- TV9 Kannada Photo gallery Toxic Song Manamohaka Out: Yash Tara Chemistry and Surprise Entries of Kiara and Nayanthara Viral
Toxic Song: ‘ಮನಮೋಹಕ’ ಹಾಡಿನ ಮಾದಕತೆ ಏರಿಸಿದ ತಾರಾ ಸುತಾರಿಯಾ
Manamohaka Song: ರಾಕಿಂಗ್ ಸ್ಟಾರ್ ಯಶ್ ಅಭಿನಯದ 'ಟಾಕ್ಸಿಕ್' ಚಿತ್ರದ ಎರಡನೇ ಹಾಡು ‘ಮನಮೋಹಕ’ 5 ಭಾಷೆಗಳಲ್ಲಿ ಬಿಡುಗಡೆಯಾಗಿದೆ. ಯಶ್-ತಾರಾ ಸುತಾರಿಯಾ ರೋಮ್ಯಾಂಟಿಕ್ ಕೆಮಿಸ್ಟ್ರಿ ಜೊತೆಗೆ ಕಿಯಾರಾ ಅಡ್ವಾಣಿ ಹಾಗೂ ಲೇಡಿ ಸೂಪರ್‌ಸ್ಟಾರ್ ನಯನತಾರಾ ಅವರ ಸಸ್ಪೆನ್ಸ್ ಎಂಟ್ರಿ ಅಭಿಮಾನಿಗಳಲ್ಲಿ ಕುತೂಹಲ ಮೂಡಿಸಿದೆ.
Updated on:Jul 21, 2026 | 12:28 PM

‘ಟಾಕ್ಸಿಕ್’ ಚಿತ್ರದ ಎರಡನೇ ಮಧುರ ಪ್ರಣಯಗೀತೆ ‘ಮನಮೋಹಕ’ ಇಂದು ಅಧಿಕೃತವಾಗಿ ಬಿಡುಗಡೆಯಾಗಿದ್ದು, ಸಾಮಾಜಿಕ ಜಾಲತಾಣಗಳಲ್ಲಿ ಸಖತ್ ಟ್ರೆಂಡಿಂಗ್ ಸೃಷ್ಟಿಸುವ ಮೂಲಕ ಪ್ರೇಕ್ಷಕರಿಂದ ಭಾರಿ ಮೆಚ್ಚುಗೆಯನ್ನು ಪಡೆದುಕೊಳ್ಳುತ್ತಿದೆ.

ಈ ಅದ್ಭುತವಾದ ಮೆಲೋಡಿ ಹಾಡಿನಲ್ಲಿ ಯಶ್ ಮತ್ತು ಬಾಲಿವುಡ್ ಸುಂದರಿ ತಾರಾ ಸುತಾರಿಯಾ ನಡುವಿನ ರೋಮ್ಯಾಂಟಿಕ್ ಸ್ಕ್ರೀನ್ ಕೆಮಿಸ್ಟ್ರಿ ಪ್ರೇಕ್ಷಕರಿಗೆ ಇಷ್ಟ ಆಗಿದೆ. ಇವರಿಬ್ಬರ ಜೋಡಿಯು ಚಿತ್ರದ ಮೇಲಿನ ನಿರೀಕ್ಷೆಯನ್ನು ಮತ್ತಷ್ಟು ಹೆಚ್ಚಿಸುವಂತೆ ಮಾಡಿದೆ.

ಪ್ರಮೋದ್ ಮರವಂತೆ ಅವರು ಬರೆದಿರುವ ಸಾಹಿತ್ಯಕ್ಕೆ ಸಿದ್ದಾರ್ಥ್ ಬಸರೂರ್ ಅವರ ಕಂಠವು ಅದ್ಭುತವಾಗಿ ಒಪ್ಪಿದ್ದು, ಈ ಹಾಡು ಸಂಗೀತ ಪ್ರಿಯರ ಲೂಪ್ ಲಿಸ್ಟ್ ಸೇರಿ ಧೂಳೆಬ್ಬಿಸುತ್ತಿದೆ. ಐದು ಭಾಷೆಗಳಲ್ಲಿ ಹಾಡು ಬಿಡುಗಡೆ ಕಂಡಿದೆ.

‘ತಬಾಹಿ’ ಹಾಡು ಸಾಕಷ್ಟು ಬೋಲ್ಡ್ ಆಗಿತ್ತು. ಈ ಹಾಡಿನ ಯಶಸ್ಸಿನ ನಂತರ ಬಿಡುಗಡೆಯಾಗಿರುವ ಈ ವಿಭಿನ್ನ ಶೈಲಿಯ ಪ್ರಣಯಗೀತೆಯು ಗಮನ ಸೆಳೆಯುತ್ತಿದೆ. ಗೀತು ಮೋಹನ್‌ದಾಸ್ ಅವರ ಸೃಜನಶೀಲತೆ ಈ ಹಾಡಿನಲ್ಲಿ ಕಾಣಬಹುದಾಗಿದೆ.

ಈ ಹೊಸ ಹಾಡಿನ ದೃಶ್ಯ ವೈಭವವು ಚಿತ್ರಮಂದಿರಗಳಲ್ಲಿ ಅಭಿಮಾನಿಗಳಿಗೆ ರೋಮಾಂಚನ ನೀಡುವುದು ಗ್ಯಾರಂಟಿ ಎಂದು ಹೇಳಲಾಗುತ್ತಿದೆ.ಪ್ಯಾನ್-ಇಂಡಿಯಾ ಮಟ್ಟದಲ್ಲಿ ಸಿದ್ಧವಾಗುತ್ತಿರುವ ಈ ಬಿಗ್ ಬಜೆಟ್ ಸಿನಿಮಾದಲ್ಲಿ ಯಶ್ ಅವರು ದ್ವಿಪಾತ್ರದಲ್ಲಿ ಕಾಣಿಸಿಕೊಳ್ಳುತ್ತಿದ್ದಾರೆ.

ಮಲ್ಟಿಸ್ಟಾರರ್ ತಾರಾಗಣವನ್ನು ಹೊಂದಿರುವ ಟಾಕ್ಸಿಕ್ ಚಿತ್ರದ ‘ಮನಮೋಹಕ’ ಸಾಂಗ್ ಈಗಾಗಲೇ ಯೂಟ್ಯೂಬ್‌ನಲ್ಲಿ ಸಖತ್ ಸೌಂಡ್ ಮಾಡುತ್ತಿದ್ದು, ಬಿಡುಗಡೆಯಾದ ಕೆಲವೇ ಗಂಟೆಗಳಲ್ಲಿ ದಾಖಲೆ ಪ್ರಮಾಣದ ವೀಕ್ಷಣೆ ಹಾಗೂ ಲೈಕ್ಸ್ ಪಡೆದು ಮುನ್ನುಗ್ಗುತ್ತಿರುವುದು ಚಿತ್ರತಂಡಕ್ಕೆ ಸಂತಸ ತಂದಿದೆ.

‘ಟಾಕ್ಸಿಕ್’ ಚಿತ್ರದ ಬಹುಮುಖ್ಯ ತಾರಾಗಣದಲ್ಲಿ ಗುರುತಿಸಿಕೊಂಡಿರುವ ಸೌತ್ ಲೇಡಿ ಸೂಪರ್‌ಸ್ಟಾರ್ ನಯನತಾರಾ ಅವರು ಪ್ರಣಯಗೀತೆಯಲ್ಲಿ ಕಾಣಿಸಿಕೊಂಡಿದ್ದು, ಅವರ ಸಸ್ಪೆನ್ಸ್ ತುಂಬಿದ ಅದ್ಭುತ ಎಂಟ್ರಿಯು ಅಭಿಮಾನಿಗಳಲ್ಲಿ ಸಿನಿಮಾದ ಕಥೆಯ ಬಗ್ಗೆ ಇದ್ದ ಕುತೂಹಲವನ್ನು ಮತ್ತಷ್ಟು ದುಪ್ಪಟ್ಟುಗೊಳಿಸಿದೆ.

ಮೊದಲ ಹಾಡು ‘ತಬಾಹಿ’ಯಲ್ಲಿ ಯಶ್ ಜೊತೆ ಸಖತ್ ಬೋಲ್ಡ್ ಹಾಗೂ ರೋಮ್ಯಾಂಟಿಕ್ ಆಗಿ ಕಾಣಿಸಿಕೊಂಡು ಇಂಟರ್ನೆಟ್‌ನಲ್ಲಿ ತಲ್ಲಣ ಸೃಷ್ಟಿಸಿದ್ದ ಗ್ಲಾಮರಸ್ ನಟಿ ಕಿಯಾರಾ ಅಡ್ವಾಣಿ, ಈಗ ಬಿಡುಗಡೆಯಾಗಿರುವ ‘ಮನಮೋಹಕ’ ಹಾಡಿನಲ್ಲೂ ಕಾಣಿಸಿಕೊಂಡಿದ್ದಾರೆ.
Published On - 12:27 pm, Tue, 21 July 26




