- TV9 Kannada Photo gallery TN Seetharam daughter Ashwini Aneesh directs The Daily Drop Courtroom Series
‘ದಿ ಡೈಲಿ ಡ್ರಾಪ್’ ಕೋರ್ಟ್ ರೂಮ್ ಸೀರೀಸ್ಗೆ ಟಿಎನ್ ಸೀತಾರಾಮ್ ಪುತ್ರಿ ಅಶ್ವಿನಿ ನಿರ್ದೇಶನ
ಕುತೂಹಲಭರಿತ ಕಥೆ ಇರುವ ಕೋರ್ಟ್ ರೂಮ್ ಸೀರಿಸ್ಗೆ ಟಿಎನ್ ಸೀತಾರಾಮ್ ಅವರ ಪುತ್ರಿ ಅಶ್ವಿನಿ ಅನೀಶ್ ಅವರು ನಿರ್ದೇಶನ ಮಾಡಿದ್ದಾರೆ. ‘ದಿ ಡೈಲಿ ಡ್ರಾಪ್’ ಶೀರ್ಷಿಕೆಯ ಈ ಸೀರೀಸ್ ಅನ್ನು ಯೂಟ್ಯೂಬ್ನಲ್ಲಿ ವೀಕ್ಷಿಸಬಹುದು. ತಂದೆಯ ರೀತಿಯೇ ಮಗಳ ನಿರ್ದೇಶನಕ್ಕೂ ಪ್ರೇಕ್ಷಕರಿಂದ ಮೆಚ್ಚುಗೆ ಸಿಗುತ್ತಿದೆ.
Updated on: Jun 17, 2026 | 5:38 PM

ಕನ್ನಡ ಕಿರುತೆರೆ ಲೋಕದಲ್ಲಿ ಟಿ.ಎನ್. ಸೀತಾರಾಮ್ ಅವರ ಧಾರಾವಾಹಿಗಳಿಗೆ ಬೇರೆಯದ್ದೇ ಆದ ಪ್ರೇಕ್ಷಕ ವರ್ಗವಿದೆ. ಈಗ ಅವರ ಮಗಳು ಕೂಡ ನಿರ್ದೇಶನದ ಹಾದಿಯಲ್ಲಿ ಸಾಗುತ್ತಿದ್ದಾರೆ ಎಂಬುದು ವಿಶೇಷ.

ಟಿ.ಎನ್. ಸೀತಾರಾಮ್ ಅವರ ಪುತ್ರಿ ಅಶ್ವಿನಿ ಅನೀಶ್ ಅವರು ‘ದಿ ಡೈಲಿ ಡ್ರಾಪ್’ ಎಂಬ ಕೋರ್ಟ್ ರೂಮ್ ಸೀರೀಸ್ ನಿರ್ದೇಶನ ಮಾಡಿ ಬಿಡುಗಡೆ ಮಾಡಿದ್ದಾರೆ. ಈ ಸೀರಿಸ್ನಲ್ಲಿ ಆರು ಸಂಚಿಕೆಗಳು ಇವೆ.

‘ತಪಸ್ವಿ ಪ್ರೊಡಕ್ಷನ್’ ಮೂಲಕ ‘ದಿ ಡೈಲಿ ಡ್ರಾಪ್’ ನಿರ್ಮಾಣ ಆಗಿದೆ. ಶ್ರೀನಿವಾಸ ಪ್ರಭು, ಅಶ್ವಿನಿ ಅನೀಶ್, ದೀಪ, ಸಂತೋಷ ಕರ್ಕಿ, ಸುದರ್ಶನ್, ನಮನ, ಪರಮ್, ಪವನ್, ನವನೀತ್ ಚಂದನ್ ಶಂಕರ್ ಮುಂತಾದವರು ನಟಿಸಿದ್ದಾರೆ.

ಮಹೇಶ್ ಪೈ ಕ್ಯಾಮೆರಾ ವರ್ಕ್ ಇರುವ ಈ ಸೀರಿಸ್ಗೆ ಶಿವ ಸಮರ್ಥ್ ಸಂಗೀತ ನಿರ್ದೇಶನ ಮಾಡಿದ್ದಾರೆ. ‘Lifepages’ ಯೂಟ್ಯೂಬ್ ಚಾನೆಲ್ ಮೂಲಕ ಈ ಸೀರಿಸ್ನ ಸಂಚಿಕೆಗಳನ್ನು ನೋಡಬಹುದಾಗಿದೆ.

35ರ ವಯಸ್ಸಿನ ಆಸುಪಾಸಿನ ಮಹಿಳೆಯೊಬ್ಬಳು ಕಾರ್ ಡ್ರೈವ್ ಮಾಡುವಾಗ ನಿಗೂಢವಾಗಿ ಸಾಯುತ್ತಾಳೆ. ಅವಳ ಸಾವಿಗೆ ಕಾರಣ ಬೇರೆಯದ್ದೇ ಇರುತ್ತೆ. ಅದೇನು ಎಂಬುದೇ ಈ ಸೀರೀಸ್ನ ಇಂಟರೆಸ್ಟಿಂಗ್ ಕಥೆ.




