- Kannada News Photo gallery Tharun Sudhir And Sonal Montero To go honeymoon to Maldives Cinema News in Kannada
ಫೇವರಿಟ್ ಸ್ಥಳಕ್ಕೆ ಹನಿಮೂನ್ ತೆರಳಲಿದ್ದಾರೆ ಸೋನಲ್-ತರುಣ್
ಆ್ಯಂಕರ್ ಅನುಶ್ರೀ ಅವರು ಸೋನಲ್ ಹಾಗೂ ತರುಣ್ ಅವರನ್ನು ವಿಶೇಷವಾಗಿ ಸಂದರ್ಶನ ಮಾಡಿದ್ದಾರೆ. ಈ ಸಂದರ್ಶನ ಅವರ ಯೂಟ್ಯೂಬ್ ಚಾನೆಲ್ನಲ್ಲಿ ಅಪ್ಲೋಡ್ ಆಗಿದೆ. ಇದರಲ್ಲಿ ತರುಣ್ ಅವರಿಗೆ ಹನಿಮೂನ್ ಬಗ್ಗೆ ಪ್ರಶ್ನೆ ಎದುರಾಗಿದೆ. ಇದಕ್ಕೆ ಅವರು ಉತ್ತರ ನೀಡಿದ್ದಾರೆ.
Updated on: Aug 30, 2024 | 11:40 AM

ಸೋನಲ್ ಮೊಂತೆರೋ ಹಾಗೂ ತರುಣ್ ಸುಧೀರ್ ಮದುವೆ ಆಗಿ ಕೆಲವು ದಿನಗಳು ಕಳೆದಿವೆ. ಇಬ್ಬರೂ ಹಾಯಾಗಿ ಸಂಸಾರ ನಡೆಸುತ್ತಾ ಬಂದಿದ್ದಾರೆ. ಈಗ ಇವರು ಹನಿಮೂನ್ ವಿಚಾರ ರಿವೀಲ್ ಮಾಡಿದ್ದಾರೆ. ಎಲ್ಲಿಗೆ ಹನಿಮೂನ್ ತೆರಳುತ್ತೇವೆ ಎಂಬ ವಿಚಾರ ರಿವೀಲ್ ಮಾಡಿದ್ದಾರೆ.

ಆ್ಯಂಕರ್ ಅನುಶ್ರೀ ಅವರು ಸೋನಲ್ ಹಾಗೂ ತರುಣ್ ಅವರನ್ನು ವಿಶೇಷವಾಗಿ ಸಂದರ್ಶನ ಮಾಡಿದ್ದಾರೆ. ಈ ಸಂದರ್ಶನ ಅವರ ಯೂಟ್ಯೂಬ್ ಚಾನೆಲ್ನಲ್ಲಿ ಅಪ್ಲೋಡ್ ಆಗಿದೆ. ಇದರಲ್ಲಿ ತರುಣ್ ಅವರಿಗೆ ಹನಿಮೂನ್ ಬಗ್ಗೆ ಪ್ರಶ್ನೆ ಎದುರಾಗಿದೆ.

‘ನಾನು ಸಿನಿಮಾ ಶೂಟಿಂಗ್ ಕಾರಣಕ್ಕಾಗಿ ಬೇರೆ ಬೇರೆ ದೇಶಗಳಿಗೆ ಹೋಗಿ ಬಂದಿದ್ದೇನೆ. ನನಗೆ ಮದುವೆ ಆದ ಬಳಿಕ ಹೋದರೆ ಮಾಲ್ಡೀವ್ಸ್ಗೆ ಹೋಗಬೇಕು ಎನ್ನುವ ಆಸೆ ಇತ್ತು. ಯಾವಾಗೋ ಅವಳ ಬಳಿ ಹೇಳಿದ್ದೆ. ಅವಳಿಗೂ ಆ ಪ್ಲೇಸ್ ಇಷ್ಟ’ ಎಂದಿದ್ದಾರೆ ತರುಣ್ ಸುಧೀರ್.

‘ಎರಡು-ಮೂರು ಜಾಗವನ್ನು ಫೈನಲ್ ಮಾಡುತ್ತಿರುವುದಾಗಿ’ ತರುಣ್ ಸುಧೀರ್ ಹೇಳಿಕೊಂಡಿದ್ದಾರೆ. ನಿಶ್ವಿಕಾ ನಾಯ್ಡು ಅವರು ಈ ವಿಚಾರದ ಬಗ್ಗೆ ಕೇಳಿದ್ದಾರೆ. ‘ಬಜೆಟ್-ಕ್ಲೈಮೆಟ್ ನೋಡಿ ನಿರ್ಧಾರ ಮಾಡಬೇಕಿದೆ’ ಎಂದಿದ್ದಾರೆ ಅವರು.

ಬೆಂಗಳೂರಲ್ಲಿ ತರುಣ್ ಸುಧೀರ್ ಹಾಗೂ ಸೋನಲ್ ಆರತಕ್ಷತೆ ಮಾಡಿಕೊಂಡಿದ್ದಾರೆ. ಮುಂದಿನ ದಿನಗಳಲ್ಲಿ ಮಂಗಳೂರಿನಲ್ಲಿ ರಿಸೆಪ್ಷನ್ ನಡೆಯಲಿದೆ.




