ಮಾನ್ಸೂನ್ ಋತುವಿನಲ್ಲಿ ನಿಮ್ಮ ಮನೆಯ ಅಂದವನ್ನು ಹೀಗೆ ಹೆಚ್ಚಿಸಿ, ಇಲ್ಲಿದೆ ಟಿಪ್ಸ್
ಮನೆ ದೊಡ್ಡದಿರಲಿ ಸಣ್ಣದಿರಲಿ ಸುಂದರವಾಗಿರಬೇಕೆನ್ನುವುದು ಎಲ್ಲರಿಗೂ ಇರುತ್ತದೆ. ಹೀಗಾಗಿ ಹೆಚ್ಚಿನ ಮಹಿಳೆಯರು ಮನೆಯ ಅಲಂಕಾರದ ಕಡೆಗೆ ಗಮನ ಕೊಡುತ್ತಾರೆ. ಆದರೆ ಈ ಮಳೆಗಾಲದಲ್ಲಿ ಮನೆಯನ್ನು ಸ್ವಚ್ಛವಾಗಿಟ್ಟುಕೊಳ್ಳುವುದರ ಸುಂದರವಾಗಿ ಕಾಣುವಂತೆಯೂ ಮಾಡಬಹುದು. ನಿಮ್ಮ ಮನೆಯು ಸಣ್ಣದಿದ್ದರೂ ತೊಂದರೆಯಿಲ್ಲ, ಆದರೆ ಈ ಕೆಲವು ಬದಲಾವಣೆಯನ್ನು ಮಾಡಿಕೊಂಡರೆ ಅಂದ ಹೆಚ್ಚುತ್ತದೆ.
Updated on: Jul 19, 2024 | 3:20 PM

ಡೋರ್ ಮ್ಯಾಟ್‌ಗಳು ಮನೆಯ ಅಂದವನ್ನು ಹೆಚ್ಚಿಸುತ್ತದೆ. ಈಗಾಗಲೇ ಪ್ಲಾಸ್ಟಿಕ್, ಜ್ಯೂಟ್, ರಬ್ಬರ್, ಫೈಬರ್ ಸೇರಿದಂತೆ ಆಧುನಿಕ ಟ್ರೆಂಡಿ ಡೋರ್ ಮ್ಯಾಟ್‌ಗಳು ಲಭ್ಯವಿದೆ. ಆದರೆ ಮಳೆಗಾಲದಲ್ಲಿ ಮಳೆ ನೀರನ್ನು ಹೀರುವ ಡೋರ್ ಮ್ಯಾಟ್ ನೊಂದಿಗೆ ವಿವಿಧ ವಿನ್ಯಾಸದ ಡೋರ್ ಮ್ಯಾಟ್ ಗಳ ಆಯ್ಕೆಯಿದ್ದರೆ ಉತ್ತಮ. ಅದಲ್ಲದೇ ಫ್ಲೋರ್ ಮ್ಯಾಟ್ಗಳಲ್ಲಿ ಆ್ಯಕ್ವಾಟ್ರಾಪ್ ಮ್ಯಾಟ್‌ಗಳನ್ನು ಆಯ್ಕೆ ಮಾಡಿಕೊಳ್ಳುವುದು ಸೂಕ್ತವಾಗಿದೆ. ಇದು ತೇವಾಂಶವನ್ನು ಹೀರಿಕೊಳ್ಳುತ್ತದೆ.

ಮಳೆಗಾಲವಾದ ಕಾರಣ ಒದ್ದೆಯಾದ ರೈನ್‌ಕೋಟ್, ಛತ್ರಿಗಳನ್ನು ತಂದು ಅಲ್ಲಲ್ಲಿ ಇಟ್ಟರೆ ಮನೆಯು ಅಂದ ಹಾಳಾಗಬಹುದು. ಸುಂದರವಾಗಿ ಕಾಣುವುದಿಲ್ಲ. ಹೀಗಾಗಿ ಈ ಸಮಯದಲ್ಲಿ ವಾಲ್ ಹುಕ್ಗಳು ಬಳಕೆಗೆ ಬರುತ್ತದೆ. ವೈವಿಧ್ಯಮಯವಾದ ಹುಕ್ ಗಳು ಲಭ್ಯವಿರುವ ಕಾರಣ ಇಷ್ಟವಾದ ಹುಕ್ಗಳನ್ನು ಖರೀದಿ ಮನೆಯ ಸ್ವಚ್ಛತೆಯೊಂದಿಗೆ ಮನೆಯ ಅಂದವು ಹಾಳಾಗದಂತೆ ನೋಡಿಕೊಳ್ಳಬಹುದು.

ಮನೆಯೊಳಗಿನ ವಸ್ತುಗಳನ್ನು ಅಚ್ಚುಕಟ್ಟಾಗಿ ಜೋಡಿಸಿಡುವುದು ಮುಖ್ಯ. ಸಾಮಾನುಗಳನ್ನು ಅಚ್ಚುಕಟ್ಟಾಗಿ ಜೋಡಿಸಿ. ಇದು ಮನೆಯು ಅಂದವಾಗಿ ಕಾಣುವಂತೆ ಮಾಡುತ್ತದೆ. ಮನೆಯ ಸದಸ್ಯರು ಸಾಮಗ್ರಿಗಳನ್ನು ಬಳಸಿದ ಬಳಿಕ ಎಲ್ಲಿ ಇತ್ತೋ ಅದೇ ಸ್ಥಳದಲ್ಲಿ ಆ ಸಾಮಗ್ರಿಗಳನ್ನು ಇಡುವ ಅಭ್ಯಾಸವಿರಲಿ. ವಸ್ತುಗಳ ಸರಿಯಾದ ಜೋಡಣೆಯು ಮನೆಯ ಲುಕನ್ನು ಬದಲಾಯಿಸುತ್ತದೆ.

ಮನೆಯ ಮುಂದೆ ಇರುವ ಹೂದೋಟವನ್ನು ಸಂರಕ್ಷಣೆ ಮಾಡಲು ಒಳ್ಳೆಯ ಸಮಯ ಇದಾಗಿದೆ. ಈ ಸಮಯದಲ್ಲಿ ಗಿಡಗಳಿಲ್ಲದೆ ಹೂಕುಂಡಗಳಿಗೆ ಬೀಜ ಹಾಕುವುದು ಅಥವಾ ಹೂವಿನ ಗಿಡಗಳನ್ನು ನೆಡುವುದಕ್ಕೆ ಈ ಋತುವು ಸೂಕ್ತವಾಗಿದೆ. ಜೊತೆಗೆ ದಟ್ಟವಾಗಿ ಬೆಳೆದಿರುವ ಗಿಡಗಳನ್ನು ಕತ್ತರಿಸಿ ಸ್ವಚ್ಛವಾಗಿಟ್ಟುಕೊಳ್ಳಿ. ಇದು ನಿಮ್ಮ ಮನೆಯ ಮುಂಭಾಗದ ಅಂದವನ್ನು ಹೆಚ್ಚಿಸುತ್ತದೆ.

ಒಂದು ವೇಳೆ ಮನೆಯ ಮುಂಭಾಗದಲ್ಲಿ ಬಾಲ್ಕನಿಯಿದ್ದರೆ, ಅಲ್ಲಿಯೂ ಅಂದವಾಗಿ ಹೂ ಗಿಡಗಳಿಂದ ಅಲಂಕರಿಸಬಹುದು. ಹೂ ಕುಂಡಗಳನ್ನು ಮೇಲೆ ಅಥವಾ ಸಣ್ಣ ಸಣ್ಣ ಗಿಡಗಳನ್ನು ಹ್ಯಾಂಗ್ ಮಾಡಬಹುದು. ಇದು ಮನೆಯ ಸುತ್ತ ಮುತ್ತಲು ಹಚ್ಚ ಹಸಿರಿನ ವಾತಾವರಣವನ್ನು ಉಂಟು ಮಾಡುತ್ತದೆ.




