- Kannada News Photo gallery Upendra Shivarajkumar Anushree and other 45 Movie Members went Mumbai For promotions
‘45’ ಚಿತ್ರದ ಪ್ರಚಾರಕ್ಕಾಗಿ ಮುಂಬೈಗೆ ಹಾರಿದ ಶಿವಣ್ಣ, ಉಪೇಂದ್ರ, ಅರ್ಜುನ್ ಜನ್ಯ
ಶಿವರಾಜ್ಕುಮಾರ್ ಹಾಗೂ ಉಪೇಂದ್ರ ‘ಕಬ್ಜ’ ಚಿತ್ರದಲ್ಲಿ ಒಟ್ಟಾಗಿ ನಟಿಸಿದ್ದರು. ಈಗ ಇವರು ‘45’ ಚಿತ್ರದಲ್ಲಿ ಮತ್ತೆ ಒಂದಾಗಿದ್ದಾರೆ. ಇವರ ಜೊತೆ ರಾಜ್ ಬಿ. ಶೆಟ್ಟಿ ಕೂಡ ಸೇರ್ಪಡೆ ಆಗಿದ್ದಾರೆ. ಸಂಗೀತ ಸಂಯೋಜಕ ಅರ್ಜುನ್ ಜನ್ಯ ಅವರು ಈ ಚಿತ್ರವನ್ನು ನಿರ್ದೇಶನ ಮಾಡುತ್ತಿದ್ದಾರೆ.
Updated on:Apr 15, 2025 | 10:42 AM

ಶಿವರಾಜ್ಕುಮಾರ್ ಹಾಗೂ ಉಪೇಂದ್ರ ಅವರದ್ದು ಹಿಟ್ ಕಾಂಬಿನೇಷನ್. ಶಿವರಾಜ್ಕುಮಾರ್ ನಟನೆಯ ‘ಓಂ’ ಚಿತ್ರವನ್ನು ಉಪೇಂದ್ರ ನಿರ್ದೇಶನ ಮಾಡಿದ್ದರು. ಇವರು ಈಗ ‘45’ ಸಿನಿಮಾಗಾಗಿ ಒಂದಾಗಿದ್ದಾರೆ. ಇವರ ಜೊತೆ ರಾಜ್ ಬಿ. ಶೆಟ್ಟಿ ಕೂಡ ಸೇರಿಕೊಂಡಿದ್ದಾರೆ ಅನ್ನೋದು ವಿಶೇಷ.

‘45’ ಚಿತ್ರದ ವಿವಿಧ ಪೋಸ್ಟರ್ಗಳು ಗಮನ ಸೆಳೆದಿವೆ. ಈಗ ಚಿತ್ರದ ಟೀಸರ್ ಕೂಡ ಬಂದಿದ್ದು, ಜನರ ಮೆಚ್ಚುಗೆಗೆ ಪಾತ್ರವಾಗಿದೆ. ಸಿನಿಮಾ ರಿಲೀಸ್ ಆಗೋದು ಆಗಸ್ಟ್ 15ಕ್ಕೆ. ಅದಕ್ಕೂ ಕೆಲವು ತಿಂಗಳು ಮೊದಲೇ ತಂಡದವರು ಸಿನಿಮಾ ಪ್ರಚಾರ ಆರಂಭಿಸಿದ್ದಾರೆ.

ಉಪೇಂದ್ರ, ಶಿವರಾಜ್ಕುಮಾರ್, ಗೀತಾ ಶಿವರಾಜ್ಕುಮಾರ್, ಅನುಶ್ರೀ, ನಿರ್ಮಾಪಕ ಎಂ. ರಮೇಶ್ ರೆಡ್ಡಿ 45 ಚಿತ್ರದ ಪ್ರಚಾರಕ್ಕಾಗಿ ಮುಂಬೈಗೆ ಹೊರಟಿದ್ದಾರೆ. ಆ ಬಳಿಕ ಕೇರಳ ಮೊದಲಾದ ಕಡೆಗಳಲ್ಲಿ ತಂಡ ಸಿನಿಮಾ ಪ್ರಚಾರ ಮಾಡಲಿದೆ ಎಂದು ತಿಳಿದು ಬಂದಿದೆ.

ಉಪೇಂದ್ರ, ಶಿವಣ್ಣ ಹಾಗೂ ಮೊದಲಾದವರು ಬೆಂಗಳೂರು ಎಚ್ಎಎಲ್ ವಿಮಾನ ನಿಲ್ದಾಣದಿಂದ ಖಾಸಗಿ ಜೆಟ್ನಲ್ಲಿ ಮುಂಬೈಗೆ ಪ್ರಯಾಣ ಬೆಳೆಸಿದಿದೆ. ಇದು ಪ್ಯಾನ್ ಇಂಡಿಯಾ ಚಿತ್ರವಾಗಿದ್ದು, ತೆಲುಗು ಹಾಗೂ ಹಿಂದಿ ಭಾಷೆಗಳಲ್ಲೂ ಸಿನಿಮಾ ರಿಲೀಸ್ ಆಗಲಿದೆ.

ಎಂ. ರಮೇಶ್ ರೆಡ್ಡಿ ಅವರು ತಮ್ಮ ‘ಸೂರಜ್ ಪ್ರೊಡಕ್ಷನ್ ’ ಬ್ಯಾನರ್ ಅಡಿಯಲ್ಲಿ ‘45’ ಚಿತ್ರ ನಿರ್ಮಾಣ ಮಾಡಿದ್ದಾರೆ. ಅವರು ಸಿನಿಮಾ ಅದ್ದೂರಿತನಕ್ಕೆ ಯಾವುದೇ ಕೊರತೆ ಆಗದಂತೆ ನೋಡಿಕೊಳ್ಳುತ್ತಾ ಇದ್ದಾರೆ. ಚಿತ್ರಕ್ಕೆ ದೊಡ್ಡ ಮಟ್ಟದಲ್ಲಿ ಪ್ರಚಾರ ನೀಡಲಾಗುತ್ತಿದೆ.
Published On - 10:40 am, Tue, 15 April 25



















