್ ಕಾಯುತ್ತಿದ್ದಾರೆ. ತರುಣ್ ಅವರು ಚಿತ್ರರಂಗದಲ್ಲಿ ನಿರ್ದೇಶಕರಾಗಿ ಗುರುತಿಸಿಕೊಂಡಿದ್ದಾರೆ. ಕೆಲವು ಸೂಪರ್ ಹಿಟ್ ಚಿತ್ರಗಳನ್ನು ಅವರು ನಿರ್ದೇಶನ ಮಾಡಿದ್ದಾರೆ. ಕಳೆದ ವರ್ಷ ರಿಲೀಸ್ ಆದ ‘ಕಾಟೇರ’ ಯಶಸ್ಸು ಕಂಡಿದೆ.
Updated on: Aug 10, 2024 | 6:09 AM

ಆಗಸ್ಟ್ 10 ಹಾಗೂ 11 ನಿರ್ದೇಶಕ ತರುಣ್ ಸುಧೀರ್ ಹಾಗೂ ನಟಿ ಸೋನಲ್ ಮೊಂತೆರೋ ಬಾಳಲ್ಲಿ ಮಹತ್ವದ ದಿನ. ಇಬ್ಬರೂ ಹೊಸ ಜೀವನಕ್ಕೆ ಕಾಲಿಡುತ್ತಿದ್ದಾರೆ. ಅದಕ್ಕೂ ಮೊದಲು ಅದ್ದೂರಿಯಾಗಿ ಅರಿಶಿಣ ಶಾಸ್ತ್ರಗಳನ್ನು ಮಾಡಿಕೊಳ್ಳಲಾಗಿದೆ.

ಆಗಸ್ಟ್ 10ರಂದು ಬೆಂಗಳೂರಲ್ಲಿ ಆರತಕ್ಷತೆ ಜರುಗಲಿದೆ. ಆಗಸ್ಟ್ 11ರಂದು ಇವರ ವಿವಾಹ ನೆರವೇರುತ್ತಿದೆ. ಇದಕ್ಕೂ ಮೊದಲು ಈ ಜೋಡಿ ಅರಿಶಿಣದ ನೀರಿನಲ್ಲಿ ಮಿಂದೆದ್ದಿದ್ದಾರೆ. ಈ ಫೋಟೋಗಳು ವೈರಲ್ ಆಗಿವೆ.

ಅರಿಶಿಣದ ನೀರನ್ನು ಹೊಯ್ದುಕೊಂಡು ಫೋಟೋಗೆ ತರುಣ್ ಹಾಗೂ ಸೋನಲ್ ಪೋಸ್ ಕೊಟ್ಟಿದ್ದಾರೆ. ಭಾವಿ ಪತಿ-ಪತ್ನಿಯನ್ನು ನೋಡಿ ಫ್ಯಾನ್ಸ್ ಮೆಚ್ಚುಗೆ ಸೂಚಿಸುತ್ತಿದ್ದಾರೆ. ಈ ಫೋಟೋಗಳಿಗೆ ಸಾಮಾಜಿಕ ಜಾಲತಾಣದಲ್ಲಿ ಲೈಕ್ ಸಿಕ್ಕಿದೆ.

ಚಿತ್ರರಂಗದ ಅನೇಕರ ಜೊತೆ ತರುಣ್ ಸುಧೀರ್ಗೆ ಒಳ್ಳೆಯ ಗೆಳೆತನ ಇದೆ. ಹೀಗಾಗಿ ನೆನಪಿರಲಿ ಪ್ರೇಮ್, ಶರಣ್ ಸೇರಿದಂತೆ ಅನೇಕರು ಅರಿಶಿಣ ಶಾಸ್ತ್ರಕ್ಕೆ ಬಂದು ಪೋಸ್ ಕೊಟ್ಟಿದ್ದಾರೆ.

ತರುಣ್ ಅವರು ಚಿತ್ರರಂಗದಲ್ಲಿ ನಿರ್ದೇಶಕರಾಗಿ ಗುರುತಿಸಿಕೊಂಡಿದ್ದಾರೆ. ಕೆಲವು ಸೂಪರ್ ಹಿಟ್ ಚಿತ್ರಗಳನ್ನು ಅವರು ನಿರ್ದೇಶನ ಮಾಡಿದ್ದಾರೆ. ಕಳೆದ ವರ್ಷ ರಿಲೀಸ್ ಆದ ‘ಕಾಟೇರ’ ಯಶಸ್ಸು ಕಂಡಿದೆ.

ಸೋನಲ್ ಅವರು ಚಿತ್ರರಂಗದಲ್ಲಿ ದೊಡ್ಡ ಮಟ್ಟದಲ್ಲಿ ಯಶಸ್ಸು ಕಂಡಿದ್ದಾರೆ. ಅವರು ನಟಿಯಾಗಿ ಸಿನಿಮಾ ರಂಗದಲ್ಲಿ ಗುರುತಿಸಿಕೊಂಡಿದ್ದಾರೆ.




