AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

ಅಂಕೋಲಾದ ಕಡಲ ತೀರದಲ್ಲಿ ವಿದೇಶಿ ಹಕ್ಕಿಗಳ ಕಲರವ: ವಲಸೆ ಬಂದಿರೋ ಬಾನಾಡಿಗಳನ್ನೊಮ್ಮೆ ನೋಡಿ

ಕರ್ನಾಟಕದಲ್ಲಿ ಚಳಿ ಆರ್ಭಟ ಜೋರಾಗಿದೆ. ಹಲವು ಜಿಲ್ಲೆಗಳಲ್ಲಿ ಕೊರೆಯುವ ಚಳಿ ಇದ್ದರೆ, ಇತ್ತ ಉತ್ತರ ಕನ್ನಡ ಜಿಲ್ಲೆಯ ಕರಾವಳಿಯಲ್ಲಿ ಮಾತ್ರ ಬೆಚ್ಚಗಿನ ವಾತಾವರಣವಿದೆ. ಹೀಗಾಗಿ ತೀರ ಪ್ರದೇಶಗಳಿಗೆ ವಿದೇಶಿ ಹಕ್ಕಿಗಳು ಹಾರಿ ಬರುತ್ತಿವೆ. ಸದ್ಯ ಕಡಲ ತೀರದಲ್ಲಿ ಸೀಗಲ್​​ಗಳ ಕಲರವ ಮನೆ ಮಾಡಿದೆ. ಇಲ್ಲಿವೆ ಫೋಟೋಸ್​​.

ಸೂರಜ್​, ಮಹಾವೀರ್​ ಉತ್ತರೆ
| Updated By: ಗಂಗಾಧರ​ ಬ. ಸಾಬೋಜಿ|

Updated on: Dec 03, 2025 | 4:18 PM

Share
ಕರ್ನಾಟಕದ ಹಲವು ಜಿಲ್ಲೆಗಳಲ್ಲಿ ಕೊರೆಯುವ ಚಳಿ ಇದ್ದರೆ, ಇತ್ತ ಉತ್ತರ ಕನ್ನಡ ಜಿಲ್ಲೆಯ ಕರಾವಳಿಯಲ್ಲಿ ಚಳಿಯ ಪ್ರಮಾಣ ಕಡಿಮೆ ಇದೆ. ಹೀಗಾಗಿ ತೀರ ಪ್ರದೇಶಗಳಿಗೆ ವಿದೇಶಿ ಹಕ್ಕಿಗಳು ಹಾರಿ ಬರುತ್ತಿವೆ. ಅಂಕೋಲಾದ ಕಡಲ ತೀರಕ್ಕೆ ಸೀಗಲ್​​ಗಳ ಕಲರವ ಮನೆ ಮಾಡಿದೆ.

1 / 6
ರಾಜ್ಯದಲ್ಲಿ ಚಳಿ ಆರ್ಭಟ ಜೋರಾಗಿದೆ. ಆದರೆ ಉತ್ತರ ಕನ್ನಡ ಜಿಲ್ಲೆಯ ಕರಾವಳಿಯಲ್ಲಿ ಮಾತ್ರ ಬೆಚ್ಚಗಿನ ವಾತಾವರಣವಿದ್ದು, ಒಳ್ಳೆಯ ಹವಾಮಾನ ಸೃಷ್ಟಿಯಾಗಿದೆ. ಹೀಗಾಗಿ ಉತ್ತಮ ಹವಾಮಾನ, ಆಹಾರ ಅರಸಿ ಬರುವ ವಿದೇಶಿ ಹಕ್ಕಿಗಳಿಗೆ ಜಿಲ್ಲೆಯ ಕರಾವಳಿ ನೆಲೆ ಕಟ್ಟಿಕೊಟ್ಟಿದೆ.

2 / 6
ಕಾರವಾರ, ಅಂಕೋಲಾ ಭಾಗದ ಕರಾವಳಿ ತೀರಕ್ಕೆ ಇದೀಗ ಸೀಗಲ್​​ಗಳ (ಕಡಲ ಹಕ್ಕಿ) ಹಿಂಡು ಹರಿದು ಬರುತಿದ್ದು, ಕಳೆದ ವರ್ಷಕ್ಕಿಂತ ಈ ಭಾರಿ ಹೆಚ್ಚಿನ ಸಂಖ್ಯೆಯಲ್ಲಿ ಅಂಕೋಲಾದ ಕೇಣಿ, ಕಾರವಾರದ ಕಡಲ ತೀರದಲ್ಲಿ ನೆಲೆಕಂಡುಕೊಂಡಿದ್ದು, ಸಂತಾನೋತ್ಪತ್ತಿ ಹಾಗೂ ಆಹಾರಕ್ಕಾಗಿ ಇಲ್ಲಿ ನೆಲೆ ನಿಂತಿವೆ.

3 / 6
ಪ್ರತಿ ವರ್ಷ ಡಿಸೆಂಬರ್ ಹಾಗೂ ಜನವರಿ ತಿಂಗಳಲ್ಲಿ ಉತ್ತರ ಕನ್ನಡ ಜಿಲ್ಲೆಯ ಕರಾವಳಿಗೆ ಸೀಗಲ್​ಗಳು ಸಾವಿರಾರು ಕಿ.ಮೀ ಕ್ರಮಿಸಿ ಬರುತ್ತವೆ. 50ಕ್ಕೂ ಹೆಚ್ಚು ಪ್ರಭೇದದ ಈ ಸೀಗಲ್​​​ಗಳಲ್ಲಿ ಬಿಳಿ, ಕಪ್ಪು, ಬೂದು ಬಣ್ಣದ ಸೀಗಲ್​​ಗಳು ಜಿಲ್ಲೆಯ ಕರಾವಳಿ ಭಾಗಕ್ಕೆ ವಲಸೆ ಬರುತ್ತವೆ. ಈ ಭಾರಿ ಬೂದು ಬಣ್ಣದ ರೆಕ್ಕೆಯ ಸೀಗಲ್​ಗಳು ಹೆಚ್ಚು ಗುಳೆ ಬಂದಿದ್ದು, ಕಡಲ ತೀರದ ಭಾಗ, ದ್ವೀಪಗಳಲ್ಲಿ ನೆಲೆ ಕಂಡುಕೊಂಡಿವೆ.

4 / 6
ಇನ್ನು ಈ ಭಾಗದಲ್ಲಿ ಸಂತಾನೋತ್ಪತ್ತಿಗೆ ಪೂರಕವಾದ ವಾತಾವರಣ ಮತ್ತು ಆಹಾರ ಹೆಚ್ಚಾಗಿ ಸಿಗುತ್ತಿರುವುದರಿಂದ ಮೂರ್ನಾಲ್ಕು ತಿಂಗಳು ಇದೇ ಭಾಗದಲ್ಲಿ ನೆಲಸಿ ಬಳಿಕ ಮರಿಗಳೊಂದಿಗೆ ಹಾರಿ ಹೋಗುತ್ತವೆ. ಹೀಗಾಗಿ ಇವುಗಳ ನೆಲೆಗಳನ್ನು ಗುರುತಿಸಿ ಆ ಸ್ಥಳಗಳಿಗೆ ತೊಂದರೆಯಾಗದಂತೆ ನೋಡಿಕೊಳ್ಳಬೇಕು ಎಂಬುದು ತಜ್ಞ ಶಿವಕುಮಾರ್ ಹರಗಿ ಅವರು ಹೇಳುತ್ತಾರೆ.

5 / 6
ಸದ್ಯ ಪ್ರತಿ ದಿನ ಸೀಗಲ್​ಗಳು ಮುಂಜಾನೆ ಕಡಲ ತೀರದಲ್ಲಿ ಗುಂಪು ಗುಂಪಾಗಿ ಕಾಣಸಿಗುತ್ತಿದ್ದು, ಪಕ್ಷಿ ಪ್ರಿಯರನ್ನು ತನ್ನತ್ತ ಸೆಳೆಯುವ ಜೊತೆಗೆ ದೂರದ ಪ್ರವಾಸಿಗರನ್ನೂ ಸೆಳೆಯುತ್ತಿದೆ. 

6 / 6